ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಲಿಪಶು ಆಗಲ್ಲ, ನಾಮಪತ್ರ ವಾಪಸ್ ಪಡೆಯಲ್ಲ: ಮುದ್ದಹನುಮೇಗೌಡ

|
Google Oneindia Kannada News

Recommended Video

ಬಲಿಪಶು ಆಗಲ್ಲ, ನಾಮಪತ್ರ ವಾಪಸ್ ಪಡೆಯಲ್ಲ: ಮುದ್ದಹನುಮೇಗೌಡ..! | Oneindia Kannada

ತುಮಕೂರು, ಮಾರ್ಚ್ 25: ತುಮಕೂರು ಕ್ಷೇತ್ರದಿಂದ ದೇವೇಗೌಡ ಅವರ ಎದುರಾಗಿ ಇಂದು ನಾಮಪತ್ರ ಸಲ್ಲಿಸಿರುವ ಹಾಲಿ ಸಂಸದ ಮುದ್ದಹನುಮೇಗೌಡ ಅವರು ಯಾವುದೇ ಕಾರಣಕ್ಕೂ ನಾನು ನಾಮಪತ್ರ ವಾಪಸ್ ಪಡೆಯುವುದಿಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಬಿ-ಫಾರಂ ಸಿಗದಿದ್ದರೂ ಸಹ ತಾನು ಕಾಂಗ್ರೆಸ್ ಅಭ್ಯರ್ಥಿ ಎಂದು ಕಾಂಗ್ರೆಸ್ ಬಾವುಟಗಳೊಂದಿಗೆ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಬಂದ ಮುದ್ದಹನುಮೇಗೌಡ ಅವರು ನಾಮಪತ್ರ ಸಲ್ಲಿಸಿದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ನಾಮಪತ್ರ ಸಲ್ಲಿಸುವುದಕ್ಕೆ ಮುನ್ನಾ ಜನರನ್ನುದ್ದೇಶಿಸಿ ಮಾತನಾಡಿದ ಅವರು, ನಾನು ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತಿದ್ದೇನೆ, ಕಾರಣವಿಲ್ಲದೆ ನನಗೆ ಟಿಕೆಟ್ ನಿರಾಕರಿಸಲಾಗಿದೆ, ಯಾವುದೇ ಕಾರಣಕ್ಕೂ ನಾಮಪತ್ರ ವಾಪಸ್ ಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ತುಮಕೂರು : ದೇವೇಗೌಡ ವಿರುದ್ಧ ಇಬ್ಬರು ಕಾಂಗ್ರೆಸ್‌ ನಾಯಕರ ನಾಮಪತ್ರ ತುಮಕೂರು : ದೇವೇಗೌಡ ವಿರುದ್ಧ ಇಬ್ಬರು ಕಾಂಗ್ರೆಸ್‌ ನಾಯಕರ ನಾಮಪತ್ರ

ಕ್ರಿಯಾಶೀಲ ಸಂಸದನಾಗಿದ್ದರೂ ಸಹ ನನಗೆ ಟಿಕೆಟ್ ನಿರಾಕರಿಸಲಾಗಿದೆ, ನನ್ನನ್ನು ಬಲಿಪಶು ಮಾಡಲಾಗಿದೆ, ಆದರೆ ನಾನು ಬಲಿಪಶು ಆಗುವುದಿಲ್ಲ, ನನ್ನನ್ನೇ ಬೇಕಾದರೆ ಮೈತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಲಿ ಎಂದು ಮುದ್ದಹನುಮೇಗೌಡ ಅವರು ಸವಾಲು ಹಾಕಿದರು.

'ದೇವೇಗೌಡರ ಪಾಳೆಗಾರಿಕೆ ಸಹಿಸಲ್ಲ'

'ದೇವೇಗೌಡರ ಪಾಳೆಗಾರಿಕೆ ಸಹಿಸಲ್ಲ'

ಇದೇ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಕೆ.ಎನ್.ರಾಜಣ್ಣ, ಚುನಾವಣೆ ಎಂದರೆ ಪಾಳೆಗಾರಿಕೆ ಎಂದು ದೇವೇಗೌಡ ಅವರು ತಿಳಿದಂತಿದ್ದಾರೆ. ಎಲ್ಲ ಕ್ಷೇತ್ರದಲ್ಲೂ ಅವರ ಕುಟುಂಬವೇ ಇರಬೇಕು ಎಂದರೆ ಹೇಗೆ? ದೇವೇಗೌಡ ಅವರ ಪಾಳೇಗಾರಿಕೆ ಸಹಿಸುವುದಿಲ್ಲ ಎಂದು ಹೇಳಿದರು.

