ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಾವಗಡದ ಬೃಹತ್‌ ಸೊಲಾರ್‌ ಪಾರ್ಕ್‌ಗೆ 'ಟೈಟಾನಿಕ್' ಹೀರೊ ಮೆಚ್ಚುಗೆ

By Manjunatha
|
Google Oneindia Kannada News

ಬೆಂಗಳೂರು, ಮಾರ್ಚ್‌ 21: ತುಮಕೂರು ಜಿಲ್ಲೆಯ ಪಾವಗಡದಲ್ಲಿ ಇತ್ತೀಚೆಗೆ ಉದ್ಘಾಟನೆ ಕಂಡ ಬೃಹತ್ ಸೋಲಾರ್ ಪಾರ್ಕ್‌ ವಿಶ್ವದ ಗಮನ ಸೆಳೆದಿದೆ.

ಅಮೆರಿಕದ ಖ್ಯಾತ ದಿನಪತ್ರಿಕೆಗಳಲ್ಲಿ ಒಂದಾದ ಲಾಸ್ ಎಂಜಲಿಸ್ ಟೈಮ್ಸ್‌ ಪಾವಗಡದ ಬೃಹತ್ ಸೊಲಾರ್ ಪಾರ್ಕ್‌ ಬಗ್ಗೆ ವಿಸ್ತೃತ ವರದಿ ಪ್ರಕಟಿಸಿದ್ದು, ಟೈಟಾನಿಕ್ ಚಿತ್ರದ ಮೂಲಕ ಪ್ರಪಂಚದೆಲ್ಲೆಡೆ ಮನೆ ಮಾತಾದ ಆಸ್ಕರ್ ವಿಜೇತ ಹಾಲಿವುಡ್‌ ನಟ ಲಿಯೊನಾರ್ಡೊ ಡಿ ಕಾಪ್ರಿಯೊ ಕೂಡ ಕರ್ನಾಟಕ ಸರ್ಕಾರದ ಈ ಪ್ರಯತ್ನಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

ವಿಶ್ವದ ಅತಿದೊಡ್ಡ ಸೋಲಾರ್ ಪಾರ್ಕ್ ವಿಶೇಷತೆಗಳುವಿಶ್ವದ ಅತಿದೊಡ್ಡ ಸೋಲಾರ್ ಪಾರ್ಕ್ ವಿಶೇಷತೆಗಳು

ಲಾಸ್ ಎಂಜಲಿಸ್ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿಯ ವೆಬ್‌ ಲಿಂಕ್‌ ಅನ್ನು ತಮ್ಮ ಟ್ವಿಟ್ಟರ್ ಖಾತೆಯಿಂದ ರಿಟ್ವೀಟ್ ಮಾಡಿರುವ ಲಿಯೊನಾರ್ಡೊ ಡಿ ಕಾಪ್ರಿಯೊ ವಿಶ್ವದೆಲ್ಲೆಡೆಯ ಜನಗಳಿಗೆ ಕರ್ನಾಟಕದ ಅತ್ಯುತ್ತಮ ಪ್ರಯತ್ನದ ಮಾಹಿತಿ ಪಸರಿಸುವಂತೆ ಮಾಡಿದ್ದಾರೆ. ಜಾಗತಿಕ ತಾಪಮಾನದ ವಿರುದ್ಧ ಆಂಧೋಲನದ ರಾಯಭಾರಿ ಆಗಿರುವ ಲಿಯೊನಾರ್ಡೊ ಡಿ ಕ್ಯಾಪ್ರಿಯೊ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಜಾಗತಿಕ ತಾಪಮಾನ ಸಂಬಂಧಿ ಸುದ್ದಿಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.

Los Angeles times published report about Karnatakas Solar Park

ಲಾಸ್ ಏಂಜಲಿಸ್ ಟೈಮ್ಸ್‌ ಪತ್ರಿಕೆಯು ಪಾವಗಡದ ಸೋಲಾರ್ ಪಾರ್ಕ್‌ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದು, 'ಅಮೆರಿಕದ ಅಧ್ಯಕ್ಷ ಟ್ರಂಪ್ ಅವರು ಫ್ರಾನ್ಸ್‌ ಒಪ್ಪಂದವನ್ನು ಕಡಿದುಕೊಂಡು, ಶಕ್ತಿ ಸಂಪನ್ಮೂಲವಾಗಿ ಕಲ್ಲಿದ್ದಲನ್ನು ಹೆಚ್ಚು ಬಳಸಲು ಉತ್ತೇಜಿಸುತ್ತಿರುವ ಹೊತ್ತಿನಲ್ಲಿ ಭಾರತದ ದಕ್ಷಿಣ ರಾಜ್ಯ ಕರ್ನಾಟಕದ ಪಾವಗಡ ಎಂಬಲ್ಲಿ 20 ಚದರ ಮೈಲಿಯಲ್ಲಿ ಬೃಹತ್ ಸೊಲಾರ್ ನಿರ್ಮಿಸಿ ಪುನರ್‌ನವೀಕರಣ ಹೊಂದುವ ಸಂಪನ್ಮೂಲಗಳತ್ತ ಭಾರತ ದೃಷ್ಠಿ ಹರಿಸಿರುವುದಾಗಿ ಸಾರಿದೆ' ಎಂದು ಬರೆಯಲಾಗಿದೆ.

ಶಶಾಂಕ್ ಬೆಂಗಾಲಿ ಎಂಬ ಭಾರತೀಯರು ಲಾಸ್‌ ಏಂಜಲ್ಸ್‌ ಟೈಮ್ಸ್‌ ನಲ್ಲಿ ಈ ಲೇಖನ ಬರೆದಿದ್ದು ವಿಶ್ವದ ಅತಿ ದೊಡ್ಡ ಸೊಲಾರ್ ಪಾರ್ಕ್‌ 2000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಗುರಿ ಹೊಂದಿದ್ದು, ಸುಮಾರು 700000 ಮನೆಗಳಿಗೆ ವಿದ್ಯುತ್ ಸೌಲಭ್ಯ ಒದಗಿಸಲಿದೆ ಎಂದು ಬರೆದಿದ್ದಾರೆ.

ಲಾಸ್ ಏಂಜಲಿಸ್ ಟೈಮ್ಸ್‌ನಲ್ಲಿ ಸರ್ಕಾರದ ಕಾರ್ಯಕ್ರಮದ ವರದಿ ಬಂದಿರುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

English summary
America's one of the well known News media Los Angeles times published a detail report about Karnataka's Pavagada Solar Park. Hollywood famous actor Leonardo DiCaprio retweeted it in his account.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X