• search
  • Live TV
ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಂಗಭೂಮಿಯ 'ಬೆಳಕು' ಮುಸ್ತಾಫ ಇನ್ನು ನೆನಪು ಮಾತ್ರ

By Mahesh
|

ಬೆಂಗಳೂರು, ಆ.6: ಆತ ಎಲ್ಲರ ಮೆಚ್ಚುಗೆ ಗಳಿಸಿದ ಯುವ ಕಲಾವಿದ. ಹತ್ತು ಹಲವು ರಂಗ ಪ್ರಯೋಗಗಳಿಗೆ ಬೆಳಕಿನ ಚಿತ್ತಾರ ಮೂಡಿಸಿದ್ದ. ಮಗುವಿಗೆ ನಾಮಕರಣ ಮಾಡಿ ಮಂಗಳವಾರ ಬೆಂಗಳೂರಿಗೆ ಬರುತ್ತ್ತಿದ್ದ ಬ್ಯಾರಿ ಮುಸ್ತಫಾ ತಿಪಟೂರು ಬಳಿ ರಸ್ತೆ ಆಪಘಾತದಲ್ಲಿ ಸಾವನ್ನಪ್ಪಿದ್ದ ಸುದ್ದಿ ಕನ್ನಡ ನಾಟಕ ರಂಗಕ್ಕೆ ಆಘಾತಕಾರಿಯಾಗಿ ಅಪ್ಪಳಿಸಿತು.

ಮುಸ್ತಫಾ ಸಾವಿಗೆ ಹವ್ಯಾಸಿ ರಂಗಭೂಮಿ ಕಲಾವಿದರು, ನಟ, ನಟಿಯರು ಮರುಗಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಬ್ರಹ್ಮಾವರ ಮೂಲದ ಬ್ಯಾರಿ ಮುಸ್ತಫಾ ಬೆಂಗಳೂರಿನ ಎವಿ ಎಜುಕೇಷನ್ ಸೆಂಟರ್, ಬಿಎಚ್ ಎಸ್ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡಿ ನಂತರ ರಂಗಭೂಮಿಯತ್ತ ಮುಖ ಮಾಡಿದವರು.

ವಟಿ ಕುಟೀರ ತಂಡದ ರಂಗಕರ್ಮಿ ಗೆಳೆಯ ಮುಸ್ತಫಾ ಸಾವಿನ ಬಗ್ಗೆ ಬರೆದ್ದಿದ್ದು ಹೀಗೆ

ಮಂಗಳವಾರ ಶಿವಮೊಗ್ಗದಲ್ಲಿದ್ದ ತಮ್ಮ ಮಗುವಿಗೆ ಆದ್ಯ ಎಂದು ಹೆಸರಿಟ್ಟು ನಾಮಕರಣ ಶಾಸ್ತ್ರ ಮುಗಿಸಿಕೊಂಡು ಸಂಬಂಧಿಕರ ಜೊತೆಗೆ ಬೆಂಗಳೂರಿನ ಕಡೆಗೆ ಹೊರಟ ಮುಸ್ತಫಾ ಇನ್ನಿಲ್ಲ ಎಂಬ ಸುದ್ದಿ ಇನ್ನೂ ಅವರ ಆಪ್ತರಿಗೆ ಅರಗಿಸಿಕೊಳ್ಳಲಾಗಿಲ್ಲ. ಮುಸ್ತಫಾ ಅವರ ಸಾವಿನ ಬಗ್ಗೆ ಕಂಬನಿ ಮಿಡಿದ ಕಲಾವಿದರ ಮಾತುಗಳು ಇಲ್ಲಿವೆ. ತಿಪಟೂರು ಬಳಿ ರಸ್ತೆ ಅಪಘಾತವಾದಾಗ ಬದುಕಿಸಲು ಯತ್ನಿಸಿದ ನಾಗರಾಜು ಅವರ ಹೇಳಿಕೆಯೂ ಇಲ್ಲಿದೆ

