ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿರಾ ಉಪಚುನಾವಣೆ: ಕಾಂಗ್ರೆಸ್ ನೆಮ್ಮದಿಗೆ ಭಂಗ ತಂದ 'ಪವಿತ್ರ ಸ್ನೇಹ'

|
Google Oneindia Kannada News

ಜೆಡಿಎಸ್ ಶಾಸಕ ಸತ್ಯನಾರಾಯಣ ಅವರ ನಿಧನದಿಂದ ತೆರವಾಗಿರುವ ಶಿರಾ ಅಸೆಂಬ್ಲಿಯ ಉಪಚುನಾವಣೆಯ ಕಾವು ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ನಾಮಪತ್ರವನ್ನು ಸಲ್ಲಿಸಿದ್ದಾಗಿದೆ. ಆದರೆ..

ಸ್ಥಳೀಯ ಮುಖಂಡರೋರ್ವರು ಬಿಜೆಪಿಗೆ ಸೇರ್ಪಡೆಗೊಂಡ ನಂತರ, ಅವರೇ ಸಂಭಾವ್ಯ ಅಭ್ಯರ್ಥಿಯಾಗುವ ಸಾಧ್ಯತೆ ಇರುವುದರಿಂದ, ಗೆದ್ದೇ ಗೆಲ್ಲುತ್ತೇವೆ ಎನ್ನುವ ಕಾಂಗ್ರೆಸ್ಸಿನ ಆತ್ಮವಿಶ್ವಾಸಕ್ಕೆ ಒಂದು ಮಟ್ಟಿಗೆ ಪೆಟ್ಟುಬಿದ್ದಿದೆ. ಯಾಕೆಂದರೆ, ಇದರ ಹಿಂದಿನ ಮರ್ಮವನ್ನು ಕಾಂಗ್ರೆಸ್ಸಿಗರು ಅರಿಯದೇ ಇರುವುದು.

ಪುತ್ರನ ಗೆಳೆಯನನ್ನು, ಸಿದ್ದರಾಮಯ್ಯ ಬಿಜೆಪಿಗೆ ಕಳುಹಿಸಿರುವ ಮರ್ಮ ಕಾಂಗ್ರೆಸ್ಸಿಗರೂ ಬಲ್ಲರು!ಪುತ್ರನ ಗೆಳೆಯನನ್ನು, ಸಿದ್ದರಾಮಯ್ಯ ಬಿಜೆಪಿಗೆ ಕಳುಹಿಸಿರುವ ಮರ್ಮ ಕಾಂಗ್ರೆಸ್ಸಿಗರೂ ಬಲ್ಲರು!

ಟಿಕೆಟ್ ನೀಡುವಲ್ಲಿ ಗೊಂದಲವಿಲ್ಲದೇ ಎಲ್ಲವೂ ಸಸೂತ್ರವಾಗಿ ನಡೆಯುತ್ತಿದೆ ಎನ್ನುವಷ್ಟರಲ್ಲಿ ರಾಜೇಶ್ ಗೌಡ, ಬಿಜೆಪಿಗೆ ಸೇರ್ಪಡೆಗೊಂಡಿರುವುದು. ಈ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾಡಿರುವ ಟ್ವೀಟ್, ಇದಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಪಕ್ಷದ ಮುಖಂಡರನ್ನು ಗೊಂದಲಕ್ಕೀಡು ಮಾಡಿದೆ.

ಇದಾದ ನಂತರ, ಕೆಪಿಸಿಸಿ ಉಸ್ತುವಾರಿ ರಣದೀಪ್ ಸುರ್ಜೇವಾಲ ಟಿಕೆಟ್ ನೀಡುವ ವಿಚಾರದಲ್ಲಿ ಡಿಕೆಶಿ ಜೊತೆಗೆ ಅಪಸ್ವರ ಎತ್ತಿದ್ದು, ಕಾಂಗ್ರೆಸ್ ಮುಖಂಡರನ್ನು ಇನ್ನಷ್ಟು ತಲೆಕೆಡೆಸಿಕೊಳ್ಳುವಂತೆ ಮಾಡಿದೆ. ಕಾಂಗ್ರೆಸ್ ನೆಮ್ಮದಿಗೆ ಭಂಗ ತಂದ 'ಪವಿತ್ರ ಸ್ನೇಹ'? ಮುಂದೆ ಓದಿ..

