ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಲೆಕೆಟ್ಟವರು ಬಿಜೆಪಿ ಸೇರಬೇಕಷ್ಟೆ : ಎಸ್. ಆರ್. ಶ್ರೀನಿವಾಸ್

|
Google Oneindia Kannada News

ತುಮಕೂರು, ಸೆಪ್ಟೆಂಬರ್ 18 : "ನಾನು ಬಿಜೆಪಿ ಪಕ್ಷ ಮುಂದಿನ ಮೂರು ವರ್ಷ ಅಧಿಕಾರ ನಡೆಸಬಹುದು ಎಂದು ಹೇಳಿದ ತಕ್ಷಣ ನಾನು ಬಿಜೆಪಿಯತ್ತ ಎಂದು ವದಂತಿ ಹಬ್ಬಿಸಲಾಯಿತು. ತಲೆಕೆಟ್ಟವರು ಬಿಜೆಪಿ ಸೇರಬೇಕಷ್ಟೆ" ಎಂದು ಮಾಜಿ ಸಚಿವ ಎಸ್. ಆರ್. ಶ್ರೀನಿವಾಸ್ ಸ್ಪಷ್ಟನೆ ನೀಡಿದರು.

ಗುಬ್ಬಿ ಕ್ಷೇತ್ರತದ ಜೆಡಿಎಸ್ ಶಾಸಕ ಎಸ್. ಆರ್. ಶ್ರೀನಿವಾಸ್ ಹೇಳಿಕೆಗಳ ಬಗ್ಗೆ ಭಾರೀ ಚರ್ಚೆ ನಡೆದಿತ್ತು. ಅವರು ಜೆಡಿಎಸ್ ತೊರೆದು, ಕಾಂಗ್ರೆಸ್ ಅಥವ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿಗಳು ಹಬ್ಬಿದ್ದವು. ಎಲ್ಲಾ ಚರ್ಚೆಗಳಿಗೆ ಶ್ರೀನಿವಾಸ್ ತೆರೆ ಎಳೆದಿದ್ದಾರೆ.

ಕುಮಾರಸ್ವಾಮಿ ವಿರುದ್ಧ ಬಾಂಬ್ ಸಿಡಿಸಿದ ಜೆಡಿಎಸ್ ಶಾಸಕಕುಮಾರಸ್ವಾಮಿ ವಿರುದ್ಧ ಬಾಂಬ್ ಸಿಡಿಸಿದ ಜೆಡಿಎಸ್ ಶಾಸಕ

"ಡಿ. ಕೆ. ಶಿವಕುಮಾರ್ ಪರ ಹೋರಾಟದಲ್ಲಿ ಅವರ ಪರ ನಿಲ್ಲಬೇಕಾದ ಎಚ್. ಡಿ. ಕುಮಾರಸ್ವಾಮಿ ನಮಗೆ ಆಹ್ವಾನ ನೀಡಿಲ್ಲ ಎಂಬ ಹೇಳಿಕೆ ನೀಡಿದಾಗ ನನಗೆ ಸ್ವಲ್ಪ ಅಸಮಾಧಾನ ತಂದಿದೆ ಎಂದು ತಿಳಿಸಿದ್ದೆ. ಈ ಹೇಳಿಕೆಯನ್ನು ತಿರುಚಲಾಗಿದೆ" ಎಂದು ಎಸ್. ಆರ್. ಶ್ರೀನಿವಾಸ್ ಹೇಳಿದರು.

ಡಿ.ಕೆ. ಶಿವಕುಮಾರ್ ಪರ ಪ್ರತಿಭಟನೆ : ಎಚ್‌ಡಿಕೆ ಗೈರಾಗಿದ್ದು ಏಕೆ?ಡಿ.ಕೆ. ಶಿವಕುಮಾರ್ ಪರ ಪ್ರತಿಭಟನೆ : ಎಚ್‌ಡಿಕೆ ಗೈರಾಗಿದ್ದು ಏಕೆ?

"ಎಂತಹ ಒತ್ತಡ ನನ್ನ ಮೇಲೆ ಇದ್ದಾಗಲೂ ಸಹ ನಾನು ಪಕ್ಷವನ್ನು ಬಿಟ್ಟು ಹೋಗಿಲ್ಲ, ಹೋಗುವುದಿಲ್ಲ. ಈಗ ಉಹಾಪೋಹಗಳಿಗೆ ಬೆಲೆ ಕೊಡಬೇಕಾಗಿಲ್ಲ. ನನ್ನ ಕಾರ್ಯಕರ್ತರು, ಬೆಂಬಲಿಗರು ಗೊಂದಲಗೊಳ್ಳುವ ಅಗತ್ಯವಿಲ್ಲ" ಎಂದರು.