ನಿರ್ದೇಶಕಿ ಡಿ ಸುಮನಾ ಕಿತ್ತೂರು ಅವರ ಮಾತು

ನಿರ್ದೇಶಕಿ ಡಿ ಸುಮನಾ ಕಿತ್ತೂರು ಅವರ ಮಾತು

ಡಿ ಸುಮನಾ ಕಿತ್ತೂರು ಅವರ ಮಾತು: "ನೆನ್ನೆ ಮಗುಗೆ ಅವನೇ ಆದ್ಯ ಅಂತ ಹೆಸರಿಟ್ಟ ಮೇಡಂ... ಇವತ್ತು ಮಂಗಳವಾರ ಅಂತ ನನ್ನು ಮಗೂನು ಅವನ ಜೊತೆ ಬೆಂಗಳೂರಿಗೆ ಹೋಗೋಕೆ ನನ್ನ ಅಕ್ಕ ಬಿಡಲಿಲ್ಲ... ನಂಗೆ ಶೋ ಇದೆ... ಹೋಗ್ಲೇ ಬೇಕು ಅಂತ ನೋಡಿ ಮೇಡಂ ... ಶಾಶ್ವತವಾಗಿ ನನ್ನು ಮಗೂನು ಬಿಟ್ಟು ಹೋಗಿದಾನೆ ಮುಸ್ತಾಫ....." ಎರಡು ತಿಂಗಳ ಹಸಿ ಬಾಣಂತಿ, ನನ್ನ ಆಪ್ತ ಮಾನಸರವರು ಫೋನಿನ ಆಚೆ ಬದಿಯಲ್ಲಿ ಗಂಡನ ಅಕಾಲಿಕ ಮರಣದ ದುಃಖದ ಕಟ್ಟೆಯೊಡೆಯುತ್ತಿದ್ದರೆ.... ಯಾವ ಪದಗಳಿಂದ ಅವರನ್ನು ನಾನು ಸಮಾಧಾನಿಸಲಿ?
ತುಂಬಾ ನೋವಾಗಿದೆ...ಹೃದಯ ಮಡುಗಟ್ಟಿದೆ...
ರಂಗಭೂಮಿಯಲ್ಲಿ ನೆರಳು -ಬೆಳಕು ಸಂಯೋಜಿಸುತ್ತಿದ್ದ ಮುಸ್ತಾಫ ಆಕ್ಸಿಡೆಂಟ್ ಗೆ ಬಲಿಯಾಗಿದ್ದಾರೆ. ಛೆ...ಈ ಸಾವು ನ್ಯಾಯವೆ?

ಕರಣಂ ಪವನ್ ಪ್ರಸಾದ್ ಅವರ ಮಾತು

ಕರಣಂ ಪವನ್ ಪ್ರಸಾದ್ ಅವರ ಮಾತು

"ಪುರಹರ ಯಾವಾಗ ಮಾಡ್ತೀರ್ರೀ ಪವನ್, ಐ ಮಿಸ್ ದಟ್ ಶೋ ಎಲಾಟ್ ?" ಎಂದು ಕೊನೆಯ ಬಾರಿ ಸಿಕ್ಕಾಗ ಕೇಳಿ ಇಂದು ಮಧ್ಯಾಹ್ನ ಅಪಘಾತದಲ್ಲಿ ತೀರಿಯೇ ಹೋಗಿಬಿಟ್ಟರಲ್ಲ ಮುಸ್ತಾಫಾ ?
ಇದಕ್ಕಿಂತ ಆಘಾತ ಇನ್ನಾವುದಿದೆ ? ನನ್ನ ಎಲ್ಲಾ ನಾಟಕದ ಬೆಳಕಿನ ತಂತ್ರಜ್ಞರಾಗಿ
ಪುರಹರಕ್ಕೆ ಅದ್ಭುತ ಬೆಳಕಿನ ವಿನ್ಯಾಸ ನೀಡಿ, ಇಂದು ಅಗಲಿ ಹೋದರಲ್ಲ ಮುಸ್ತಾಫಾ !?
ಬೀದಿ ಬಿಂಬ ರಂಗದ ತುಂಬ ಮತ್ತು ಪುರಹರದ ಎಲ್ಲಾ ನಟರು, ತಾಂತ್ರಿಕ ವರ್ಗದವರು
ಈ ಆಘಾತವನ್ನು ತಡೆದುಕೊಂಡು, ಇನ್ನಿತರರಿಗೆ ತಿಳಿಸಿ. ಮೌನ ನಮನ ನಮ್ಮಿಂದ ಅರ್ಪಿತವಾಗಲಿ.

