ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪುತ್ರ ವಿಜಯೇಂದ್ರನನ್ನು ಮತ್ತೆ ಆಶೀರ್ವದಿಸಿ ಶಿರಾಗೆ ಕಳುಹಿಸಿಕೊಟ್ಟ ಸಿಎಂ ಯಡಿಯೂರಪ್ಪ

|
Google Oneindia Kannada News

ಹದಿನೈದು ಕ್ಷೇತ್ರಗಳ ಅಸೆಂಬ್ಲಿ ಉಪಚುನಾವಣೆ ಎದುರಾದಾಗ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ವಿಜಯ ಪತಾಕೆ ಹಾರಿಸುವುದು ಅಸಾಧ್ಯವೆಂದು ಬಿಜೆಪಿ ಬಹುತೇಕ ಕೈಚೆಲ್ಲಿತ್ತು. ಕಾರಣ, ಬಿಜೆಪಿಗೆ ನೆಲೆಯೇ ಇಲ್ಲದ ಕ್ಷೇತ್ರ ಅದಾಗಿತ್ತು. ಆದರೆ, ಅಲ್ಲಿ ನಾರಾಯಣ ಗೌಡ್ರು 9,731 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

ಕೆ.ಆರ್.ಪೇಟೆಯಲ್ಲಿ, ಬಿಜೆಪಿ ಕ್ಷೇತ್ರದ ಚುನಾವಣಾ ಉಸ್ತುವಾರಿಯಾಗಿ ಡಿಸಿಎಂ ಡಾ.ಅಶ್ವಥ್ ನಾರಾಯಣ ಮತ್ತು ಸಿ.ಪಿ.ಯೋಗೇಶ್ವರ್ ಅವರನ್ನೂ ನೇಮಿಸಿದ್ದರೂ, ಅಲ್ಲಿ, ಭರ್ಜರಿಯಾಗಿ ವರ್ಕೌಟ್ ಆಗಿದ್ದದು, ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ಬಿ.ವೈ.ವಿಜಯೇಂದ್ರರವರ ಗೇಂ ಪ್ಲ್ಯಾನ್.

ಉಪ ಚುನಾವಣೆ: ಒಟ್ಟು 37 ಅಭ್ಯರ್ಥಿಗಳು ಕಣದಲ್ಲಿ!ಉಪ ಚುನಾವಣೆ: ಒಟ್ಟು 37 ಅಭ್ಯರ್ಥಿಗಳು ಕಣದಲ್ಲಿ!

ವಿಜಯೇಂದ್ರಗೆ, ಬಿಜೆಪಿ ದೆಹಲಿ ಮಟ್ಟದಲ್ಲಿ ಉತ್ತಮ ಹೆಸರು ತಂದು ಕೊಟ್ಟ ಗೆಲುವು ಅದಾಗಿತ್ತು. ಜೊತೆಗೆ, ರಾಜ್ಯ ಮಟ್ಟದಲ್ಲೂ ವಿಜಯೇಂದ್ರ ತನ್ನ ಪ್ರಬಾವವನ್ನು ಹೆಚ್ಚಿಸಿಕೊಂಡಿದ್ದರು. ಈಗ, ಮತ್ತೆರಡು ಕ್ಷೇತ್ರಗಳ ಉಪಚುನಾವಣೆ ಎದುರಾಗಿದೆ. ಅದರಲ್ಲಿ ಒಂದು, ಹೇಗೆ ಕೆ.ಆರ್.ಪೇಟೆಯೋ, ಹಾಗೆಯೇ ಬಿಜೆಪಿಗೆ ನೆಲೆಯಿಲ್ಲದ ತುಮಕೂರು ಜಿಲ್ಲೆಯ ಶಿರಾ ಚುನಾವಣೆ.

ಜನರ ತೀವ್ರ ಆಕ್ರೋಶಕ್ಕೆ ಗುರಿಯಾಯ್ತು ಡಿಸಿಎಂ ಗೋವಿಂದ್ ಕಾರಜೋಳ್ ನಡೆ!ಜನರ ತೀವ್ರ ಆಕ್ರೋಶಕ್ಕೆ ಗುರಿಯಾಯ್ತು ಡಿಸಿಎಂ ಗೋವಿಂದ್ ಕಾರಜೋಳ್ ನಡೆ!

ಬಿಜೆಪಿ ಅಭ್ಯರ್ಥಿ ಡಾ.ರಾಜೇಶ್ ಗೌಡ ನಾಮಪತ್ರ ಸಲ್ಲಿಸುವ ಒಂದು ದಿನದ ಮುನ್ನ ಬಿ.ವೈ.ವಿಜಯೇಂದ್ರ ಎಂಡ್ ಟೀಂ ಶಿರಾದಲ್ಲಿ ಬೀಡುಬಿಟ್ಟಿದೆ. ಶಿರಾ ಚುನಾವಣೆ ಮುಗಿಯುವವರೆಗೆ ಇತ್ತ ಬರಬೇಡ ಎಂದು ತಂದೆ, ಸಿಎಂ ಯಡಿಯೂರಪ್ಪ ಫರ್ಮಾನು ಹೊರಡಿಸಿ ವಿಜಯೇಂದ್ರನನ್ನು ಆಶೀರ್ವದಿಸಿ ಕಳುಹಿಸಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ವಿಜಯೇಂದ್ರ ಅವರ ಪ್ರಮುಖ ಟಾರ್ಗೆಟ್ ಏನು? ಮುಂದೆ ಓದಿ..

