ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇವೇಗೌಡರು, ಕಾಂಗ್ರೆಸ್ ಹೈ ಕಮಾಂಡ್ ಮೇಲೆ ಅಬ್ಬರಿಸಿದ ಮಧುಗಿರಿ ರಾಜಣ್ಣ

By ಕುಮಾರಸ್ವಾಮಿ
|
Google Oneindia Kannada News

Recommended Video

ಎಚ್ ಡಿ ದೇವೇಗೌಡ ಗೆಲ್ಲೋದು ಖಂಡಿತ ಎಂದ ಕೈ ನಾಯಕ ಬಿಜೆಪಿ ವಿರುದ್ಧ ಗರಂ | Oneindia kannada

ತುಮಕೂರು, ಏಪ್ರಿಲ್ 21: ನಿಷ್ಠಾವಂತ ಕಾಂಗ್ರೆಸ್ ಮುಖಂಡರನ್ನು ಅಮಾನತು ಮಾಡಿದ್ದಾರೆ. ಈ ಅಮಾನತನ್ನು ವಾಪಸ್ ಪಡೆಯದಿದ್ದರೆ ಮಧುಗಿರಿಯಲ್ಲಿ ಕಾಂಗ್ರೆಸ್ ಅನ್ನು ಶೂನ್ಯ ಮಾಡ್ತೀವಿ ಎಂದು ಮಧುಗಿರಿಯ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಅಬ್ಬರಿಸಿದ್ದಾರೆ. ಉಚ್ಚಾಟಿತ ಅಧ್ಯಕ್ಷರ ಸಭೆ ಬಳಿಕ ಅವರು ಮಾತನಾಡಿದ್ದಾರೆ.

ನಾನೂ ಉಚ್ಚಾಟಿತರ ಜೊತೆ ಇರುತ್ತೀನಿ. ಅಮಾನತು ಆದೇಶ ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಸಾಮೂಹಿಕ ರಾಜೀನಾಮೆ ನೀಡುತ್ತೇವೆ. ಜಿಲ್ಲಾ ಪಂಚಾಯಿತಿ,‌ ತಾಲೂಕು ಪಂಚಾಯಿತಿ ಹಾಗೂ ಪುರಸಭೆ ಸದಸ್ಯರು ಸಾಮೂಹಿಕ ರಾಜೀನಾಮೆ ನೀಡುತ್ತಾರೆ ಎಂದು ಅವರು ಎಚ್ಚರಿಕೆ ನೀಡಿದರು.

ಹೈಕಮಾಂಡ್ ಆದೇಶ ಪಾಲಿಸಿದ್ದೇನೆ ದುರಂತ ನಾಯಕನಾಗಿ ಇರುತ್ತೇನೆ:ಮುದ್ದಹನುಮೇಗೌಡಹೈಕಮಾಂಡ್ ಆದೇಶ ಪಾಲಿಸಿದ್ದೇನೆ ದುರಂತ ನಾಯಕನಾಗಿ ಇರುತ್ತೇನೆ:ಮುದ್ದಹನುಮೇಗೌಡ

ಕಾಂಗ್ರೆಸ್ ಉಳಿಯಬೇಕು ಅಂದರೆ ಹೈಕಮಾಂಡ್ ಸುಮ್ಮನಿರಬೇಕು. ಕಾಂಗ್ರೆಸ್ ಕಳೆಯಬೇಕು ಅಂದರೆ ಏನು ಬೇಕಾದರೂ ಮಾಡಲಿ. ಏನು ಇವರದ್ದು ಒಂದೇ ಅಂಗಡಿನಾ? ಸಾಮಾನು ಸಿಗುವ ಅಂಗಡಿ ಬಹಳಷ್ಟು ಇವೆ. ಎಲ್ಲಿ ಸಾಮಾನು ಸಿಗುತ್ತದೋ ಅಲ್ಲಿಯೇ ತಗೊಳ್ತೀವಿ ಎಂದಿದ್ದಾರೆ.

KN Rajanna- GS Basavaraju

ಅಮಾನತು ಆಗಿರುವವರು ಬಿಜೆಪಿ ಪರ ಕೆಲಸ ಮಾಡಿದ್ದಾರೆ ಅನ್ನೋದಕ್ಕೆ ಏನಿದೆ ಪುರಾವೆ? ಮಧುಗಿರಿಯಲ್ಲಿ ದೇವೇಗೌಡರಿಗೆ ಒಂದು ಲಕ್ಷ ಲೀಡ್ ಕೊಡ್ತೀವಿ. ಕೊರಟಗೆರೆಯಲ್ಲಿ ಒಂದೂವರೆ ಲಕ್ಷ ಮುನ್ನಡೆ ಕೊಡ್ತೀವಿ. ಒಟ್ಟಾರೆ 'ದೇವೇಗೌಡ ಮಯ' ಮಾಡ್ತೀವಿ ಎಂದು ಕೆ.ಎನ್.ರಾಜಣ್ಣ ಹೇಳಿದ್ದಾರೆ.

