ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮಕ್ಕೆ ಇನ್ಫೋಸಿಸ್ ನೆರವು

|
Google Oneindia Kannada News

ಪಾವಗಡ, ಸೆಪ್ಟೆಂಬರ್ 5: ಇನ್ಫೋಸಿಸ್‌ನ ಸಿಎಸ್‌ಆರ್‌ ವಿಭಾಗ ಮತ್ತು ಲೋಕೋಪಕಾರಿ ವಿಭಾಗ ಇನ್ಫೋಸಿಸ್‌ ಫೌಂಡೇಷನ್ ಇಂದು ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮದ ಬೆಳ್ಳಿ ಹಬ್ಬದ ಬ್ಲಾಕ್‌ನ ಉದ್ಘಾಟನೆ ಮಾಡಿದೆ. ಈ ಬ್ಲಾಕ್‌ನ ನಿರ್ಮಾಣ ಮತ್ತು ಅಭಿವೃದ್ಧಿಗೆ ಫೌಂಡೇಷನ್‌ 5.5 ಕೋಟಿ ರೂ. ದೇಣಿಗೆ ಒದಗಿಸಿದೆ. ಇದು ರೋಗಿಗಳಿಗೆ ಇತರ ಆರೋಗ್ಯ ಸೌಲಭ್ಯಗಳನ್ನು ಒದಗಿಸುವ ಜೊತೆಗೆ, ಉತ್ತಮ ದರ್ಜೆಯ ಒಪ್ತಾಲ್ಮೋಲಜಿ ಮತ್ತು ಇಎನ್‌ಟಿ ಸೇವೆಗಳನ್ನು ಒದಗಿಸುವ ಗುರಿ ಹೊಂದಿದೆ.

ಈ ಬೆಳ್ಳಿ ಹಬ್ಬದ ಬ್ಲಾಕ್‌ ಅನ್ನು ಭಾರತದ ಗೌರವಾನ್ವಿತ ಉಪ-ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ವರ್ಚುವಲ್‌ ವೇದಿಕೆಯ ಮೂಲಕ ಉದ್ಘಾಟಿಸಿದರು.

ಈ ಬ್ಲಾಕ್‌ ಅನ್ನು ನಿರ್ಮಿಸಲು ಇನ್ಫೋಸಿಸ್‌ ಫೌಂಡೇಷನ್‌ನ ದೇಣಿಗೆ ನೀಡಿದ್ದು, ನೇತ್ರ ಚಿಕಿತ್ಸೆಯ ವಿಶೇಷ ಘಟಕಗಳು, ಶಸ್ತ್ರಚಿಕಿತ್ಸಾ ಪ್ರಕ್ರಿಯೆಗಳಿಗೆ ಎರಡು ಶಸ್ತ್ರಚಿಕಿತ್ಸಾ ಘಟಕಗಳು, ಒಂದು ಹೈಟೆಕ್‌ ತಪಾಸಣಾ ಕೇಂದ್ರ, ಇಎನ್‌ಟಿ ಕೇಂದ್ರ ಹಾಗೂ ಕ್ಯಾನ್ಸರ್‌ ಕ್ಲಿನಿಕ್‌ಗಳನ್ನು ಒಳಗೊಂಡಿವೆ. ಹೆಚ್ಚುವರಿಯಾಗಿ, ಅನುದಾನದ ಒಂದು ಭಾಗವನ್ನು ಶಸ್ತ್ರಚಿಕಿತ್ಸ ಕೆಂದ್ರಕ್ಕೆ ಅಗತ್ಯವಿರುವ ಅಗತ್ಯ ವೈದ್ಯಕೀಯ ಉಪಕರಣಗಳು, ಪೀಠೋಪಕರಣ, ಕಂಪ್ಯೂಟರ್‌ಗಳು ಮತ್ತು ಹವಾನಿಯಂತ್ರಕಗಳ ಖರೀದಿಗೆ ಕೂಡ ಬಳಸಲಾಗಿದೆ.

Infosys Foundation Inaugurates Silver Jubilee Block at Sri Ramakrishna Sevashrama, Pavagada

ಈ ಬೆಳ್ಳಿ ಹಬ್ಬದ ಬ್ಲಾಕ್ ಬಹುತೇಕ 4000 ಶಸ್ತ್ರಚಿಕಿತ್ಸೆಗಳನ್ನು ಮಾಡುವಂತಹ ಅವಕಾಶ ಕಲ್ಪಿಸುವ ಗುರಿ ಹೊಂದಿದೆ ಮತ್ತು ಇದರಿಂದ ಪ್ರತಿ ವರ್ಷ ಕನಿಷ್ಠ 30,000 ಹೊರರೋಗಿಗಳಿಗೆ ಲಾಭವಾಗುತ್ತದೆ.

