ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೆಡಿಎಸ್ ಬದಲು ಕಾಂಗ್ರೆಸ್ ಗುರುತು ತೋರಿಸಿದ ಸಿಬ್ಬಂದಿ

|
Google Oneindia Kannada News

ತುಮಕೂರು, ಮೇ 12: ಜೆಡಿಎಸ್‌ ಬದಲು ಕಾಂಗ್ರೆಸ್ ಚಿನ್ಹೆ ತೋರಿಸಿದ ಮತಗಟ್ಟೆ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ವೃದ್ಧೆಯೊಬ್ಬರು, ಸಿಬ್ಬಂದಿ ವಿರುದ್ಧ ದೂರು ನೀಡಲು ನಿರ್ಧರಿಸಿದ್ದಾರೆ.

ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಕಾಟಗೊಂಡನಹಳ್ಳಿಯ ಮತಗಟ್ಟೆಯಲ್ಲಿ ಈ ಘಟನೆ ನಡೆದಿದೆ.

LIVE: ಇದುವರೆಗೆ ಶೇ. 10.51 ರಷ್ಟು ಮತದಾನ ದಾಖಲು LIVE: ಇದುವರೆಗೆ ಶೇ. 10.51 ರಷ್ಟು ಮತದಾನ ದಾಖಲು

ಮತಚಲಾಯಿಸಲು ಬಂದ ವೃದ್ಧೆಯೊಬ್ಬರಿಗೆ ಇವಿಎಂನಲ್ಲಿನ ಆಯ್ಕೆಗಳು ಸರಿಯಾಗಿ ತಿಳಿಯಲಿಲ್ಲ. ಜೆಡಿಎಸ್‌ಗೆ ಮತನೀಡಲು ಬಯಸಿದ್ದ ಅವರು ತೆನೆಹೊತ್ತ ಮಹಿಳೆಯ ಗುರುತು ಎಲ್ಲಿದೆ ಎಂಬುದನ್ನು ಮತಗಟ್ಟೆ ಸಿಬ್ಬಂದಿಯನ್ನು ಕೇಳಿದ್ದರು. ಸಿಬ್ಬಂದಿ ಜೆಡಿಎಸ್‌ನ ಗುರುತಿನ ಬದಲು ಕಾಂಗ್ರೆಸ್ ಗುರುತು ತೋರಿಸಿದ್ದಾರೆ ಎಂದು ವೃದ್ಧೆ ಆರೋಪಿಸಿದ್ದಾರೆ.

karnataka assembly elections 2018 Senior Citizen woman anger over election staff

ಸಿಬ್ಬಂದಿಯ ವರ್ತನೆಯಿಂದ ಕೋಪಗೊಂಡಿರುವ ವೃದ್ಧೆ, ಅವರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

In Pics: ಮತದಾನ ಪರ್ವದಲ್ಲಿ ಮತದಾರ ಮಹಾಪ್ರಭು

ಮಧುಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಎಂ.ವಿ. ವೀರಭದ್ರಯ್ಯ, ಕಾಂಗ್ರೆಸ್‌ನ ಕೆ.ಎನ್. ರಾಜಣ್ಣ ಮತ್ತು ಬಿಜೆಪಿಯ ಎಸ್‌.ಇ. ರಮೇಶ್ ಕಣದಲ್ಲಿದ್ದಾರೆ.

English summary
karnataka assembly elections 2018: A senior citizen woman got anger on a election staff, for showing her congress symbol to vote when she asked to show Jds symbol as she was not able to find out it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X