ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತುಮಕೂರಿನಲ್ಲಿ ರಾಜಣ್ಣ ಹಾಗೂ ಮಗನ ವಿರುದ್ಧ ಸಿಡಿದೆದ್ದ ಜೆಡಿಎಸ್- ಒಕ್ಕಲಿಗರು

By ತುಮಕೂರು ಪ್ರತಿನಿಧಿ
|
Google Oneindia Kannada News

ತುಮಕೂರು, ಮೇ 27 : ಮಾಜಿ ಶಾಸಕ ಕೆ.ಎನ್.ರಾಜಣ್ಣ ಒಕ್ಕಲಿಗ ಸಮುದಾಯವನ್ನು ದಕ್ಕಲಿಗ ಜನಾಂಗದೊಂದಿಗೆ ಹೋಲಿಸಿ, ಕೀಳಾಗಿ ಮಾತಾಡಿದ್ದರ ವಿರುದ್ಧ ಗೌರಿಶಂಕರ್ ಮಾತನಾಡಿದ್ದಾರೆ. ಆ ನಂತರ ಶಾಸಕ ಡಿ.ಸಿ.ಗೌರೀಶಂಕರ್ ರ ಹಳೆ ವಿಚಾರ ಕೆದಕಿ, ಬಿಜೆಪಿ ಸೇರಲು ಹಣ ಪಡೆದಿದ್ದರು ಎಂದು ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಆರ್.ರಾಜೇಂದ್ರ ಆಧಾರ ರಹಿತ ಆರೋಪ ಮಾಡಿದ್ದಾರೆ ಎಂದು ಯುವ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆಂಪರಾಜು ಹೇಳಿದ್ದಾರೆ.

ಜೆಡಿಎಸ್ ನ ಜಿಲ್ಲಾ ಕಚೇರಿಯಲ್ಲಿ ಸೋಮವಾರ ಮಾತನಾಡಿದ ಅವರು, ಇನ್ನೊಂದು ವಾರದೊಳಗೆ ಬಹಿರಂಗ ಕ್ಷಮೆ ಕೋರದಿದ್ದರೆ ಜೆಡಿಎಸ್ ಮುಖಂಡರು ಜಿಲ್ಲೆಯಾದ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಆವರು ಎಚ್ಚರಿಕೆ ನೀಡಿದರು.

ದೇವೇಗೌಡರು ಸೋಲಲು ಅವರ ಸೊಸೆಯಂದಿರು ಕಾರಣ: ಕಾಂಗ್ರೆಸ್ ಮುಖಂಡದೇವೇಗೌಡರು ಸೋಲಲು ಅವರ ಸೊಸೆಯಂದಿರು ಕಾರಣ: ಕಾಂಗ್ರೆಸ್ ಮುಖಂಡ

ಜೆಡಿಎಸ್- ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ದೇವೇಗೌಡರಿಗೆ ಜಿಲ್ಲೆಯ ಹಲವು ಭಾಗದಲ್ಲಿ ಕಾಂಗ್ರೆಸ್ ಮುಖಂಡರು ಬೆಂಬಲ ನೀಡಲಿಲ್ಲ. ಹಾಗಾಗಿ ದೇವೇಗೌಡರು ಸೋಲು ಅನುಭವಿಸಬೇಕಾಯಿತು. ಮಧುಗಿರಿಯಲ್ಲಿ ಬಿಜೆಪಿ ಹೆಸರೇ ಇರಲಿಲ್ಲ. ಅಲ್ಲಿ ಬಿಜೆಪಿ ಲೀಡ್ ಪಡೆಯುತ್ತದೆ ಎಂದರೆ ಇದರಲ್ಲಿ ಏನೋ ಷಡ್ಯಂತ್ರ ನಡೆದಿದೆ ಎಂದು ಆರೋಪಿಸಿದರು.

JDS- Vokkalliga community angry against Congress leader KN Rajanna and his son

ಕಾಂಗ್ರೆಸ್ ನ ಕೆಲ ಮುಖಂಡರ ಕುತಂತ್ರ ರಾಜಕಾರಣದಿಂದ ಮೈತ್ರಿ ಅಭ್ಯರ್ಥಿಗೆ ಸೋಲಾಯಿತು ಎಂದು ಕಿಡಿ ಕಾರಿದರು.

ಜೆಡಿಎಸ್ ನ ತಾಲೂಕು ಅಧ್ಯಕ್ಷ ಹಾಲನೂರು ಅನಂತ್ ಕುಮಾರ್, ಗ್ರಾಮ ಪಂಚಾಯಿತಿ ಚುನಾವಣೆ ಗೆಲ್ಲಲು ಆಗದವರು ಇಂದು ನಮ್ಮ ನಾಯಕರ ಬಗ್ಗೆ ಮಾತನಾಡುತ್ತಾರೆ. ರಾಜೇಂದ್ರ ಇನ್ನೂ ಚಿಕ್ಕ ಹುಡುಗ. ಕೆಎನ್ ರಾಜಣ್ಣ ಚುನಾವಣೆಗಾಗಿ ಚನ್ನಿಗಪ್ಪ ಅವರಿಂದ ಒಂದು ಕೋಟಿ ಹಣ ಪಡೆದಿದ್ದರು. ಆ ಪೈಕಿ ಇನ್ನೂ ಹದಿನೈದು ಲಕ್ಷ ರುಪಾಯಿ ವಾಪಸ್ ಕೊಟ್ಟಿಲ್ಲ ಎಂದರು.

ಜೂನ್ 10ರೊಳಗೆ ಮೈತ್ರಿ ಸರಕಾರ ಬೀಳುತ್ತದೆ ಎಂದ ಸಿದ್ದು ಆಪ್ತ, ಮಧುಗಿರಿ ಮಾಜಿ ಶಾಸಕ ರಾಜಣ್ಣ ಜೂನ್ 10ರೊಳಗೆ ಮೈತ್ರಿ ಸರಕಾರ ಬೀಳುತ್ತದೆ ಎಂದ ಸಿದ್ದು ಆಪ್ತ, ಮಧುಗಿರಿ ಮಾಜಿ ಶಾಸಕ ರಾಜಣ್ಣ

ಗ್ರಾಮ ಪಂಚಾಯಿತಿ ಗೆದ್ದಿಲ್ಲ. ಅಂತಹವರು ಎರಡು ಬಾರಿ ಶಾಸಕರಾದವರ ಬಗ್ಗೆ ಮಾತನಾಡಿದ್ದಾರೆ. ಚನ್ನಿಗಪ್ಪ ಕುಟುಂಬ ಬಡವರಿಗೆ ಉಚಿತ ಶಿಕ್ಷಣ ನೀಡುತ್ತಿದೆ. ದೇವೇಗೌಡರ ಸೂಚನೆ ಕಾರಣಕ್ಕೆ ಎಂಜಿನಿಯರಿಂಗ್ ಕಾಲೇಜು ಹೆಸರು ಬದಲಾವಣೆ ಮಾಡಿದ್ದೇವೆ ಎಂದು ಹೇಳಿದರು.

English summary
JDS- Vokkalliga community angry against Congress leader KN Rajanna and his son Rajendra on Monday. JDS leaders warned about Tumakuru district wide protest against them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X