ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಧುಗಿರಿ ಶಾಸಕ ನಮಗೆ ಯಾವುದೇ ಸಹಕಾರ ನೀಡ್ತಿಲ್ಲ: ಸಂಸದ ಬಸವರಾಜ್

|
Google Oneindia Kannada News

ಮಧುಗಿರಿ, ಜುಲೈ 14: ಸುಳ್ಳು ಹೇಳಿಕೊಂಡಿರುವ ಓಡಾಡುವ ಈ ಶಾಸಕ ಈ ತಾಲೂಕಿಗೆ ಏನೂ ಮಾಡುವುದಿಲ್ಲ, ಅಭಿವೃದ್ಧಿ ಕಾರ್ಯಗಳಲ್ಲಿ ನಮ್ಮನ್ನು ಉಪಯೋಗಿಸಿಕೊಳ್ಳುವುದೂ ಇಲ್ಲ ನಮ್ಮ ಹತ್ತಿರಕ್ಕೂ ಬರುವುದಿಲ್ಲ ನಾನು ದೂರನೇ ಇದ್ದುಬಿಡುತ್ತೀನಿ ಎಂದು ಮಧುಗಿರಿ ಶಾಸಕ ವೀರಭದ್ರಯ್ಯ ವಿರುದ್ಧ ಸಂಸದ ಜಿಎಸ್ ಬಸವರಾಜ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Recommended Video

ಮಧುಗಿರಿ ಶಾಸಕರ ವಿರುದ್ದ ತುಮಕೂರು ಸಂಸದ ಗುಡುಗು

ನಮ್ಮ ಶಾಸಕರು ನಮಗೆ ಸಹಕಾರ ನೀಡುವುದಿಲ್ಲ, ಮಾತೆತ್ತಿದರೆ ಪ್ರಧಾನಮಂತ್ರಿ ರೋಜ್‌ಗಾರ್ ಯೋಜನೆ ನಾವೇ ಜಾರಿಗೆ ತಂದಿದ್ದು ಎಂದು ಹೇಳುತ್ತಾರೆ, ನಾನು ಇಲ್ಲದ ವೇಳೆ ಎಲ್ಲವನ್ನು ನಾನೇ ಮಾಡಿಸಿದ್ದು ಎಂದು ಹೇಳಿಕೊಂಡು ತಿರುಗಾಡುತ್ತಾರೆ ಎಂದು ಹೇಳಿದರು.

ಜಿಲ್ಲೆಗೆ 7 ಸಾವಿರ ಕಿಟ್ ಬಂದಿದ್ದು, ಮಧುಗಿರಿ ತಾಲೂಕಿಗೆ 3 ಸಾವಿರ ಕಿಟ್ ನೀಡಿದ್ದೇವೆ ಎಂದು ಬಸವರಾಜ್ ತಿಳಿಸಿದ್ದಾರೆ. ಮಧುಗಿರಿಯಲ್ಲಿ ಚುನಾವಣೆಯಲ್ಲಿ ಅತಿ ಹೆಚ್ಚು ಮತ ನೀಡಿದ್ದರು, ಹೀಗಾಗಿ ಮಧುಗಿರಿಗೆ 3 ಸಾವಿರ ಕಿಟ್ ಕಳುಹಿಸಲಾಗಿದೆ. ದೇಶದಲ್ಲಿನ 80 ಕೋಟಿ ಬಡವರಿಗಾಗಿ ಕಿಟ್ ವಿತರಣೆ ಮಾಡುತ್ತಿದ್ದು, 3 ಲಕ್ಷ ಕೋಟಿ ಅನುದಾನವನ್ನು ಪ್ರಧಾನಿ ನೀಡಿದ್ದಾರೆ ಎಂದರು.

 Madhugiri MLA Is Not Co-operating With Us Says MP Basavaraj

ಮಧುಗಿರಿ ತಾಲೂಕು ಅತ್ಯಂತ ಬರಪೀಡಿತ ತಾಲೂಕಾಗಿದ್ದು, ಉದ್ಯೋಗ ಹೆಚ್ಚಳಕ್ಕಾಗಿ ಜವಳಿ ಪಾರ್ಕ್ ನಿರ್ಮಾಣಕ್ಕೆ ಮುಂದಾಗಿದ್ದು, ಅದಕ್ಕಾಗಿ 1 ಸಾವಿರ ಎಕರೆ ಭೂಪ್ರದೇಶದಲ್ಲಿ ಜವಳಿ ಪಾರ್ಕ್ ನಿರ್ಮಾಣ ಮಾಡಲಾಗುವುದು, ಇದರಿಂದ 50-80 ಸಾವಿರ ಜನರಿಗೆ ಉದ್ಯೋಗ ಸಿಗಲಿದೆ, ಎಲ್ಲರೂ 3ನೇ ಅಲೆ ತಡೆಯಲು ತಪ್ಪದೆ ಲಸಿಕೆ ಪಡೆಯುವಂತೆ ತಿಳಿಸಿದರು.

ನೀರಾವರಿಗೆ ಆದ್ಯತೆ: ತಾಲೂಕಿನ ಎತ್ತಿನಹೊಳೆ ನೀರಾವರಿ ಯೋಜನೆಗಾಗಿ ಮಾಜಿ ಶಾಸಕ ಕೆಎನ್ ರಾಜಣ್ಣನ ಕಾಲದಲ್ಲಿ 1.5 ಟಿಎಂಸಿ ನೀರು ಲಭ್ಯವಿತ್ತು. ಈಗ ಅದನ್ನು 4.5 ಟಿಎಂಸಿಗೆ ಹೆಚ್ಚಿಸಲಾಗಿದ್ದು, ಇಲ್ಲಿನ ಶಾಸಕ ನನಗೆ ಯಾವುದೇ ಸಹಕಾರ ನೀಡುತ್ತಿಲ್ಲ, ಕೇಂದ್ರ ಸರ್ಕಾರದ ಯೋಜನೆಗಳನ್ನು ರಾಜ್ಯ ಸರ್ಕಾರದ್ದೆಂದು ಪ್ರಚಾರ ಪಡೆಯುತ್ತಿದ್ದಾರೆ.

ಅವರು ಯಾರಿಂದ ಶಾಸಕನಾಗಿದ್ದು ಎಂಬುದನ್ನು ಮರೆತಂತಿದೆ, ಸಂಸದರು ವಿಧಾನಸಭೆ ಚುನಾವಣೆಯಲ್ಲಿ ತಾವು ಯಾರ ಸಹಕಾರದಿಂದ ಶಾಸಕರಾಗಿದ್ದು ಎಂಬುದನ್ನು ನೆನಪಿಸಿಕೊಳ್ಳಲಿ ಎಂದು ವಾಗ್ದಾಳಿ ನಡೆಸಿದರು. ವಿಡಿಯೋ ನೋಡಿ..

English summary
MP Basavaraj Says Madhugiri MLA Veerabhadraiah Is not cooperating with Us.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X