ರಂಗಶಂಕರ ಪ್ರದರ್ಶನದ ಈ ಚಿತ್ರ ... ನಾವಿಬ್ಬರು ಮತ್ತೆಂದು ಒಟ್ಟಾಗಿ ನಾಟಕ ಪ್ರದರ್ಶನ ಮಾಡುವುದಿಲ್ಲ ಎಂಬಂತೆ ಇದೆಯಾ ಎಂದು ಭಾಸವಾಗಿ, ಅದು ಸತ್ಯ ಎಂದು ತಿಳಿದಾಗ ಇನ್ನೂ ನನ್ನ ಕೈಗಳು ನಡುಗುತ್ತಿವೆ...

ಅಭಿಷೇಕ್ ಐಯಂಗಾರ್ ಮಾತು

ಅಭಿಷೇಕ್ ಐಯಂಗಾರ್ ಮಾತು

ವೀ ಮೂವ್ ತಂಡ ಸ್ಥಾಪಕ, ನಟ, ನಿರ್ದೇಶಕ ಅಭಿಷೇಕ್ ಐಯಂಗಾರ್ ಮಾತು
Speechless and shocked!!! good friend and an amazing light designer Beary Mustafa is no more!!!

ವೆಂಕಟೇಶ್ ಪ್ರಸಾದ್ ಸಮುದಾಯ ತಂಡ

ವೆಂಕಟೇಶ್ ಪ್ರಸಾದ್ ಸಮುದಾಯ ತಂಡ

A very talented , very young lighting designer mustafa no more expired in a road accident just an hour ago.. RIP mustafa.. you will be missed ವೆಂಕಟೇಶ್ ಪ್ರಸಾದ್ ಸಮುದಾಯ ತಂಡ

ರಂಗಭೂಮಿ ಕಲಾವಿದೆ, ಗಾಯಕಿ ಪಲ್ಲವಿ ಅರುಣ್

ರಂಗಭೂಮಿ ಕಲಾವಿದೆ, ಗಾಯಕಿ ಪಲ್ಲವಿ ಅರುಣ್

Mustafa... this is how I will remember you- full of energy, full of positive vibes, calm and composed outside, but inside ever-ready for an adventure, waiting to discover new worlds, always willing to learn and always, always unabashedly loyal to your loved ones. It is just unfair. The way you went. Rest in peace my dear friend. We will miss you. Terribly. ಚಿತ್ರಕೃಪೆ: ಪಲ್ಲವಿ ಅರುಣ್ ಫೇಸ್ ಬುಕ್ ಪುಟ

ಪತ್ನಿ ಮಾನಸ ಜೊತೆ ಬ್ಯಾರಿ ಮುಸ್ತಫಾ

ಪತ್ನಿ ಮಾನಸ ಜೊತೆ ಬ್ಯಾರಿ ಮುಸ್ತಫಾ

ತಿಪಟೂರು ಗ್ರಾ. ಪೊಲೀಸ್‌ ಠಾಣೆ ಮೊ.ಸಂ 71/2014 ಕಲಂ 279. 337.304(ಎ) ಐ.ಪಿ.ಸಿ. ಆಗಸ್ಟ್ 05 ರಂದು ಮಧ್ಯಾಹ್ನ 04-00 ಪಿರ್ಯಾದಿ ನಾಗರಾಜು ಬಿನ್ ಬಸವಯ್ಯ 30 ವರ್ಷ. ದೇವರಹಳ್ಳಿ ಕಿಬ್ಬನಹಳ್ಳಿ ಹೋಬಳಿ, ತಿಪಟೂರು ತಾಲ್ಲೋಕ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶ:

ಮಧ್ಯಾಹ್ನ ಸುಮಾರು 2-50 ಗಂಟೆ ಸಮಯದಲ್ಲಿ ನಾನು ದೇವರಹಳ್ಳಿ ಗೇಟ್ ಸಮೀಪ ನಡೆದುಕೊಂಡು ಹೋಗುತ್ತಿರುವಾಗ ನಮ್ಮ ಗ್ರಾಮದ ಸಿದ್ದರಾಮಣ್ಣರವರ ಮನೆಯ ಮುಂಭಾಗ ಎನ್.ಹೆಚ್. 206 ರಸ್ತೆಯಲ್ಲಿ ಕೆ.ಬಿ.ಕ್ರಾಸ್ ಕಡೆಯಿಂದ ಎರಡೂ ಕಾರುಗಳು ಮತ್ತು ತಿಪಟೂರು ಕಡೆಯಿಂದ ಸಿಲ್ವರ್ ಬಣ್ಣದ ಕಾರಿನ ಚಾಲಕರು ಕಾರುಗಳನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬರುತ್ತಿದ್ದು ಕೆ.ಬಿ.ಕ್ರಾಸ್ ಕಡೆಯಿಂದ ಬರುತ್ತಿದ್ದ ಕಾರುಗಳ ಪೈಕಿ ಹಿಂಭಾಗ ಬರುತ್ತಿದ್ದ ಬುಲೆರೋ ಕಾರಿನ ಚಾಲಕ ತನ್ನ ಮುಂದೆ ಬರುತ್ತಿದ್ದ ಬಿಳಿ ಬಣ್ಣದ ಕಾರನ್ನು ಓಬರ್ ಟೇಕ್ ಮಾಡಿಕೊಂಡು ಮುಂದೆ ಬಂದನು.