ಶಿರಾ ಉಪಚುನಾವಣೆ: ಬಿಜೆಪಿ, ಕಾಂಗ್ರೆಸ್ಸಿನಲ್ಲಿ ರಣೋತ್ಸಾಹ, ಆದರೆ ಜೆಡಿಎಸ್..? ಶಿರಾ ಉಪಚುನಾವಣೆ: ಬಿಜೆಪಿ, ಕಾಂಗ್ರೆಸ್ಸಿನಲ್ಲಿ ರಣೋತ್ಸಾಹ, ಆದರೆ ಜೆಡಿಎಸ್..?

ಸ್ಥಳೀಯ ಮುಖಂಡ ರಾಜೇಶ್ ಗೌಡ

ಸ್ಥಳೀಯ ಮುಖಂಡ ರಾಜೇಶ್ ಗೌಡ

ಶಿರಾ ಸ್ಥಳೀಯ ಮುಖಂಡ ರಾಜೇಶ್ ಗೌಡ, ಬಿಜೆಪಿಗೆ ಸೇರ್ಪಡೆಗೊಂಡ ನಂತರ ಕಾಂಗ್ರೆಸ್ ನಲ್ಲಿ ಒಬ್ಬರು ಇನ್ನೊಬ್ಬರನ್ನು ಸಂಶಯದಿಂದ ನೋಡುವಂತಾಗಿದೆ. ಇದಕ್ಕೆಲ್ಲಾ ಪ್ರಮುಖ ಕಾರಣವಾಗಿರುವುದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾಡಿದ ಒಂದು ಟ್ವೀಟ್ ಮತ್ತು ಅದರ ಹಿಂದೆ ಮುಂದೆ ನಡೆಯುತ್ತಿರುವ ಚರ್ಚೆ.

ಎಚ್ಡಿಕೆ ಮಾಡಿದ ಟ್ವೀಟ್ ಕಾಂಗ್ರೆಸ್ಸಿಗರ ನೆಮ್ಮದಿ ಕೆಡಿಸಿದೆ

ರಾಜೇಶ್ ಗೌಡ ಮತ್ತು ಸಿದ್ದರಾಮಯ್ಯನವರ ಪುತ್ರ ಡಾ. ಯತೀಂದ್ರ ಬ್ಯೂಸಿನೆಸ್ ಪಾಟ್ನರ್ಸ್. ಈ ವಿಚಾರವನ್ನು ಇಟ್ಟುಕೊಂಡು ಎಚ್ಡಿಕೆ ಮಾಡಿದ ಟ್ವೀಟ್ ಕಾಂಗ್ರೆಸ್ಸಿಗರ ನೆಮ್ಮದಿ ಕೆಡಿಸಿದೆ. "ನನಗೂ ಪಕ್ಷಾತೀತವಾಗಿ ಹಿರಿಯ, ಕಿರಿಯ ಸ್ನೇಹಿತರಿದ್ದಾರೆ. ಪವಿತ್ರ ಸ್ನೇಹವನ್ನು ನಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿಲ್ಲ. ಆದರೆ,ಸಿದ್ದರಾಮಯ್ಯರವರಿಗೆ ಇದೊಂದು ಅಂಟುಜಾಡ್ಯ ಎಂಬುದನ್ನು ಸಾಬೀತು ಪಡಿಸುತ್ತಲೆ ಬಂದಿದ್ದಾರೆ. ಉಪಚುನಾವಣೆ ಘೋಷಣೆಯಾದ ನಂತರ ಪುತ್ರನ ಗೆಳೆಯನನ್ನು ಬಿಜೆಪಿಗೆ ಕಳುಹಿಸಿರುವ ಮರ್ಮವನ್ನು ಕಾಂಗ್ರೆಸ್ಸಿಗರೂ ಬಲ್ಲರು" - ಇದು ಕುಮಾರಸ್ವಾಮಿ ಮಾಡಿದ ಟ್ವೀಟ್.

