ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಚಿಲ್ಲರೆ' ಕಾರಣಕ್ಕೆ ಪ್ರಯಾಣಿಕನ ಮೇಲೆ ತೀವ್ರ ಹಲ್ಲೆ ನಡೆಸಿದ ಬಸ್ ನಿರ್ವಾಹಕ

|
Google Oneindia Kannada News

ತುಮಕೂರು, ಡಿಸೆಂಬರ್ 02: ಚಿಲ್ಲರೆ ವಿಷಯಕ್ಕೆ ಪ್ರಯಾಣಿಕನೊಂದಿಗೆ ಜಗಳ ತೆಗೆದ ಕೆ.ಎಸ್‌.ಆರ್‌.ಟಿ.ಸಿ ಬಸ್ ಕಂಡಕ್ಟರ್ ಒಬ್ಬ ಪ್ರಯಾಣಿಕನ ಬುರುಡೆ ಒಡೆಯುವಂತೆ ಹೊಡೆದಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

ಪ್ರಯಾಣಿಕರೊಬ್ಬರು ತುಮಕೂರಿನ ಕೊರಟಗೆರೆ ಯಲ್ಲಿ ಸರ್ಕಾರಿ ಬಸ್ಸು ಹತ್ತಿ ನೆಲಮಂಗಲ ತಾಲ್ಲೂಕು ಮಾದನಾಯಕನಹಳ್ಳಿಗೆ ಟಿಕೆಟ್ ಪಡೆದಿದ್ದಾರೆ.

ಬೆಂಗಳೂರು-ಪಂಪಾ ಸರ್ಕಾರಿ ಬಸ್ ವೇಳಾಪಟ್ಟಿ, ದರಬೆಂಗಳೂರು-ಪಂಪಾ ಸರ್ಕಾರಿ ಬಸ್ ವೇಳಾಪಟ್ಟಿ, ದರ

ಬಸ್ಸು ಇಳಿಯುವ ಮುನ್ನಾ ಚಿಲ್ಲರೆ ಹಣ ವಾಪಸ್ ನೀಡುವಂತೆ ಪ್ರಯಾಣಿಕ ಕಂಡಕ್ಟರ್ ಅನ್ನು ಒತ್ತಾಯಿಸಿದ್ದಾರೆ. ಆದರೆ ಚಿಲ್ಲರೆ ಕಾರಣ ಪ್ರಯಾಣಿಕನನ್ನು ಕಾಯುವಂತೆ ಹೇಳಿದ್ದಾರೆ.

KSRTC Bus Conducter Hit Passenger For Asking Balance Money

ಇಳಿಯುವ ನಿಲ್ದಾಣವು ಹತ್ತಿರ ಬಂದ ಕಾರಣ ಪದೇ-ಪದೇ ಪ್ರಯಾಣಿಕನು ಕಂಡಕ್ಟರ್ ಅನ್ನು ಚಿಲ್ಲರೆಗಾಗಿ ಪ್ರಯಾಣಿಕ ಒತ್ತಾಯಿಸಿದ್ದಾನೆ. ಇದರಿಂದ ಕುಪಿತಗೊಂಡ ಕಂಡಕ್ಟರ್ ಟಿಕೆಟ್ ನೀಡುವ ಯಂತ್ರದಿಂದಲೇ ಪ್ರಯಾಣಿಕನ ತಲೆಗೆ ಹೊಡೆದಿದ್ದಾನೆ.

ಫಾಸ್‌ಟ್ಯಾಗ್ ಕಡ್ಡಾಯ; ಕೆಎಸ್ಆರ್‌ಟಿಸಿ, ಬಿಎಂಟಿಸಿ ಕಥೆ ಏನು? ಫಾಸ್‌ಟ್ಯಾಗ್ ಕಡ್ಡಾಯ; ಕೆಎಸ್ಆರ್‌ಟಿಸಿ, ಬಿಎಂಟಿಸಿ ಕಥೆ ಏನು?

ಕಂಡಕ್ಟರ್ ಹೊಡೆದ ಹೊಡೆತಕ್ಕೆ ಪ್ರಯಾಣಿಕನ ತಲೆ ಒಡೆದು ತೀವ್ರ ರಕ್ತಸ್ರಾವವಾಗಿದೆ. ಪ್ರಯಾಣಿಕನ ಶರ್ಟ್‌ ಎಲ್ಲ ರಕ್ತಮಯವಾಗಿದೆ. ಘಟನೆ ನಂತರ ಬಸ್ಸಿನಲ್ಲಿದ್ದ ಇತರ ಪ್ರಯಾಣಿಕರು ಕಂಡಕ್ಟರ್‌ ಅನ್ನು ಬಸ್ಸಿನಿಂದ ಕೆಳಗೆ ಇಳಿಸಿ ಥಳಿಸಿ, ಬಟ್ಟೆ ಹರಿದಿದ್ದಾರೆ. ಅದೇ ಬಸ್ಸಿನಲ್ಲಿ ಗಾಯಗೊಂಡ ಪ್ರಯಾಣಿಕನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತಸೆ ಕೊಡಿಸಲಾಗಿದೆ.

English summary
KSRTC bus conductor hit a passenger for asking change. Incident happened in Tumkur. passenger has been hospitalized.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X