ಲೋಕಸಮರ LIVE: ನಿಖಿಲ್ ನಾಮಪತ್ರ ಸಲ್ಲಿಕೆಗೆ ಮಂಡ್ಯದಲ್ಲಿ ಜನಸಾಗರ ಲೋಕಸಮರ LIVE: ನಿಖಿಲ್ ನಾಮಪತ್ರ ಸಲ್ಲಿಕೆಗೆ ಮಂಡ್ಯದಲ್ಲಿ ಜನಸಾಗರ

'ಟಿಕೆಟ್ ನಿರಾಕರಿಸಿದ್ದಕ್ಕೆ ಕಾರಣ ಕೊಡಿ'

'ಟಿಕೆಟ್ ನಿರಾಕರಿಸಿದ್ದಕ್ಕೆ ಕಾರಣ ಕೊಡಿ'

ಹಾಲಿ ಸಂಸದರಾಗಿರುವ ಮುದ್ದಹನುಮೇಗೌಡ ಅವರಿಗೆ ಟಿಕೆಟ್ ನಿರಾಕರಿಸಿರುವದಕ್ಕೆ ಕಾರಣ ನೀಡಬೇಕು ಎಂದು ಆಗ್ರಹಿಸಿದ ಅವರು, ಸಕ್ರಿಯವಾಗಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಸಂಸದರಿಗೆ ಟಿಕೆಟ್ ಬೇರೆಯವರಿಗೆ ನೀಡಿರುವುದನ್ನು ಸಹಿಸುವುದಿಲ್ಲ ಎಂದು ಅವರು ಹೇಳಿದರು.

ಬೆಂಗಳೂರು ಉತ್ತರ ಕ್ಷೇತ್ರದ ಆಫರ್ ತಿರಸ್ಕರಿಸಿದ ಮುದ್ದಹನುಮೇಗೌಡ ಬೆಂಗಳೂರು ಉತ್ತರ ಕ್ಷೇತ್ರದ ಆಫರ್ ತಿರಸ್ಕರಿಸಿದ ಮುದ್ದಹನುಮೇಗೌಡ

ಕಾಂಗ್ರೆಸ್ ಹಾಲಿ ಸಂಸದ ಮುದ್ದಹನುಮೇಗೌಡ

ಕಾಂಗ್ರೆಸ್ ಹಾಲಿ ಸಂಸದ ಮುದ್ದಹನುಮೇಗೌಡ

ಮುದ್ದಹನುಮೇಗೌಡ ಅವರು ಕಾಂಗ್ರೆಸ್‌ನ ಹಾಲಿ ಸಂಸದರು, ಮೈತ್ರಿ ಸೂತ್ರದಂತೆ ಹಾಲಿ ಸಂಸದರಿರುವ ಕ್ಷೇತ್ರದಲ್ಲಿ ಅವರಿಗೇ ಟಿಕೆಟ್ ನೀಡಬೇಕಾಗಿತ್ತು, ಆದರೆ ತುಮಕೂರನ್ನು ಜೆಡಿಎಸ್‌ಗೆ ಬಿಟ್ಟುಕೊಡಲಾಯಿತು. ಪ್ರಸ್ತುತ ದೇವೇಗೌಡ ಅವರು ಮೈತ್ರಿ ಅಭ್ಯರ್ಥಿಯಾಗಿ ತುಮಕೂರಿನಿಂದ ಕಣಕ್ಕೆ ಇಳಿಯುತ್ತಿದ್ದಾರೆ.

ಜೆಡಿಎಸ್ ಸಂಸದರು ಏನು ವಿದ್ಯಾರ್ಹತೆ ಪಡೆದಿದ್ದಾರೆ?

ದೇವೇಗೌಡ ಅವರಿಗೆ ಆತಂಕ

ದೇವೇಗೌಡ ಅವರಿಗೆ ಆತಂಕ

ಮುದ್ದಹನುಮೇಗೌಡ ಅವರು ನಾಮಪತ್ರ ಸಲ್ಲಿಸಿರುವುದು ದೇವೇಗೌಡ ಅವರಿಗೆ ಹಿನ್ನಡೆ ತರುವ ಸಾಧ್ಯತೆ ಇದೆ. ಮುದ್ದಹನುಮೇಗೌಡ ಅವರು ಸಕ್ರಿಯ ಸಂಸದರಾಗಿದ್ದರು, ತುಮಕೂರು ಕಾಂಗ್ರೆಸ್ ವಲಯದಲ್ಲಿ ಉತ್ತಮ ಪ್ರಭಾವವನ್ನೂ ಹೊಂದಿದ್ದಾರೆ.

English summary
Tumakuru congress MP Muddahanumegowda said i do not take my nomination back. He said i deserve congress ticket, i am active MP of Tumkur constituency. Deve Gowda contesting from Tumkur as coalition candidate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X