ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುಣಿಗಲ್ ಶಾಸಕ ಡಾ ರಂಗನಾಥ್‌ಗೆ ಕೊರೊನಾ ಸೋಂಕು ದೃಢ

|
Google Oneindia Kannada News

ತುಮಕೂರು, ಜುಲೈ 6: ಕುಣಿಗಲ್ ಶಾಸಕ ಡಾ ರಂಗನಾಥ್‌ಗೆ ಕೊರೊನಾ ವೈರಸ್‌ ಸೋಂಕು ಇರುವುದು ದೃಢವಾಗಿದೆ. ಸದ್ಯ ಮಣಿಪಾಲ್ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ನಿನ್ನೆ ಡಾ ರಂಗನಾಥ್‌ ಅವರಿಗೆ ಕೊರೊನಾ ಪರೀಕ್ಷೆ ನಡೆದಿತ್ತು. ಗಂಟಲು ದ್ರವ ಪರೀಕ್ಷೆ ಮಾಡಲಾಗಿತ್ತು. ಇಂದು ಕೊರೊನಾ ವರದಿ ಬಂದಿದ್ದು, ಪಾಸಿಟಿವ್ ಎಂದು ತಿಳಿದು ಬಂದಿದೆ. ಸಾಕಷ್ಟು ಎಚ್ಚರಿಕೆ ವಹಿಸಿದರೂ, ಸುರಕ್ಷತ ಕ್ರಮಗಳನ್ನು ತೆಗೆದುಕೊಂಡರೂ ಕೊರೊನಾ ವಕ್ಕರಿಸಿದೆ.

ಕೊರೊನಾ ಲಕ್ಷಣವಿದ್ದರೂ, ತುಮಕೂರು ಜಿಲ್ಲಾಡಳಿತ ಬೇಜವಾಬ್ದಾರಿಕೊರೊನಾ ಲಕ್ಷಣವಿದ್ದರೂ, ತುಮಕೂರು ಜಿಲ್ಲಾಡಳಿತ ಬೇಜವಾಬ್ದಾರಿ

ಸದ್ಯ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇನ್ನೂ 15 ದಿನಗಳ ಕಾಲ ಕ್ಷೇತ್ರಕ್ಕೆ ಭೇಟಿ ನೀಡಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. ಕೊರೊನಾ ವೈರಸ್‌ ಹಬ್ಬಿರುವ ಪ್ರದೇಶಗಳಿಗೆ ಜನಪ್ರತಿನಿಧಿಗಳು, ಅಧಿಕಾರಿಗಳು, ಪೊಲೀಸರು, ಆಶಾ ಕಾರ್ಯಕರ್ತೆಯರು, ಕೊರೊನಾ ವಾರಿಯರ್ಸ್‌ ಹೋಗಲೇ ಬೇಕಾಗಿದ್ದು, ಈ ವೇಳೆ ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆ.

Kunigal MLA DR Ranganath Tested Positive For Coronavirus

ಮಂಗಳೂರು ಶಾಸಕ ಭರತ್‌ ಶೆಟ್ಟಿಯವರಿಗೆ ಸಹ ಕೆಲ ದಿನಗಳ ಹಿಂದೆ ಕೊರೊನಾ ಪಾಸಿಟಿವ್ ವರದಿ ಬಂದಿತ್ತು. ಇದೀಗ ಮಾಜಿ ಸಚಿವ ಸಾರಾ ಮಹೇಶ್ ಕೂಡ ಕ್ವಾರಂಟೈನ್‌ನಲ್ಲಿ ಇದ್ದಾರೆ. ಮಹಿಳಾ ತಹಶೀಲ್ದಾರ್‌ಗೆ ಕೊರೊನಾ ಸೋಂಕು ದೃಢವಾಗಿದ್ದು, ಸಾರಾ ಮಹೇಶ್‌ರನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದೆ.

ಕರ್ನಾಟಕದಲ್ಲಿ ಕೊರೊನಾ ಕಾಟ ಹೆಚ್ಚಾಗಿದೆ. ನಿನ್ನೆ ಬರೋಬ್ಬರಿ 1925 ಮಂದಿಗೆ ಸೋಂಕು ಹರಡಿದೆ.

English summary
Coronavirus in tumakuru, Kunigal mla dr ranganath tested positive for coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X