ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿಕೆಶಿಗೆ ಜೈಲು ನಿಶ್ಚಿತ; ಗೌಡ್ರ ಕುಟುಂಬದಿಂದ್ಲೂ ಗಣಿ ಅಕ್ರಮ

By Srinath
|
Google Oneindia Kannada News

ತುಮಕೂರು, ಮೇ 6: ರಾಜ್ಯದಲ್ಲಿ ವ್ಯಾಪಕವಾಗಿ ನಡೆದಿರುವ ಗಣಿ ಅಕ್ರಮಗಳ ವಿರುದ್ಧ ನಿರಂತರ ಹೋರಾಟ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ ಎಸ್ ಆರ್ ಹಿರೇಮಠ್ ಅವರು ಇದೀಗ ತಮ್ಮ ಅಸ್ತ್ರವನ್ನು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ಕುಟುಂಬದತ್ತ ತಿರುಗಿಸಿದ್ದಾರೆ.

ತನ್ಮೂಲಕ ಎಸ್ಆರ್ ಹಿರೇಮಠ್ ಅವರು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಚಿತಾವಣೆ ಮೇರೆಗೆ ಕಾಂಗ್ರೆಸ್ ನಾಯಕರ ವಿರುದ್ಧ ಮಾತ್ರವೇ ಹೋರಾಡುತ್ತಿದ್ದಾರೆ ಎಂಬ ವಾದಕ್ಕೆ ಪೆಟ್ಟುಬಿದ್ದಿದೆ.

hd-ramesh-involved-in-illegal-minig-sr-hiremeth-tumkur

ಹಿರೇಮಠ್ ಅವರು ತುಮಕೂರಿನಲ್ಲಿ ಮಾತನಾಡುತ್ತಾ ತಾಜಾ ಆಗಿ ದೇವೇಗೌಡ ಅವರ ಪುತ್ರ ಡಾ. ಎಚ್ ಡಿ ರಮೇಶ್ ಅವರ ಒಡೆತನದ ಲತಾ ಮೈನ್ಸ್ ಹಾಗೂ ಮಾಜಿ ಸಚಿವ ವಿ ಸೋಮಣ್ಣ ಅವರ ಮಾತಾ ಮಿನರಲ್ಸ್ ಕಂಪನಿಗಳು ಅಕ್ರಮವೆಸಗಿವೆ. ತುಮಕೂರು ಜಿಲ್ಲೆಯಲ್ಲಿ ಈ ಎರಡು ಕಂಪನಿಗಳೂ 200 ಎಕರೆಗೂ ಹೆಚ್ಚು ಅರಣ್ಯ ಭೂಮಿ ಒತ್ತುವರಿ ಮಾಡಿ 10 ಲಕ್ಷ ಮೆಟ್ರಿಕ್ ಟನ್ ಅದಿರನ್ನು ಅಕ್ರಮವಾಗಿ ಸಾಗಣೆ ಮಾಡಿವೆ ಎಂದು ಆರೋಪಿಸಿದ್ದಾರೆ. ಗಮನಾರ್ಹವೆಂದರೆ ಹಿಂದಿನಿಂದಲೂ ಈ ಇಬ್ಬರ ವಿರುದ್ಧ ಇದೇ ಅಕ್ರಮ ಗಣಿ ಆರೋಪ ಕೇಳಿಬರುತ್ತಿದೆ.

ಡಿಕೆಶಿಗೆ ಜೈಲು ನಿಶ್ಚಿತ:
ರಾಜ್ಯ ಸರಕಾರದ ಪ್ರಭಾವಿ ಸಚಿವ ಡಿಕೆ ಶಿವಕುಮಾರ್ ದೊಡ್ಡ ಕ್ರಿಮಿನಲ್ ಎಂದು ಹಿರೇಮಠ್ ಮತ್ತೆ ಝಾಡಿಸಿದ್ದಾರೆ. ರಾಜ್ಯದ ಮತ್ತೊಬ್ಬ ಗಣಿ ಅಕ್ರಮ ಕ್ರಿಮಿನಲ್ ಜನಾರ್ದನ ರೆಡ್ಡಿ ಈಗಾಗಲೇ ಜೈಲುಕಂಬಿ ಎಣಿಸುತ್ತಿದ್ದಾರೆ. ಅದೇ ರೀತಿ ಡಿಕೆಶಿ ಸಹ ಜೈಲು ಸೇರುವುದು ನಿಶ್ಚಿತ. ಮುಖ್ಯಮಂತ್ರಿ ಪಟ್ಟ ಕಾಣುತ್ತಿರುವ ಡಿಕೆಶಿ ಅವರು ನಡೆಸಿರುವ ಅಕ್ರಮಗಳ ಬಗ್ಗೆ ರಾಜ್ಯಪಾಲರಿಗೆ ದಾಖಲೆ ಸಮೇತ ದೂರು ನೀಡಲಾಗಿದೆ. ಇದರಲ್ಲಿ ನನ್ನ ಹೋರಾಟವನ್ನು ನಿಲ್ಲಿಸುವ ಮಾತೇ ಇಲ್ಲ' ಎಂದು ಹಿರೇಮಠ್ ಹೇಳಿದ್ದಾರೆ.

ನಗರದ ಜಿಲ್ಲಾ ವೈದ್ಯಕೀಯ ಸಂಘದ ಸಭಾಂಗಣದಲ್ಲಿ ಜನ ಸಂಗ್ರಾಮ್ ಪರಿಷತ್ ಹಾಗೂ ನೈಸರ್ಗಿಕ ಸಂಪನ್ಮೂಲ ಸಮಿತಿ ಸಹಯೋಗದಲ್ಲಿ ಆಯೋಜಿಸಲಾಗಿದ್ದ 'ಗಣಿ ಪ್ರದೇಶದ ಪುನಶ್ಚೇತನ ಮತ್ತು ಪುರ್ವಸತಿ ಸವಾಲುಗಳು' ವಿಷಯದ ಕುರಿತು ಮಾತನಾಡುತ್ತಾ ಹಿರೇಮಠ್ ಮೇಲಿನ ವಿಷಯಗಳ ಮೇಲೆ ಬೆಳಕು ಚೆಲ್ಲಿದರು.

English summary
Dr. HD Ramesh, son of former Prime Minister HD Deve Gowda is involved in illegal mining in Tumkur said SR Hiremath on May 6. He also reiterated that Congress Minister DK Shivakumar will be sent to jail for the illegal mining.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X