70ವರ್ಷಗಳ ಬಳಿಕೆ ಶಿರಾದಲ್ಲಿ ಬಿಜೆಪಿ ಪತಾಕೆಯನ್ನು ಹಾರಿಸುತ್ತೇವೆ

70ವರ್ಷಗಳ ಬಳಿಕೆ ಶಿರಾದಲ್ಲಿ ಬಿಜೆಪಿ ಪತಾಕೆಯನ್ನು ಹಾರಿಸುತ್ತೇವೆ

''ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳ ಸವಾಲನ್ನು ಬಿಜೆಪಿ ಸ್ವೀಕರಿಸಿದೆ. ಕ್ಷೇತ್ರದ ಅಭಿವೃದ್ಧಿಯೇ ನಮ್ಮ ಮಂತ್ರ, ನಾವು ಜಾತಿ ಆಧಾರದ ಮೇಲೆ ಚುನಾವಣೆ ಎದುರಿಸುವುದಿಲ್ಲ. ಎಪ್ಪತ್ತು ವರ್ಷಗಳ ಬಳಿಕೆ ಶಿರಾದಲ್ಲಿ ಬಿಜೆಪಿ ಪತಾಕೆಯನ್ನು ಹಾರಿಸುತ್ತೇವೆ'' ಇದು ವಿಜಯೇಂದ್ರ ಅವರ ಸ್ಪಷ್ಟ ಕಾನ್ಫಿಡೆನ್ಸ್ ಲೆವೆಲ್ ಮಾತು. ಅಭ್ಯರ್ಥಿ ರಾಜೇಶ್ ಗೌಡ ಪರವಾಗಿ, ಈಗಾಗಲೇ ವಿಜಯೇಂದ್ರ ಆಖಾಡಕ್ಕೆ ಇಳಿದಾಗಿದೆ.

ವಿಜಯೇಂದ್ರ ಹೋದಲ್ಲಿ, ಬಂದಲ್ಲಿ ಅವರಿಗೆ ಸಿಗುತ್ತಿರುವ ಜನಬೆಂಬಲ

ವಿಜಯೇಂದ್ರ ಹೋದಲ್ಲಿ, ಬಂದಲ್ಲಿ ಅವರಿಗೆ ಸಿಗುತ್ತಿರುವ ಜನಬೆಂಬಲ

ಇದುವರೆಗೆ ಇದ್ದ ಪರಿಸ್ಥಿತಿಯೇ ಬೇರೆ, ವಿಜಯೇಂದ್ರ ಅವರ ಎಂಟ್ರಿಯ ನಂತರದ ಪರಿಸ್ಥಿತಿಯೇ ಬೇರೆ ಎನ್ನುತ್ತಾರೆ ಸ್ಥಳೀಯರು. ಜೆಡಿಎಸ್ ಮತ್ತು ಕಾಂಗ್ರೆಸ್ ಮುಖಂಡರಿಗೆ ವಿಜಯೇಂದ್ರ ಎಂಟ್ರಿ ನಿದ್ದೆಗೆಡಿಸಿದೆ. ಯಾಕೆಂದರೆ, ಇದುವರೆಗೆ ವಿಜಯೇಂದ್ರ ಹೋದಲ್ಲಿ, ಬಂದಲ್ಲಿ ಅವರಿಗೆ ಸಿಗುತ್ತಿರುವ ಜನಬೆಂಬಲ.