ಡಿ.ಕೆ. ಶಿವಕುಮಾರ್ ಪರ ಪ್ರತಿಭಟನೆ : ಯಾರು, ಏನು ಹೇಳಿದರು?ಡಿ.ಕೆ. ಶಿವಕುಮಾರ್ ಪರ ಪ್ರತಿಭಟನೆ : ಯಾರು, ಏನು ಹೇಳಿದರು?

ಎಲ್ಲಿಯೂ ಹೇಳಿಲ್ಲ

ಎಲ್ಲಿಯೂ ಹೇಳಿಲ್ಲ

"ನಾನು ಜೆಡಿಎಸ್ ತೊರೆಯುತ್ತೇನೆ. ಬಿಜೆಪಿ ಅಥವ ಕಾಂಗ್ರೆಸ್ ಪಕ್ಷಕ್ಕೆ ಹೋಗುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲವಲ್ಲ. ನಾನು ಪಕ್ಷವನ್ನು ಬಿಟ್ಟು ಹೋಗಿಲ್ಲ, ಹೋಗುವುದೂ ಇಲ್ಲ" ಎಂದು ಮಾಜಿ ಸಚಿವ, ಗುಬ್ಬಿ ಕ್ಷೇತ್ರದ ಜೆಡಿಎಸ್ ಶಾಸಕ ಎಸ್. ಆರ್. ಶ್ರೀನಿವಾಸ ಹೇಳಿದರು.

ಬುದ್ಧಿ ಭ್ರಮಣೆ ಆದವರು ಬಿಜೆಪಿ ಸೇರಬೇಕು

ಬುದ್ಧಿ ಭ್ರಮಣೆ ಆದವರು ಬಿಜೆಪಿ ಸೇರಬೇಕು

"ನಾನು ಬಿಜೆಪಿ ಪಕ್ಷ ಮುಂದಿನ ಮೂರು ವರ್ಷ ಅಧಿಕಾರ ನಡೆಸಬಹುದು ಎಂದು ಹೇಳಿದ ತಕ್ಷಣವೇ ನಾನು ಬಿಜೆಪಿಯತ್ತ ಎಂದು ವದಂತಿ ಹಬ್ಬಿಸಲಾಯಿತು. ಬುದ್ಧಿ ಭ್ರಮಣೆ ಆದವರು ಬಿಜೆಪಿ ಸೇರಬೇಕಷ್ಟೆ. ನಾನು ಬಿಜೆಪಿಗೆ ಹೋಗುವುದಿಲ್ಲ" ಎಂದು ಸ್ಪಷ್ಟಪಡಿಸಿದರು.

ಹಲವು ಕಷ್ಟ ಕಾಲಗಳು

ಹಲವು ಕಷ್ಟ ಕಾಲಗಳು

"ನಾಲ್ಕು ಬಾರಿ ಶಾಸಕನಾಗಿ ಎಂತಹ ಕಷ್ಟ ಕಾಲದಲ್ಲೂ ಪಕ್ಷ ಬಿಡುವ ಮಾತುಗಳನ್ನು ಆಡಿಲ್ಲ. ಈಗ ಉಹಾಪೋಹಗಳಿಗೆ ಬೆಲೆ ಕೊಡಬೇಕಿಲ್ಲ. ನನ್ನಕಾರ್ಯಕರ್ತರು, ಬೆಂಬಲಿಗರು ಗೊಂದಲಕ್ಕೀಡಾಗುವ ಅಗತ್ಯವಿಲ್ಲ" ಎಂದು ಮಾಜಿ ಸಚಿವ ಎಸ್. ಆರ್. ಶ್ರೀನಿವಾಸ್ ಹೇಳಿದರು.

ಸ್ಥಿತಿ ಯಾರಿಗೂ ಬೇಡ

ಸ್ಥಿತಿ ಯಾರಿಗೂ ಬೇಡ

"ಅನರ್ಹ ಶಾಸಕರ ಸ್ಥಿತಿ ಯಾರಿಗೂ ಬೇಡ. ಸಿದ್ದಾಂತವಿಲ್ಲದೇ ಹೇಗೆ ಬದುಕುತ್ತಾರೋ?. ಜನರ ಮುಂದೆ ಹೇಗೆ ಹೋಗುತ್ತಾರೋ ಗೊತ್ತಿಲ್ಲ" ಎಂದು ಎಸ್. ಆರ್. ಶ್ರೀನಿವಾಸ್ ಹೇಳಿದರು.

English summary
Gubbi JD(S) MLA and Former minister S.R.Srinivas clarified that he will not quit party and joining BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X