ಕೆಪಿಸಿಸಿ ಉಸ್ತುವಾರಿ ರಣದೀಪ್ ಸುರ್ಜೇವಾಲ, ಡಿಕೆಶಿಗೆ ಮಾಡಿದ ಫೋನ್

ಕೆಪಿಸಿಸಿ ಉಸ್ತುವಾರಿ ರಣದೀಪ್ ಸುರ್ಜೇವಾಲ, ಡಿಕೆಶಿಗೆ ಮಾಡಿದ ಫೋನ್

ಇದಾದ ನಂತರ, ಕೆಪಿಸಿಸಿ ಉಸ್ತುವಾರಿ ರಣದೀಪ್ ಸುರ್ಜೇವಾಲ, ಡಿಕೆಶಿಗೆ ಮಾಡಿದ ಫೋನ್ ಕಾಲ್. ಒಂಬತ್ತು ಬಾರಿ ಚುನಾವಣೆಗೆ ನಿಂತವರಿಗೆ ಮತ್ತೆ ಯಾಕೆ ಟಿಕೆಟ್ ನೀಡಿದ್ದೀರಿ. ರಾಜೇಶ್ ಗೌಡಗೆ ಯಾಕೆ ಟಿಕೆಟ್ ನೀಡಲಿಲ್ಲ. ಕಾಮನ್ ಸೆನ್ಸ್ ಬೇಡವೇ ಎನ್ನುವ ಸುರ್ಜೇವಾಲ ಅವರ ಮಾತು ಕಾಂಗ್ರೆಸ್ಸಿನಲ್ಲಿ ಅಶಾಂತಿ ಮೂಡಿಸಿದೆ. ಈ ವಿಚಾರವನ್ನು ಡಿಕೆಶಿ, ಸಿದ್ದರಾಮಯ್ಯಗೆ ಹೇಳಿದ್ದು ಬಹಿರಂಗವಾದ ನಂತರ, ಸಿದ್ದರಾಮಯ್ಯ ಅಷ್ಟೇ ವೇಗದಲ್ಲಿ ಅದನ್ನು ತಣ್ಣಗಾಗಿಸುವ ಪ್ರಯತ್ನವನ್ನು ಮಾಡಿದ್ದರು.

ಸಿದ್ದರಾಮಯ್ಯ ಏನಾದರೂ ಗೇಂ ಆಡುತ್ತಿದ್ದಾರಾ

ಸಿದ್ದರಾಮಯ್ಯ ಏನಾದರೂ ಗೇಂ ಆಡುತ್ತಿದ್ದಾರಾ

ಇಲ್ಲಿ ಸಿದ್ದರಾಮಯ್ಯ ಏನಾದರೂ ಗೇಂ ಆಡುತ್ತಿದ್ದಾರಾ ಎನ್ನುವ ಸಂಶಯ ಕಾಂಗ್ರೆಸ್ಸಿಗರಿಗೆ ಮೂಡಲು ಆರಂಭವಾದದ್ದು ಎಚ್ಡಿಕೆಯ 'ಪವಿತ್ರ ಸ್ನೇಹ' ಟ್ವೀಟ್ ನಂತರ. ಇನ್ನೊಂದು, ರಣದೀಪ್ ಸುರ್ಜೇವಾಲಾಗೆ ರಾಜೇಶ್ ಗೌಡ ಬಗ್ಗೆ ಮಾಹಿತಿ ನೀಡಿದವರಾರು? ಮಾಹಿತಿ ನೀಡಿದವರು ರಾಜ್ಯ ಕಾಂಗ್ರೆಸ್ ನವರೇ ಇರಬೇಕಲ್ಲವೇ ಎನ್ನುವುದು ಇನ್ನೊಂದು ಗೊಂದಲ. ಈ ಎಲ್ಲಾ ವಿಚಾರಗಳು, ಉಪಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಹಿನ್ನಡೆಯಾಗಲಿದೆಯಾ? ಕಾದು ನೋಡಬೇಕಿದೆ.

English summary
Karnataka Congress Leaders In Full Of Confusion Over HDK Tweet And Randeep Surjewala Call to DK Shivakumar,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X