ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒಂದೊಮ್ಮೆ ನನ್ನ ಮೇಲೆ ಐಟಿ ದಾಳಿಯಾದರೆ ದೇವೇಗೌಡರೇ ಕಾರಣ: ರಾಜಣ್ಣ

|
Google Oneindia Kannada News

ತುಮಕೂರು, ಅಕ್ಟೋಬರ್ 14: ಒಂದೊಮ್ಮೆ ನನ್ನ ಮೇಲೆ ಐಟಿ ದಾಳಿ ನಡೆದರೆ ಅದಕ್ಕೆ ದೇವೇಗೌಡರೇ ಕಾರಣ ಎಂದು ಮಾಜಿ ಶಾಸಕ ಕೆ.ಎನ್. ರಾಜಣ್ಣ ಹೇಳಿದ್ದಾರೆ.

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏಕೆಂದರೆ ಗೌಡರು ಸೋತಿದ್ದಾರೆ, ಹೀಗಾಗಿ ನನ್ನ ವಿರುದ್ಧ ಪತ್ರ ಬರೆಯುತ್ತಾರೆ.

ಕಾಂಗ್ರೆಸ್‌ನ ಮಾಜಿ ಶಾಸಕ ಕೆಎನ್ ರಾಜಣ್ಣಗೆ ಇ.ಡಿ. ನೋಟಿಸ್ಕಾಂಗ್ರೆಸ್‌ನ ಮಾಜಿ ಶಾಸಕ ಕೆಎನ್ ರಾಜಣ್ಣಗೆ ಇ.ಡಿ. ನೋಟಿಸ್

Recommended Video

ಎಚ್ ಡಿ ದೇವೇಗೌಡ್ರ ಸೋಲಿಗೆ ನಿಖಿಲ್ ಕಾರಣ ಎಂದು ಹೇಳಿಕೆ ನೀಡಿದ ಕಾಂಗ್ರೆಸ್ ಶಾಸಕ | Oneindia kannada

ದೇವೇಗೌಡರಿಗೆ ಏನು ಕೆಲಸ ಇರಲ್ಲ ಕೂತು ಪತ್ರ ಬರೆಯುತ್ತಾರೆ , ನಾನು ದಾಳಿಗೆ ಹೆದರುವುದಿಲ್ಲ. ನನ್ನ ಮೇಲೆ ಐಟಿ ದಾಳಿಯಾದಲ್ಲಿ ನಾನೂ ಪತ್ರ ಬರೆಯುತ್ತೇನೆ. ದೇವೇಗೌಡರ ಆಸ್ತಿಯನ್ನು ತನಿಖೆ ಮಾಡಲು ನಾನು ಒತ್ತಾಯಿಸುತ್ತೇನೆ. ಅವರ ಕುಟುಂಬದ ಎಲ್ಲವನ್ನೂ ತನಿಖೆ ಮಾಡುವಂತೆ ನಾನೂ ಪತ್ರ ಬರೆಯುತ್ತೇನೆ ಎಂದರು.

If IT Attacks Me Deve Gowda Is The Reason

ಪರಮೇಶ್ವರ ಆಪ್ತ ಸಹಾಯಕ ರಮೇಶ್ ತುಂಬಾ ಒಳ್ಳೆಯ ಹುಡುಗ, ಈ ಹಿಂದೆ ಎಸ್.ಎಂ.ಕೃಷ್ಣ, ಡಿ.ಕೆ.ಶಿವಕುಮಾರ್ ಬಳಿ ಕೆಲಸ ಮಾಡುತ್ತಿದ್ದ, ಈಗ ಪರಮೇಶ್ವರ ಬಳಿ ಇದ್ದ. ಎಲ್ಲವನ್ನೂ ಎದುರಿಸಬೇಕಿತ್ತು. ಅದನ್ನು ಬಿಟ್ಟು ಸಾಯುವ ತೀರ್ಮಾನ ಮಾಡಿದ್ದು ತಪ್ಪು. ಅವನ ಸಾವಿಗೆ ವಿಷಾದ ವ್ಯಕ್ತಪಡಿಸ್ತೇನೆ. ಐಟಿ ಅವರೇನೂ ಸಾಯಿಸಬೇಕು ಎಂದು ಬರಲ್ಲ. ಅವರ ಕೆಲಸ ಅವರು ಮಾಡಿದ್ದಾರೆ. ಐಟಿಯಿಂದ ಸತ್ತ ಎಂದು ನಾನು ಹೇಳಲ್ಲ ಎಂದರು.

ಇಡಿ ನೋಟಿಸ್, ವಿಚಾರಣೆ ಕುರಿತು ಪ್ರತಿಕ್ರಿಯಿಸಿದ ಅವರು, ನನಗೂ ಇಡಿ ವಿಚಾರಣೆಗೂ ಸಂಬಂಧವೇ ಇಲ್ಲ. ಕೆಲವು ಮಾಹಿತಿಗಳನ್ನು ಇಡಿಯವರು ಕೇಳಿದ್ದಾರೆ. ಅದನೆಲ್ಲ ತಗೊಂಡು ಹೋಗಿ ನಾಳೆ ಕೊಟ್ಟು ಬರುತ್ತೇನೆ.

ಇನ್ನೊಂದು ಬಾರಿ ನೋಟಿಸ್ ನೀಡಬೇಡಿ, ಯಾವಾಗ ಬೇಕೋ ಅವಾಗ ನಾನೇ ಬರುತ್ತೇನೆ ಎಂದು ಹೇಳಿದ್ದೇನೆ. ಲಕ್ಷ್ಮೀ ಹೆಬ್ಬಾಳ್ಕರ್ ಮಾಲೀಕತ್ವದ ಹರ್ಷ ಶುಗರ್ಸ್‍ಗೆ ಸಾಲ ಕೊಟ್ಟಿರುವ ಬಗ್ಗೆ ಕೇಳಿದರು. ಅದರ ಜೊತೆಗೆ ನನ್ನ ವರಮಾನ ಬಗ್ಗೆನೂ ಕೇಳಿದರು ಅದನ್ನೂ ಹೇಳಿದ್ದೇನೆ ಎಂದು ಮಾಹಿತಿ ನೀಡಿದರು.

ನಾಳೆ, ನಾಡಿದ್ದು ನಮ್ಮ ಮೇಲೂ ಐಟಿ ದಾಳಿ ಆಗುತ್ತದೆ ಎಂದುಕೊಂಡಿದ್ದೇನೆ. ಅದಕ್ಕೆಲ್ಲ ತಯಾರಿದ್ದೇವೆ. ನಮಗೂ ಎಲ್ಲ ಕಡೆ ಗುಪ್ತಚರ ಮಾಹಿತಿ ಬರುತ್ತೆ. ಐಟಿ ಅಧಿಕಾರಿಗಳು ದಾಳಿ ಮಾಡಬಹುದು, ಮಾಡಲಿ ನಮ್ಮದೇನು ತೊಂದರೆ ಇಲ್ಲ ಎಂದು ತಿಳಿಸಿದರು.

English summary
Former MLA KN Rajanna said that once an IT attack on me was caused by Deve Gowda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X