ಕೆ.ಆರ್.ಪೇಟೆಯಲ್ಲಿ ಬಳಸಿದ ತಂತ್ರ

ಕೆ.ಆರ್.ಪೇಟೆಯಲ್ಲಿ ಬಳಸಿದ ತಂತ್ರ

ಕೆ.ಆರ್.ಪೇಟೆಯಲ್ಲಿ ಬಳಸಿದ ತಂತ್ರವನ್ನೇ ವಿಜಯೇಂದ್ರ ಎಂಡ್ ಟೀಂ ಶಿರಾದಲ್ಲೂ ಪ್ರಯೋಗಿಸಲು ಮುಂದಾಗಿದೆ ಎನ್ನುವ ಮಾತು ಕೇಳಿಬರುತ್ತಿದೆ. ಅದು ಯುವಕರನ್ನು ತನ್ನತ್ತ ಸೆಳೆಯುವುದು. ವಿಜಯೇಂದ್ರ ಅವರನ್ನು ನೋಡಲು ಪಕ್ಷದ ಕಾರ್ಯಕರ್ತರು, ಜನರು ಮುಗಿಬೀಳುತ್ತಿರುವುದು ಹಾಗೂ ಅವರ ಪರವಾಗಿ ಘೋಷಣೆಗಳನ್ನು ಕೂಗುವ ದೃಶ್ಯ ಇಲ್ಲಿ ಸಾಮಾನ್ಯವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಇಲ್ಲಿ ಅಬ್ಬರದ ಪ್ರಚಾರವನ್ನು ಮಾಡುತ್ತಿದ್ದರೂ, ಯುವಕರನ್ನು ಸೆಳೆಯುವ ಕೆಲಸಕ್ಕೆ ಇನ್ನೂ ಮುಂದಾಗಿಲ್ಲ.

ಕ್ಷೇತ್ರದ ಶಾಸಕರ ನಿಧನದಿಂದ ಚುನಾವಣೆ ನಡೆಯುತ್ತಿರುವುದು

ಕ್ಷೇತ್ರದ ಶಾಸಕರ ನಿಧನದಿಂದ ಚುನಾವಣೆ ನಡೆಯುತ್ತಿರುವುದು

ಕೆ.ಆರ್.ಪೇಟೆಗೆ ಹೋಲಿಸಿದರೆ, ಶಿರಾ ಚುನಾವಣೆ ವಿಭಿನ್ನವಾದದ್ದು. ಅದು ಆಪರೇಶನ್ ಕಮಲದಿಂದ ಚುನಾವಣೆ ನಡೆದದ್ದು, ಇಲ್ಲಿ, ಕ್ಷೇತ್ರದ ಶಾಸಕರ ನಿಧನದಿಂದ ಚುನಾವಣೆ ನಡೆಯುತ್ತಿರುವುದು. ಹಾಗಾಗಿ, ಇಲ್ಲಿ ಅನುಕಂಪ ಎನ್ನುವುದು ವರ್ಕೌಟ್ ಆಗುವ ಸಾಧ್ಯತೆಯಿಲ್ಲದಿಲ್ಲ. ಆದರೆ, ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ, ಈಗ ಕ್ವಾರಂಟೈನ್ ನಲ್ಲಿ ಇರುವುದರಿಂದ, ಪ್ರಚಾರ ಇನ್ನೂ ವೇಗವನ್ನು ಪಡೆದುಕೊಂಡಿಲ್ಲ.

ಪುತ್ರ ವಿಜಯೇಂದ್ರನನ್ನು ಮತ್ತೆ ಆಶೀರ್ವದಿಸಿ ಶಿರಾಗೆ ಕಳುಹಿಸಿದ ಸಿಎಂ ಬಿಎಸ್ವೈ

ಪುತ್ರ ವಿಜಯೇಂದ್ರನನ್ನು ಮತ್ತೆ ಆಶೀರ್ವದಿಸಿ ಶಿರಾಗೆ ಕಳುಹಿಸಿದ ಸಿಎಂ ಬಿಎಸ್ವೈ

ಯುವಕರನ್ನು ಸೆಳೆಯುವಲ್ಲಿ ವಿಜಯೇಂದ್ರ ಮುಂದಾಗಿರುವುದು ಒಂದು ಕಡೆ. ನಮ್ಮದೇ ಸರಕಾರವಿದೆ ಎಂದು ಕ್ಷೇತ್ರದ ಅಭಿವೃದ್ದಿಯ ವಿಚಾರವನ್ನು ಮುನ್ನಲೆಗೆ ತರುತ್ತಿರುವುದು ಇನ್ನೊಂದು ಕಡೆ. ಇದರ ಜೊತೆಗೆ, ಆಡಳಿತ ಯಂತ್ರದ ಉಪಯೋಗವನ್ನು ಪಡೆದುಕೊಳ್ಳುವ ಸವಲತ್ತು ಹೇಗೂ ಇದೆ. ಇದರೆ ಜೊತೆಗೆ, ಇಲ್ಲಿ ದಶಕಗಳಿಂದ ಪ್ರತಿಸ್ಪರ್ಧಿಗಳಾದ ಕಾಂಗ್ರೆಸ್-ಜೆಡಿಎಸ್ಸಿನ ಮತಬ್ಯಾಂಕ್ ಡಿವೈಡ್ ಆಗುತ್ತೆ ಎನ್ನುವ ಲೆಕ್ಕಾಚಾರವನ್ನು ಬಿ.ವೈ.ವಿಜಯೇಂದ್ರ ಹೊಂದಿದ್ದಾರೆ ಎನ್ನುವ ಮಾತು ಚಾಲ್ತಿಯಲ್ಲಿದೆ.

English summary
Like In KR Pete Bypoll, BY Vijayendra Game Plan Work Out In Sira By Elections Too.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X