ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬ್ರಾಹ್ಮಣರ ಕುರಿತ ಸ್ವಾಮೀಜಿ ಹೇಳಿಕೆಗೆ ಮಠದ ಸ್ಪಷ್ಟನೆ

|
Google Oneindia Kannada News

ತುಮಕೂರು, ಜನವರಿ 14 : ಹೆಬ್ಬೂರಿನ ಕೋದಂಡಾಶ್ರಮ ಮಠದ ಪೀಠಾಧಿಪತಿ ಮಾಧವಾಶ್ರಮ ಸ್ವಾಮೀಜಿ ನೀಡಿರುವ ಹೇಳಿಕೆ ಬಗ್ಗೆ ಚರ್ಚೆ ನಡೆಯುತ್ತಿದೆ. ತುಮಕೂರಿನಲ್ಲಿರುವ ಕೋದಂಡಾಶ್ರಮ ಮಠ ಸ್ವಾಮೀಜಿಗಳ ಹೇಳಿಕೆ ಕುರಿತು ಸ್ಪಷ್ಟೀಕರಣವನ್ನು ನೀಡಿದೆ.

ಶನಿವಾರ ಮಾಧವಾಶ್ರಮ ಸ್ವಾಮೀಜಿ ಬೆಂಗಳೂರಿನಲ್ಲಿ ಮಂಗಳೂರಿನ ಸ್ಥಾನಿಕ ಬ್ರಾಹ್ಮಣ ಮಹಾಮಂಡಲವು ಆಯೋಜಿಸಿದ್ದ 'ವಿಶ್ವ ಸ್ಥಾನಿಕ ಬ್ರಾಹ್ಮಣ ಸಮಾವೇಶ' ಉದ್ಘಾಟಿಸಿದ್ದರು. ಈ ಸಮಾವೇಶದಲ್ಲಿ ಸ್ವಾಮೀಜಿ ಹೇಳಿದ್ದ ಮಾತಿನ ಬಗ್ಗೆ ಚರ್ಚೆಗಳು ಆರಂಭವಾಗಿತ್ತು.

ಬ್ರಾಹ್ಮಣ ದಂಪತಿಗೆ ಮಾಂಸದೂಟ ಕೊಟ್ಟು ಕಷ್ಟಕ್ಕೆ ಸಿಲುಕಿದ ಏರ್‌ಇಂಡಿಯಾಬ್ರಾಹ್ಮಣ ದಂಪತಿಗೆ ಮಾಂಸದೂಟ ಕೊಟ್ಟು ಕಷ್ಟಕ್ಕೆ ಸಿಲುಕಿದ ಏರ್‌ಇಂಡಿಯಾ

"ಶಿವಳ್ಳಿ ಬ್ರಾಹ್ಮಣ ಹುಡುಗರು ಸಾಯಂಕಾಲವಾಗುತ್ತಿದ್ಧಂತೆ ಕುಡಿದು ಮೋರಿಯಲ್ಲಿ ಬೀಳುತ್ತಿರುವ ಬಗ್ಗೆ ಆ ಸಮಾಜದವರೇ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ನಮ್ಮ ಸಮಾಜದವರು ಆ ಹಂತಕ್ಕೆ ತಲುಪದಿರುವುದಕ್ಕೆ ಸಮಾಧಾನಪಟ್ಟುಕೊಳ್ಳಬೇಕು" ಎಂದು ಮಾಧವಾಶ್ರಮ ಸ್ವಾಮೀಜಿ ಹೇಳಿದ್ದರು.

ಸ್ಪೀಕರ್ ಓಂ ಬಿರ್ಲಾ, ಬ್ರಾಹ್ಮಣ ಅನ್ನೋ ಕಾರಣಕ್ಕೆ ನಿಮಗೆ ಗೌರವ ನೀಡುತ್ತಿಲ್ಲ'ಸ್ಪೀಕರ್ ಓಂ ಬಿರ್ಲಾ, ಬ್ರಾಹ್ಮಣ ಅನ್ನೋ ಕಾರಣಕ್ಕೆ ನಿಮಗೆ ಗೌರವ ನೀಡುತ್ತಿಲ್ಲ'

Kodandashrama Math Clarification For Swamiji Statement

ಪತ್ರಿಕೆಗಳಲ್ಲಿ ಈ ಸ್ವಾಮೀಜಿಗಳ ಹೇಳಿಕೆ ಬಗ್ಗೆ ವರದಿ ಪ್ರಕಟವಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆಗಳು ಆರಂಭವಾಗಿದ್ದವು. ಈ ಹೇಳಿಕೆ ಕುರಿತು ಮಠದ ವ್ಯವಸ್ಥಾಪಕ ಸುಬ್ರಮಣ್ಯ ಶಾಸ್ತ್ರಿ ಸ್ಪಷ್ಟನೆ ನೀಡಿದ್ದಾರೆ.

ಬ್ರಾಹ್ಮಣರು ಹುಟ್ಟಿನಿಂದಲೇ ಶ್ರೇಷ್ಠರು: ಸ್ಪೀಕರ್ ಓಂ ಬಿರ್ಲಾಬ್ರಾಹ್ಮಣರು ಹುಟ್ಟಿನಿಂದಲೇ ಶ್ರೇಷ್ಠರು: ಸ್ಪೀಕರ್ ಓಂ ಬಿರ್ಲಾ

"ಬ್ರಾಹ್ಮಣ ಸಮುದಾಯದ ಯುವಕರು ದುಶ್ಚಟಗಳಿಗೆ ದಾಸರಾಗುತ್ತಿರುವ ಬಗ್ಗೆ ಸ್ವಾಮೀಜಿ ಪ್ರಸ್ತಾಪಿಸಿದ್ದರು. ಯಾವುದೇ ಸಮಾಜವನ್ನು ಟೀಕಿಸುವುದು ಸ್ವಾಮೀಜಿ ಉದ್ದೇಶವಾಗಿರಲಿಲ್ಲ" ಎಂದು ಹೇಳಿದ್ದಾರೆ.

English summary
Clarification for the Tumakuru Kodandashrama Math for swamiji statement about Shivalli Brahmin.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X