ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತುಮಕೂರಿನಲ್ಲಿ ಬಿಜೆಪಿಯ ಬಸವರಾಜು ವಿರುದ್ಧ ದೇವೇಗೌಡರಿಗೆ ಹಿನ್ನಡೆ

By ಕುಮಾರಸ್ವಾಮಿ
|
Google Oneindia Kannada News

Recommended Video

Lok Sabha Elections 2019: ತುಮಕೂರಿನಲ್ಲಿ ಬಿಜೆಪಿ ಅಭ್ಯರ್ಥಿ ಜಿ ಎಸ್ ಬಸವರಾಜು ವಿರುದ್ಧ ಎಚ್ ಡಿ ದೇವೇಗೌಡ ಹಿನ್ನಡೆ

ತುಮಕೂರು, ಮೇ 23: ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಮುನ್ನಡೆಯಲ್ಲಿದ್ದರೆ, ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ, ಮಾಜಿ ಪ್ರಧಾನಿ- ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹಿನ್ನಡೆ ಅನುಭವಿಸಿದ್ದಾರೆ. ಬಿಜೆಪಿಯ ಜಿ.ಎಸ್.ಬಸವರಾಜು ವಿರುದ್ಧ ದೇವೇಗೌಡರು ಹತ್ತು ಸಾವಿರಕ್ಕೂ ಹೆಚ್ಚು ಮತಗಳಿಂದ ಹಿನ್ನಡೆ ಅನುಭವಿಸುತ್ತಿದ್ದಾರೆ.

ಚುನಾವಣೆ ಫಲಿತಾಂಶ 2019: ರಾಜ್ಯವಾರು ಯಾವ ಪಕ್ಷಕ್ಕೆ ಎಷ್ಟು ಸ್ಥಾನ? ಚುನಾವಣೆ ಫಲಿತಾಂಶ 2019: ರಾಜ್ಯವಾರು ಯಾವ ಪಕ್ಷಕ್ಕೆ ಎಷ್ಟು ಸ್ಥಾನ?

ಕಾಂಗ್ರೆಸ್ ಬೆಂಬಲದೊಂದಿಗೆ ಕಣದಲ್ಲಿ ಇರುವ ಎಚ್.ಡಿ.ದೇವೇಗೌಡ ಅವರ ಪಾಲಿಗೆ ಇದು ಕೊನೆ ಲೋಕಸಭಾ ಚುನಾವಣೆ ಎಂದೇ ಪ್ರಚಾರ ಮಾಡಲಾಗಿತ್ತು. ಮೈಸೂರು ಕ್ಷೇತ್ರವನ್ನು ತನ್ನ ಬಳಿ ಇರಿಸಿಕೊಂಡ ಕಾಂಗ್ರೆಸ್, ಹಾಲಿ ಸಂಸದರು ಇದ್ದ ತುಮಕೂರು ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟಿತ್ತು. ಈ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

HD Deve Gowda trailing against BJP candidate GS Basavaraju in Tumakuru

ಆದರೆ, ಬಿಜೆಪಿಯ ಜಿ.ಎಸ್.ಬಸವರಾಜು ಭಾರೀ ಪೈಪೋಟಿ ನೀಡಿದ್ದು, 1,43,959 ಮತಗಳನ್ನು ಪಡೆದಿದ್ದರೆ, ಮೈತ್ರಿ ಅಭ್ಯರ್ಥಿ ಎಚ್.ಡಿ. ದೇವೇಗೌಡ 1,29,918 ಮತಗಳನ್ನು ಪಡೆದಿದ್ದಾರೆ. ಅಲ್ಲಿಗೆ ಆರಂಭದ ಹಂತದಲ್ಲಿ 14,041 ಮತಗಳ ಅಂತರದಿಂದ ಬಸವರಾಜು ಮುನ್ನಡೆ ಕಾಯ್ದುಕೊಂಡಿದ್ದಾರೆ.

English summary
Lok Sabha Elections 2019: Former PM and JDS supremo HD Deve Gowda trailing against BJP candidate GS Basavaraju in Tumakuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X