ಈ ಸಂದರ್ಭದಲ್ಲಿ ಮಾತನಾಡಿದ ಇನ್ಫೋಸಿಸ್‌ ಫೌಂಡೇಷನ್‌ನ ಅಧ್ಯಕ್ಷರಾದ ಶ್ರೀಮತಿ ಸುಧಾಮೂರ್ತಿ, ''ಅಗತ್ಯವಿರುವವರಿಗೆ ನೆರವು ನೀಡಲು ಇನ್ಫೋಸಿಸ್‌ ಯಾವಾಗಲೂ ಶ್ರಮಿಸುತ್ತಿದೆ. ಈ ಆಸ್ಪತ್ರೆ ಮತ್ತು ಅದರ ಸೇವೆಗಳು ದೇಶದ ಸಾವಿರಾರು ಅವಕಾಶವಂಚಿತ ರೋಗಿಗಳಿಗೆ ಸೇವೆ ಒದಗಿಸಲಿದೆ. ಈ ಸಂದರ್ಭದಲ್ಲಿ ನಾವು, ಕಾರ್ಯಕ್ರಮದಲ್ಲಿ ಪಾಲ್ಗೊಂಡ ಗೌರವಾನ್ವಿತ ಉಪ-ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇವೆ ಮತ್ತು ಪಾವಗಡದ ರಾಮಕೃಷ್ಣ ಸೇವಾಶ್ರಮವನ್ನು ಅಭಿನಂದಿಸುತ್ತೇವೆ'' ಎಂದರು.

ಶ್ರೀರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಸ್ವಾಮಿ ಜಪಾನಂದ, ''ಇನ್ಫೋಸಿಸ್‌ ಫೌಂಡೇಷನ್‌ ಅವರೊಂದಿಗಿನ ಸಹಭಾಗಿತ್ವದಲ್ಲಿ ಬಡ ರೋಗಿಗಳಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ಸಾಧ್ಯವಾಗುತ್ತಿರುವುದಕ್ಕೆ ಹೆಮ್ಮೆ ಇದೆ. ಇದು ದೇಶದ ಆರೋಗ್ಯ ಸೇವಾಕ್ಷೇತ್ರದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಈ ಉಪಕ್ರಮದ ಕುರಿತು ಇನ್ಫೋಸಿಸ್‌ ಫೌಂಡೇ಼ಷನ್‌ನ ಬದ್ಧತೆಗೆ ನಾವು ಧನ್ಯವಾದ ಅರ್ಪಿಸುತ್ತೇವೆ'' ಎಂದರು.

ಕಳೆದ ಒಂದುವರೆ ವರ್ಷಗಳಲ್ಲಿ ಇನ್ಫೋಸಿಸ್‌ ದೇಶಾದ್ಯಂತ 200 ಕೋಟಿ ರೂ. ಮೌಲ್ಯದ ಕೋವಿಡ್‌ ಪರಿಹಾರ ಯೋಜನೆಗಳನ್ನು ಜಾರಿಗೊಳಿಸಿದೆ. ಜೊತೆಗೆ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಇನ್ಫೋಸಿಸ್‌ ಫೌಂಡೇಷನ್ 150 ಹಾಸಿಗೆಯ ಕೋವಿಡ್‌ ಕೇರ್‌ ಆಸ್ಪತ್ರೆಯನ್ನು ಆರಂಭಿಸಿದೆ. ಜೊತೆಗೆ, ಬೆಂಗಳೂರಿನ ಕಿದ್ವಾಯಿ ಗ್ರಂಥಿ ಸ್ಮಾರಕ ಸಂಸ್ಥೆಯಲ್ಲಿ 75,000 ಚದರ ಅಡಿಯ ಬಹು-ದರ್ಜೆಯ ಹೊರರೋಗಿ ವಿಭಾಗ(ಒಪಿಡಿ) ಬ್ಲಾಕ್ ಅನ್ನು ನಿರ್ಮಿಸಿದೆ.

English summary
Infosys Foundation, the philanthropic and CSR arm of Infosys announced the inauguration of the Silver Jubilee Block at Sri Ramakrishna Sevashrama, Pavagada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X