ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುಮಾರಸ್ವಾಮಿ ಜೆಡಿಎಸ್ ಪಕ್ಷ ಇಟ್ಕೊಂಡು ಜೀವನ ಮಾಡ್ತಾವ್ನೆ! ಶಾಸಕ ಶ್ರೀನಿವಾಸ್ ವಾಗ್ದಾಳಿ

By ತುಮಕೂರು ಪ್ರತಿನಿಧಿ
|
Google Oneindia Kannada News

ತುಮಕೂರು, ಜೂ.11: ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗೆ ಮತ ಹಾಕದೆ ಅಡ್ಡ ಮತದಾನ ಮಾಡಿದ್ದಾರೆ ಎಂದು ಆರೋಪಿಸಿ ಗುಬ್ಬಿ ಶಾಸಕ ಶ್ರೀನಿವಾಸ್ ಮನೆ ಮುಂದೆ ಇಂದು ಜೆಡಿಎಸ್ ಕಾರ್ಯಕರ್ತರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಆಂಜನಪ್ಪ ನೇತೃತ್ವದಲ್ಲಿ ಶಾಸಕ ಶ್ರೀನಿವಾಸ ಮನೆ ಮುಂದೆ ಜಮಾಯಿಸಿದ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಇದರಿಂದ ಕೆಲಕಾಲ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ನಂತರ ಸ್ಥಳದಲ್ಲಿದ್ದ ಪೊಲೀಸರು ಕಾರ್ಯಕರ್ತರನ್ನು ಸಮಾಧಾನಪಡಿಸಿದರು. ಇದೇ ವೇಳೆ, ಶಾಸಕ ಶ್ರೀನಿವಾಸ್ ಕೂಡ ಆಕ್ರೋಶಭರಿತರಾಗಿ ಜೆಡಿಎಸ್ ಕಾರ್ಯಕರ್ತರೊಂದಿಗೆ ವಾಗ್ವಾದ ನಡೆಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಶ್ರೀನಿವಾಸ್ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು, "ಅವನು ಯಾವುದರಲ್ಲಿ ಉತ್ತಮ ಅಂತಾ ಹೇಳಿ. ಬೆಳಗ್ಗೆ ಒಂದು ಹೇಳ್ತಾನೆ. ಸಂಜೆ ಒಂದು ಹೇಳ್ತಾನೆ," ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲೇ ವಾಗ್ಧಾಳಿ ನಡೆಸಿದರು.

"ನಾನು ಬ್ಯಾಲೆಟ್ ಪೇಪರ್ ತೋರಿಸುವಾಗ ಸರಿಯಾಗಿಯೇ ತೋರ್ತಿದ್ದೇನೆ. ಮೂರ್ನಾಲ್ಕು ನಿಮಿಷ ಹಿಡಿದುಕೊಂಡಿದ್ದೇನೆ. ಅದಾದ ಮೇಲೆ ಹೋಗಿ ವೋಟ್ ಹಾಕಿದ್ದೇನೆ. ಅವನೇನು ಕತ್ತೆ ಕಾಯುತ್ತಿದ್ದನಾ...? ಹೆಬ್ಬೆಟ್ಟು ತೆಗಿ ಅನ್ನಬೇಕಿತ್ತು. ನನಗಿರುವ ಮಾಹಿತಿ ಪ್ರಕಾರ ಕುಮಾರಸ್ವಾಮಿ ಮನೆಯವರೇ ನಾಟಕ ಮಾಡ್ತಿದ್ದಾರೆ. ನನ್ನನ್ನು ಮುಗಿಸಬೇಕು ಅಂತಾ ಹೇಳಿ, ಅವರೇ ತಮಗೆ ಬೇಕಾದವರಿಂದ ಕ್ರಾಸ್ ವೋಟಿಂಗ್ ಮಾಡಿಸಿದ್ದಾರೆ. ನನ್ನ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಲಾಗುತ್ತಿದೆ. ನನಗೂ, ಅವರಿಗೂ ಆಗೊಲ್ಲ ಅನ್ನೋದು ಗೊತ್ತು. ಈಗಾಗಲೇ ನನ್ನನ್ನು ಸೋಲಿಸಲೇ ಬೇಕು ಅಂತಾ ಷಡ್ಯಂತರ ಮಾಡಿದ್ದಾರೆ.ಇದು ಕೂಡ ಅದೇರೀತಿ ಷಡ್ಯಂತ್ರ," ಎಂದು ವಾಗ್ದಾಳಿ ನಡೆಸಿದರು.