ಅಪಘಾತದ ಬಗ್ಗೆ ಸ್ಥಳೀಯ ನಾಗರಾಜು ಮಾತು

ಅಪಘಾತದ ಬಗ್ಗೆ ಸ್ಥಳೀಯ ನಾಗರಾಜು ಮಾತು

ಆಗ ಅದರ ಹಿಂದೆ ಅದೇ ಬಿಳಿ ಕಾರಿನ ಚಾಲಕ ಮತ್ತು ತಿಪಟೂರು ಕಡೆಯಿಂದ ಬಂದ ಸಿಲ್ವರ್ ಬಣ್ಣದ ಕಾರಿನ ಚಾಲಕರು ತಮ್ಮ ಕಾರುಗಳನ್ನು ಅತೀವೇಗವಾಗಿ ಮತ್ತು ನಿರ್ಲಕ್ಷತೆಯಿಂದ ಓಡಿಸಿಕೊಂಡು ರಸ್ತೆಯ ಮಧ್ಯ ಭಾಗದಲ್ಲಿರುವ ಬಿಳಿ ಬಟ್ಟೆಯನ್ನು ತಾಕಿಕೊಂಡು ಬಂದು ಎರಡೂ ವಾಹನಗಳು ರಸ್ತೆಯ ಮಧ್ಯ ಭಾಗದಲ್ಲಿ ಬಿಳಿ ಪಟ್ಟೆಯ ಮುಖಾಮುಖಿ ಡಿಕ್ಕಿಯಾಗಿ ತಿಪಟೂರು ಕಡೆಯಿಂದ ಹೋಗುತ್ತಿದ್ದ ಸಿಲ್ವರ್ ಬಣ್ಣದ ಕಾರಿನ ಡೋರ್ ಓಪನ್ ಆಗಿ ಅದರಲ್ಲಿ ಕುಳಿತಿದ್ದ ಹೆಂಗಸು ಕೆಳಕ್ಕೆ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಳು. ಕಾರಿನ ಹತ್ತಿರ ಬಂದು ನೋಡಿದಾಗ ಸಿಲ್ವರ್ ಬಣ್ಣದ ಕಾರಿನಲ್ಲಿ ಮುಸ್ತಾಫ, ಸತೀಶ, ವಿಜಯಲಕ್ಷ್ಮೀ, ಯಶೋಧ ಎಂಬುವರು ಕುಳಿತಿದ್ದರೆಂತಲೂ ಮತ್ತು ಬಿಳಿ ಬಣ್ಣದ ಕಾರಿನಲ್ಲಿ ನಾಗೇಶ, ಸುರೇಶ ಮತ್ತು ಮನೋಹರರವರು ಕುಳಿತಿದ್ದರೆಂತ ವಿಚಾರ ತಿಳಿಯಿತು.

ಅಪಘಾತದ ಬಗ್ಗೆ ಸ್ಥಳೀಯ ನಾಗರಾಜು

ಅಪಘಾತದ ಬಗ್ಗೆ ಸ್ಥಳೀಯ ನಾಗರಾಜು

ಸಿಲ್ವರ್ ಬಣ್ಣದ ಕಾರಿನ ನಂಬರ್ ನೋಡಲಾಗಿ ಕೆ.ಎ.05-ಎಂ.ಪಿ.-2089 ಮಾರುತಿ ಸುಜುಕಿ ರೀಜ್ , ಬಿಳಿ ಬಣ್ಣದ ಕಾರ್ ನಂಬರ್ ನೋಡಲಾಗಿ ಕೆ.ಎ. 02-ಎಂ.ಹೆಚ್.-3776 Q7TD ಕಾರನ್ನು ಚಾಲನೆ ಮಾಡುತ್ತಿದ್ದ ಚಾಲಕ ಸುರೇಶ್ ಎಂತಲೂ ಮತ್ತು ಅದರಲ್ಲಿ ಕುಳಿತಿದ್ದ ಗಾಯಾಳು ಹೆಸರು ಮನೋಹರ್ ,ನಾಗೇಶ ಎಂತಲೂ ತಿಳಿದಿರುತ್ತದೆ.


