ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತುಮಕೂರು : ಜೆಡಿಎಸ್‌ಗೆ ಹಿನ್ನಡೆ, ಪಕ್ಷ ತೊರೆದ ಚಿದಾನಂದ ಗೌಡ

|
Google Oneindia Kannada News

Recommended Video

ಎಚ್ ಡಿ ಕುಮಾರಸ್ವಾಮಿ ಆಪ್ತ, ಜೆಡಿಎಸ್ ನಾಯಕ ಬಿಜೆಪಿಗೆ ಸೇರ್ಪಡೆ

ತುಮಕೂರು, ಏಪ್ರಿಲ್ 11 : ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಹಿನ್ನಡೆ ಉಂಟಾಗಿದೆ. ಕುಮಾರಸ್ವಾಮಿ ಆಪ್ತರಾದ ಚಿದಾನಂದ ಎಂ.ಗೌಡ ಅವರು ಪಕ್ಷ ಬಿಟ್ಟು ಬಿಜೆಪಿ ಸೇರಿದ್ದಾರೆ.

ಗುರುವಾರ ತುಮಕೂರಿನಲ್ಲಿ ಚಿದಾನಂದ ಎಂ.ಗೌಡ ಅವರು ಜೆಡಿಎಸ್ ಪಕ್ಷ ತೊರೆದು ಬಿಜೆಪಿ ಸೇರಿದರು. ಮಾಜಿ ಸಚಿವ ವಿ.ಸೋಮಣ್ಣ, ತುಮಕೂರು ಬಿಜೆಪಿ ಶಾಸಕ ಜ್ಯೋತಿ ಗಣೇಶ್ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು.

ಹೈಕಮಾಂಡ್ ಆದೇಶ ಪಾಲಿಸಿದ್ದೇನೆ ದುರಂತ ನಾಯಕನಾಗಿ ಇರುತ್ತೇನೆ:ಮುದ್ದಹನುಮೇಗೌಡಹೈಕಮಾಂಡ್ ಆದೇಶ ಪಾಲಿಸಿದ್ದೇನೆ ದುರಂತ ನಾಯಕನಾಗಿ ಇರುತ್ತೇನೆ:ಮುದ್ದಹನುಮೇಗೌಡ

ಚಿದಾನಂದ ಗೌಡ ಅವರು ಶಿರಾ ತಾಲೂಕಿನ ಪ್ರಭಾವಿ ಜೆಡಿಎಸ್ ನಾಯಕರು. ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣೆಗೆ ಏಳು ದಿನಗಳು ಬಾಕಿ ಇರುವಾಗ ಚಿದಾನಂದ ಅವರು ಪಕ್ಷವನ್ನು ಬಿಟ್ಟು ಬಿಜೆಪಿ ಸೇರಿದ್ದಾರೆ.

ತುಮಕೂರಿನಲ್ಲಿ ಇನ್ನೂ ಆರಿಲ್ಲ ದೇವೇಗೌಡರ ಮೇಲಿನ ಅಸಮಾಧಾನ?ತುಮಕೂರಿನಲ್ಲಿ ಇನ್ನೂ ಆರಿಲ್ಲ ದೇವೇಗೌಡರ ಮೇಲಿನ ಅಸಮಾಧಾನ?

HD Kumaraswamy close aide Chidanand M Gowda joins BJP

2018ರ ವಿಧಾನಸಭೆ ಚುನಾವಣೆಯಲ್ಲಿ ಚಿದಾನಂದ ಅವರು ಶಿರಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಬಿ.ಸತ್ಯನಾರಾಯಣ ಅವರಿಗೆ ಪಕ್ಷ ಟಿಕೆಟ್ ನೀಡಿತ್ತು. ಆಗ ಚಿದಾನಂದ ಗೌಡ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.

ತುಮಕೂರು ಕ್ಷೇತ್ರದ ಚುನಾವಣಾ ಪುಟ

ಟ್ರಾಕ್ಟರ್ ಓಡಿಸುವ ರೈತನ ಚಿನ್ನೆ ಪಡೆದು ಚುನಾವಣಾ ಕಣಕ್ಕಿಳಿದಿದ್ದ ಚಿದಾನಂದ ಗೌಡ ಅವರು 3610 ಮತಗಳನ್ನು ಪಡೆದು 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಬಿ.ಸತ್ಯನಾರಾಯಣ ಅವರು ಶಿರಾ ಕ್ಷೇತ್ರದಲ್ಲಿ ಜಯಗಳಿಸಿದ್ದರು.

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಶಿರಾ ವಿಧಾನಸಭಾ ಕ್ಷೇತ್ರ ಸೇರುತ್ತದೆ. ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಯಾಗಿ ಬಿ.ಎನ್.ಚಂದ್ರಪ್ಪ ಕಣದಲ್ಲಿದ್ದಾರೆ. ಬಿಜೆಪಿಯಿಂದ ಎ.ನಾರಾಯಣಸ್ವಾಮಿ ಅವರು ಅಭ್ಯರ್ಥಿ.

English summary
Set back for Chief Minister H.D.Kumaraswamy. Sira taluk JD(S) leader and Kumaraswamy close aide Chidanand M Gowda joins BJP. B.N.Chandrappa JD(S)-Congress candidate in Chitradurga lok sabah seat. Election will be held on April 18, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X