ಇವರನ್ನ ಯಾರಾದ್ರೂ ಲೀಡರ್ ಅಂತಾ ಹೇಳ್ತಾರಾ

ಇವರನ್ನ ಯಾರಾದ್ರೂ ಲೀಡರ್ ಅಂತಾ ಹೇಳ್ತಾರಾ

"ಇದೇ ಕುಮಾರಸ್ವಾಮಿ ಕ್ರಾಸ್ ವೋಟಿಂಗ್ ಮಾಡ್ಸಿ, ನನ್ನ ಮೇಲೆ ಹಾಕುತ್ತಿದ್ದಾರೆ. ಅವರಿಗೆ ಗೊತ್ತಿತ್ತು ತಮ್ಮ ಅಭ್ಯರ್ಥಿ ಗೆಲ್ಲಲ್ಲ ಅಂತಾ, ಹೀಗಾಗಿ, ನನ್ನ ಮೇಲೆ ಗೂಬೆ ಕೂರಿಸಿ ತೇಜೋವಧೆ ಮಾಡುವ ಪ್ರಯತ್ನ ಮಾಡಿದ್ದಾರೆ. ನಾನು ಇವರಿಗೆ ಹೆದರಿಕೊಂಡು ಅಥವಾ ಬೇರೆ ಯಾರಿಗೋ ಹೆದರಿಕೊಂಡು ಯಾರಿಗೂ ಕಚ್ಚೆ ಕಟ್ಟಲ್ಲ. ನನ್ನ ಮನಃಸಾಕ್ಷಿ ವಿರುದ್ಧ ನಾನು ನಡೆಯಲ್ಲ. ನಾಚಿಕೆ ಇಲ್ಲ, ಮಾನ, ಮರ್ಯಾದೆ ಇಲ್ಲ. ಗಳಿಗೆಗೊಂದು, ಗಂಟೆಗೊಂದು ಹೇಳಿಕೊಂಡು ತಿರುಗುತ್ತಾರೆ. ಇವರನ್ನ ಯಾರಾದ್ರೂ ಲೀಡರ್ ಅಂತಾ ಹೇಳ್ತಾರಾ..?'' ಎಂದು ಪ್ರಶ್ನಿಸಿದರು.

ಆಪರೇಷನ್ ಕಮಲ ನಿಲ್ಲಿಸಿದ್ದೆ ನಾನು

ಆಪರೇಷನ್ ಕಮಲ ನಿಲ್ಲಿಸಿದ್ದೆ ನಾನು

ನಾನು ಬಿಜೆಪಿಯನ್ನು ಪ್ರಾರಂಭದಿಂದಲೂ ವಿರೋಧ ಮಾಡಿಕೊಂಡು ಬಂದಿದ್ದೇನೆ. ಆಪರೇಷನ್ ಕಮಲ ನಿಲ್ಲಿಸಿದ್ದೆ ನಾನು. ಹಾಕಿದ್ರೆ ನಾನು ಕಾಂಗ್ರೆಸ್‌ಗೆ ಹಾಕಿರುತ್ತೇನೆ. ನಾನೇನು ಇವನಿಗೆ ಹೆದರಿಕೊಳ್ಳಬೇಕಾ...? ನನ್ನ ವಿರುದ್ಧ ಅಭ್ಯರ್ಥಿಯನ್ನು ಹಾಕಿದ್ದ ಮೇಲೆ ಹೆದರಿಕೊಳ್ಳುವುದು ಹೇಗೆ ಬಂತು. ಕುಮಾರಸ್ವಾಮಿ ನಾನು ಹೆಬ್ಬೆಟ್ಟು ಇಟ್ಟುಕೊಂಡಿರೋದನ್ನ ನೋಡಿದ್ರಾ..? ಎಲ್ಲವನ್ನೂ ಕಲ್ಪನೆ ಮಾಡಿಕೊಂಡು ಹೇಳ್ತಾನೆ. ಒಬ್ಬನನ್ನ ತೇಜೋವಧೆ ಮಾಡಬೇಕು ಅಂದ್ರೆ ಏನೂ ಬೇಕಾದ್ರೂ ಮಾಡ್ತಾರೆ. ಇವರಯ ಅನಿರೀಕ್ಷಿತವಾಗಿ ಮುಖ್ಯಮಂತ್ರಿ ಆದವರು. ಯೋಗ್ಯತೆಯಿಂದ ಮುಖ್ಯಮಂತ್ರಿ ಆದವರನ್ನ. ಇನ್ನೊಂದು ಜನ್ಮ ಎತ್ತಿಬಂದರೂ ಇವರ ಪಕ್ಷ ಬಹುಮತ ಬರಲ್ಲ. ಒಕ್ಕಲಿಗರನ್ನ ತುಳಿಯೋದೇ ಇವರ ಒನ್ ಪಾಯಿಂಟ್ ಅಜೆಂಡಾ. ಒಳ್ಳೆಯ ಕಾರು, ಒಳ್ಳೆಯ ಬಟ್ಟೆ ಹಾಕಿಕೊಂಡು ಹೋದ್ರೆ, ಅವರ ಕೆಂಗಣ್ಣಿಗೆ ಗುರಿಯಾಗಿ ಹೋಗ್ತೇವೆ ಎಂದರು.

