ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನ್ಯಾಯಬದ್ಧವಾಗಿ ಇದ್ದೇನೆ, ಧೈರ್ಯ- ನಂಬಿಕೆ ಇದೆ: ಡಿಕೆ ಶಿವಕುಮಾರ್

By ಕುಮಾರಸ್ವಾಮಿ
|
Google Oneindia Kannada News

ನೊಣವಿನಕೆರೆ (ತಿಪಟೂರು ತಾ., ತುಮಕೂರು ಜಿಲ್ಲೆ), ಅಕ್ಟೋಬರ್ 27: "ನನ್ನ ಕಷ್ಟ- ಸುಖ ಎಲ್ಲ ಸಂದರ್ಭಗಳಲ್ಲೂ ನಾನು ನಂಬಿಕೊಂಡು ಬಂದಿರುವಂಥ ಕಾಡು ಸಿದ್ದೇಶ್ವರ ಅಜ್ಜನನ್ನು ಭೇಟಿ ಮಾಡಿ, ಆಶೀರ್ವಾದ ಪಡೆಯುತ್ತಾ ಬಂದಿದ್ದೇನೆ. ನಿನ್ನೆಯೇ ಇಲ್ಲಿಗೆ ಬರಬೇಕಿತ್ತು. ಆದರೆ ಆಗಲಿಲ್ಲ. ಇವತ್ತು ಕುಟುಂಬ ಸಮೇತವಾಗಿ ಬಂದು ಪ್ರಾರ್ಥನೆ ಸಲ್ಲಿಸಿದ್ದೇನೆ" ಎಂದು ಭಾನುವಾರ ಕಾಂಗ್ರೆಸ್ ಮುಖಂಡ ಶಿವಕುಮಾರ್ ಹೇಳಿದರು.

ಅಭಿಮಾನಿಗಳು, ಕಾರ್ಯಕರ್ತರಿಗೆ ಡಿಕೆಶಿ ಮಾಡಿದ ಮನವಿ ಏನು?ಅಭಿಮಾನಿಗಳು, ಕಾರ್ಯಕರ್ತರಿಗೆ ಡಿಕೆಶಿ ಮಾಡಿದ ಮನವಿ ಏನು?

ಜಾರಿ ನಿರ್ದೇಶನಾಲಯದ ಕೋರ್ಟ್ ನಿಂದ ಜಾಮೀನು ಸಿಕ್ಕ ನಂತರ ಶನಿವಾರ ಬೆಂಗಳೂರಿಗೆ ಹಿಂತಿರುಗಿದ ಅವರು, ಭಾನುವಾರದಂದು ಭೇಟಿ ನೀಡಿದರು. ಈ ವೇಳೆ ಮಾತನಾಡಿದ ಅವರು, ನನ್ನ ಕಷ್ಟದ ಸಂದರ್ಭದಲ್ಲಿ ಆ ದೇವರು ನನ್ನ ಕೈ ಹಿಡಿದಿದ್ದಾನೆ. ಇನ್ನು ನಾನು ನ್ಯಾಯಬದ್ಧವಾಗಿ ಇರುವುದರಿಂದ ಧೈರ್ಯ, ನಂಬಿಕೆ ಎಲ್ಲವೂ ಇದೆ ಎಂದರು.

I Am Abide To Law, Have Faith And Courage Coming Out Of All These Allegation: DK Shivakumar

ನನ್ನ ಸಲುವಾಗಿ, ಪರವಾಗಿ ಬೇಕಾದಷ್ಟು ಜನ ಪೂಜೆ- ಪುನಸ್ಕಾರಗಳನ್ನು ಮಾಡಿದ್ದಾರೆ. ಇನ್ನು ಒಕ್ಕಲಿಗ ಸಮುದಾಯದವರು ಪ್ರತಿಭಟನೆ ನಡೆಸಿದ ವೇಳೆ ನಂಜಾವಧೂತ ಸ್ವಾಮೀಜಿ ರಸ್ತೆಗೆ ಇಳಿದು ಪ್ರತಿಭಟನೆ ನಡೆಸಿದ್ದಾರೆ. ಈಗ ಅವರ ಬಳಿ ಆಶೀರ್ವಾದ ಪಡೆಯಬೇಕಿದೆ. ಅದಕ್ಕಾಗಿ ಶಿರಾದಲ್ಲಿ ಇರುವ ಮಠಕ್ಕೆ ಹೋಗುತ್ತಾ ಇದ್ದೇನೆ ಎಂದು ಅವರು ಹೇಳಿದರು.

English summary
Senior Congress leader D. K. Shivakumar said, have faith and courage. Come out of all allegation. He spoke in Tumakuru district, Tiptur taluk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X