ನಂತರ 108 ಅಂಬುಲೆನ್ಸ್ ಗೆ ನಾನು ಮತ್ತು ಅಷ್ಟರಲ್ಲಿ ಸ್ಥಳಕ್ಕೆ ಬಂದ ಗ್ರಾಮಸ್ಥರು ಹಾಗೂ ದಾರಿಹೋಕರು ಪೋನ್ ಮಾಡಿ ಅಂಬುಲೆನ್ಸ್ ನಲ್ಲಿ ಗಾಯಾಳುಗಳನ್ನು ತಿಪಟೂರು ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದೆವು. ಮತ್ತೊಂದು ಆಂಬುಲೆನ್ಸ್ ನಲ್ಲಿ ಮೃತಳನ್ನು ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದೆವು. ನಂತರ ವಿಚಾರ ತಿಳಿಯಲಾಗಿ ಈ ಅಪಘಾತದಲ್ಲಿ ಗಾಯಗೊಂಡಿದ್ದ ಮೇಲ್ಕಂಡ ಗಾಯಾಳುಗಳ ಪೈಕಿ ಕೆ.ಎ. 05 - ಎಂ.ಪಿ.-2089 ಕಾರಿನ ಚಾಲಕ ಮುಸ್ತಪಾ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆಂತ ತಿಳಿದು ಬಂದಿರುತ್ತದೆ.

ಕೆಎಚ್ ಕಲಾಸೌಧ ನಿರ್ದೇಶಕ ಪಿಡಿ ಸತೀಶ್ ಚಂದ್ರ

ಕೆಎಚ್ ಕಲಾಸೌಧ ನಿರ್ದೇಶಕ ಪಿಡಿ ಸತೀಶ್ ಚಂದ್ರ

ಸ್ಥಳೀಯ ಪತ್ರಿಕೆ ವರದಿ ಬಗ್ಗೆ ಹಾಕಿ, ಅಪಘಾತಕ್ಕೊಳಗಾದ ಮುಸ್ತಫಾ ಅವರ ಕಾರಿನ ಚಿತ್ರವನ್ನು ನಟ, ನಿರ್ದೇಶಕ ಪಿಡಿ ಸತೀಶ್ ಚಂದ್ರ ಫೇಸ್ ಬುಕ್ ನಲ್ಲಿ ಹಾಕಿದ್ದಾರೆ.[ಪಿಡಿ ಸತೀಶ್ ಚಂದ್ರ]

ತಾಲ್ಲೂಕಿನ ಕರಡಿ ಕೋಡಿ ದೇವರಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಮಧ್ಯಾಹ್ನ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಇಬ್ಬರು ಮೃತಪಟ್ಟಿದ್ದಾರೆ. ಮೂವರು ಗಾಯಗೊಂಡಿದ್ದಾರೆ. ಮಂಗಳೂರು ಮೂಲದ ಬೆಂಗಳೂರಿನ ರಂಗಭೂಮಿ ಬೆಳಕು ತಜ್ಞ ಮುಸ್ತಾಫಾ (30), ಇವರ ಪತ್ನಿಯ ಸಂಬಂಧಿ ಶಿವಮೊಗ್ಗದ ಯಶೋಧಮ್ಮ (48) ಮೃತರು. ಇವರ ಜತೆಯಲ್ಲಿದ್ದ ಬೆಂಗಳೂರಿನ ರಂಗಕರ್ಮಿ ಸತೀಶ್ (35), ಇವರ ತಾಯಿ ವಿಜಯಲಕ್ಷ್ಮಿ (60) ಮತ್ತು ಮತ್ತೊಂದು ಕಾರಿನಲ್ಲಿದ್ದ ಆಂಧ್ರ ಅನಂತಪುರ ಮೂಲದ ಮನೋಹರ್ ತೀವ್ರ ಗಾಯಗೊಂಡವರು.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Talented young artist, theatre light designer and technician Beary Mustafa passed away on Tuesday after his car met with a head on collision with another car near Tiptur. His passing marks a sad day for Kannada theatre. Many theatre personalities and artists expressed their condolences on social networking sites.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more