ಇನ್ನು ಮುಂದೆ ನೋಡಲಿ

ಇನ್ನು ಮುಂದೆ ನೋಡಲಿ

ಪಕೀರರು, ಪೇಪರ್ ಆಯೋರು ಇರ್ತಾರಲ್ಲ ಆ ತರಾ ಇರಬೇಕು. ಉಟ್ರೆ, ಬಿಟ್ರೆ ಅಂತಿದ್ರೆ ಕೊನೆಯ ತನಕಾ ಇಟ್ಕೊಂಡ್ತಾರೆ. ಇನ್ನು ಮುಂದೆ ನೋಡಲಿ, ಎಲ್ಲವನ್ನೂ ಬಿಚ್ಚಿಡುತ್ತೇವೆ. ಯಾವುದರಲ್ಲಿ ಪರಿಶುದ್ಧವಾಗಿ ಅವ್ನೆ, ಕಚ್ಚೆ ಸರಿಯಿಲ್ಲ. ಬಾಯಿ ಸರಿ ಇಲ್ಲ. ಏನು ನೈತಿಕತೆ ಇದೆ. ಇನ್ನೊಬ್ಬರ ಬಗ್ಗೆ ಮಾತನಾಡೋಕೆ. ಇವರದು ಏನು ಇದೆ ಅದನ್ನ ನೋಡಿಕೊಳ್ಳಬೇಕು. ಇವರ ವಿರುದ್ಧ ಹೋರಾಟ ಮಾಡೋದೆ ನನ್ನ ಮುಂದಿನ ನಡೆ. ನಾನು ಸೋತರೂ ಪರವಾಗಿಲ್ಲ. ಇವರ ಅಭ್ಯರ್ಥಿಯನ್ನು ಗೆಲ್ಲದೋಕೆ ಬಿಡೋಲ್ಲ. ಅವನೇ ಬಂದ್ರೂ ನಿಂತು ಗೆದ್ದುಬಿಡಲಿ, ನನ್ನ ಲೈಫ್ಲಾಂಗ್ ಅವರ ಮನೆಯಲ್ಲಿ ಕೂಲಿ ಮಾಡ್ತೇನೆ.

ಕುಮಾರಸ್ವಾಮಿ ಕಾಸು ಇಸ್ಕೊಂಡು ಬಂದು ಪ್ರತಿಭಟನೆ

ಕುಮಾರಸ್ವಾಮಿ ಕಾಸು ಇಸ್ಕೊಂಡು ಬಂದು ಪ್ರತಿಭಟನೆ

"ನನ್ನನ್ನು ತೇಜೋವಧೆ ಮಾಡಲು ಈ ಕಾಸು ಹೊಡೆಯುವುದು, ಕಾಸು ಕೊಡುವುದು ಕುಮಾರಸ್ವಾಮಿಯದ್ದು ಕೆಲಸ. ಕುಮಾರಸ್ವಾಮಿ ಹತ್ರ ಕಾಸು ಇಸ್ಕೊಂಡ್ ಬಂದು ಮನೆ ಮುಂದೆ ಪ್ರತಿಭಟನೆ ಮಾಡುತ್ತಿದ್ದಾರೆ. ಟಿಕೆಟ್ ಕೊಡ್ತೀನಿ ಅಂತ ಹೇಳಿ ಅವರ ಬಳಿ ಕಾಸು ಇಸ್ಕೊಳ್ತಾರೆ ಕುಮಾರಸ್ವಾಮಿ. ಹಳ್ಳಿ ಕಡೆ ನಾಲ್ಕೈದು ಎಕರೆ ಜಮೀನು ಇಟ್ಕೊಂಡು ಜೀವನ ಮಾಡಿದಂಗೆ ಇವರು ಜೆಡಿಎಸ್ ಪಕ್ಷ ಇಡ್ಕೊಂಡು ಜೀವನ ಮಾಡ್ತಾವ್ನೆ. ಕುಮಾರಸ್ವಾಮಿಗೆ ತಾಕತ್ತಿದ್ದರೆ ಗುಬ್ಬಿಯಲ್ಲಿ ಬಂದು ಚುನಾವಣೆ ಮಾಡಲಿ ನಿಂತು ಕೊಳ್ಳಲಿ. ಇದಕ್ಕೆಲ್ಲ ನಾನು ಹೆದರೋನಲ್ಲ," ಎಂದು ಜೆಡಿಎಸ್ ಶಾಸಕ ಶ್ರೀನಿವಾಸ್ ತಿಳಿಸಿದರು.

English summary
JDS activists today shouted slogans in front of Gubbi MLA SR Srinivas' house, alleging that he had cross-voted for a JDS candidate in the Rajya Sabha elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X