ಇನ್ನು ಕಾಂಗ್ರೆಸ್ ಪಕ್ಷವನ್ನು ಬಿಡುವ ಬಗ್ಗೆ ಇರುವ ಸುದ್ದಿಗೆ ಉತ್ತರ ನೀಡಿದ ಅವರು, ಕಾಂಗ್ರೆಸ್ ಪಕ್ಷವು ಎಲ್ಲವೂ ಕೊಟ್ಟಿದೆ. ನಾನು ಯಾಕೆ ಬಿಜೆಪಿಗೆ ಹೋಗಲಿ? ಬಿಜೆಪಿ ಅಭ್ಯಥಿ೯ ಜಿ.ಎಸ್.ಬಸವರಾಜು ಭೇಟಿಗೆ ರಾಜಕೀಯದ ಅರ್ಥ ಕಲ್ಪಿಸುವುದು ಸರಿಯಲ್ಲ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಎಷ್ಟೋ ಬಾರಿ ಮನೆಗೆ ಬಂದಿದ್ದಾರೆ. ಹಾಗಂತ ಬಿಜೆಪಿಗೆ ಸೇರಿದೆನಾ ಎಂದು ಪ್ರಶ್ನಿಸಿದ್ದಾರೆ.

ತುಮಕೂರು ಕಾಂಗ್ರೆಸ್ ಬಂಡಾಯ ಶಮನ : ರಾಜಣ್ಣ ನಾಮಪತ್ರ ವಾಪಸ್!ತುಮಕೂರು ಕಾಂಗ್ರೆಸ್ ಬಂಡಾಯ ಶಮನ : ರಾಜಣ್ಣ ನಾಮಪತ್ರ ವಾಪಸ್!

ವಿಶ್ವಾಸಕ್ಕೆ, ಸ್ನೇಹಕ್ಕೆ ನಾನು ಬೆಲೆ ಕೊಡ್ತೀನಿ. ಎಂಟು ವಿಧಾನಸಭಾ ಕ್ಷೇತ್ರದಲ್ಲೂ ಮೈತ್ರಿ ಅಭ್ಯಥಿ೯ ಗೆ ಮುನ್ನಡೆ ಬರುತ್ತದೆ. ದೇವೇಗೌಡ ರನ್ನು ನಾನಲ್ಲ, ಜನ ಗೆಲ್ಲಿಸುವುದು. ಆ ಜನರಲ್ಲಿ ನಾನೂ ಒಬ್ಬ ಅಷ್ಟೇ. ನಾನು ಯಾವುದೇ ಪಕ್ಷಕ್ಕೆ ಹೋಗೋದಿಲ್ಲ. ಬಿಜೆಪಿ ಬಗ್ಗೆ ನನ್ನದೇ ಆದ ನಿಲುವಿದೆ. ಬಿಜೆಪಿಗೆ ಹೋಗುವುದಾದರೆ ಯಾವಾಗಲೋ ಹೋಗ್ತಾ ಇದ್ದೆ ಎಂದಿದ್ದಾರೆ.

ನಾನು ಕಾಂಗ್ರೆಸ್ ನಲ್ಲೇ ಇರುತ್ತೀನಿ ಬಿಜೆಪಿ ಯಾಕೆ ಹೋಗಲಿ? ಅಲ್ಲಿಗೆ ಹೋಗುವಂಥದ್ದನ್ನು ಕಾಂಗ್ರೆಸ್ ನವರು ಏನು ಮಾಡಿದ್ದಾರೆ? ಕೇಳಿದ್ದೆಲ್ಲ ಕೊಟ್ಟಿದ್ದಾರೆ. ನನಗೆ ಆಕ್ರೋಶವೂ ಇಲ್ಲ, ಕೋಪವೂ ಇಲ್ಲ. ನಾವೇ ಕಾಂಗ್ರೆಸ್. ದೇವೇಗೌಡರು ಎಲ್ಲಿ ಬೇಕಾದರೂ ನಿಲ್ಲಲಿ. ಆದರೆ ಹಾಲಿ ಸಂಸದರಿಗೆ ಟಿಕೆಟ್ ತಪ್ಪಿಸಿ ನಿಲುತ್ತಾರೆ ಅಂದರೆ ಸ್ವಲ್ಪವಾದರೂ ಮನುಷ್ಯತ್ವ ಬೇಡವಾ ಅವರಿಗೆ ಎಂದು ಪ್ರಶ್ನೆ ಮಾಡಿದ್ದಾರೆ.

ಹೈಕಮಾಂಡ್ ತೀಮಾ೯ನ ತೆಗೆದುಕೊಂಡಿದ್ದಾರೆ ಅಂತ ಸುಮ್ಮನೆ ಇರಬೇಕಾಯಿತು. ಹೈಕಮಾಂಡ್ ತೀಮಾ೯ನ ಇಲ್ಲದಿದ್ದರೆ ನಮ್ಮ ವಿರೋಧ ಇದ್ದೇ ಇರುತ್ತಿತ್ತು ಎಂದಿದ್ದಾರೆ.

English summary
Tumakuru: KN Rajanna threatened Congress high command, will do Congress zero in Madhugiri if leaders suspend order not taken back.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X