ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಚ್‌. ವಿಶ್ವನಾಥ್‌ಗೆ ಕೈ ತಪ್ಪಿದ ಟಿಕೆಟ್; ಸೋಮಶೇಖರ್ ಹೇಳಿದ್ದೇನು?

|
Google Oneindia Kannada News

ತುಮಕೂರು, ಜೂನ್ 19 : ಮಾಜಿ ಸಚಿವ ಎಚ್‌. ವಿಶ್ವನಾಥ್‌ಗೆ ವಿಧಾನ ಪರಿಷತ್ ಟಿಕೆಟ್ ಕೈ ತಪ್ಪಿದೆ. ಬಿಜೆಪಿ ಸರ್ಕಾರ ರಚನೆಗೆ ಕಾರಣರಾದವರಲ್ಲಿ ವಿಶ್ವನಾಥ್‌ಗೆ ಇನ್ನೂ ಯಾವುದೇ ಸ್ಥಾನಮಾನ ಸಿಕ್ಕಿಲ್ಲ. ಪರಿಷತ್ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರಿಗೆ ನಿರಾಸೆಯಾಗಿದೆ.

ತುಮಕೂರಿನಲ್ಲಿ ಸಹಕಾರ ಸಚಿವ ಎಸ್. ಟಿ. ಸೋಮಶೇಖರ್ ಈ ಕುರಿತು ಪ್ರತಿಕ್ರಿಯೆ ನೀಡಿದರು. "ಎಚ್. ವಿಶ್ವನಾಥ್‌ ಅವರಿಗೆ ಟಿಕೆಟ್ ಕೈ ತಪ್ಪಿದ ಬಗ್ಗೆ ನಾವೂ ಸಹ ಮುಖ್ಯಮಂತ್ರಿಗಳ ಜೊತೆ ಮಾತನಾಡಿದ್ದೇವೆ" ಎಂದು ಹೇಳಿದರು.

ಕೈ ತಪ್ಪಿದ ಬಿಜೆಪಿ ಟಿಕೆಟ್; ಎಚ್. ವಿಶ್ವನಾಥ್ ಹೇಳಿದ್ದೇನು? ಕೈ ತಪ್ಪಿದ ಬಿಜೆಪಿ ಟಿಕೆಟ್; ಎಚ್. ವಿಶ್ವನಾಥ್ ಹೇಳಿದ್ದೇನು?

"ಮುಂದಿನ ದಿನಗಳಲ್ಲಿ ಎಚ್. ವಿಶ್ವನಾಥ್‌ ಅವರಿಗೆ ಸೂಕ್ತ ಸ್ಥಾನಮಾನವನ್ನು ನೀಡುವ ಭರವಸೆಯನ್ನು ಯಡಿಯೂರಪ್ಪ ನೀಡಿದ್ದಾರೆ. ಈಗಾಗಲೇ ಮುಖ್ಯಮಂತ್ರಿಗಳು ಶೇ 90ರಷ್ಟು ಬೇಡಿಕೆಯನ್ನು ಈಡೇರಿಸಿದ್ದಾರೆ" ಎಂದು ಸೋಮಶೇಖರ್ ತಿಳಿಸಿದರು.

ವಿಶ್ವನಾಥ್ ಗೆ ಎಂಎಲ್ಸಿ ಟಿಕೆಟ್ ಮಿಸ್: ಶ್ರೀನಿವಾಸ್ ಪ್ರಸಾದ್ ಪ್ರತಿಕ್ರಿಯೆವಿಶ್ವನಾಥ್ ಗೆ ಎಂಎಲ್ಸಿ ಟಿಕೆಟ್ ಮಿಸ್: ಶ್ರೀನಿವಾಸ್ ಪ್ರಸಾದ್ ಪ್ರತಿಕ್ರಿಯೆ

H Vishwanath Will Get Post In Future Says ST Somashekar

"ಕೋರ್ ಕಮಿಟಿ ಸಭೆಯಲ್ಲಿ ಎಚ್. ವಿಶ್ವನಾಥ್ ಹೆಸರನ್ನು ಸೇರಿಸಲಾಗಿತ್ತು. ಆದರೆ, ಹೈಕಮಾಂಡ್ ಮಟ್ಟದಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಆದ್ದರಿಂದ, ಎಚ್. ವಿಶ್ವನಾಥ್‌ಗೆ ಟಿಕೆಟ್ ಕೈ ತಪ್ಪಿದೆ" ಎಂದರು.

ಪರಿಷತ್ ಟಿಕೆಟ್ ಘೋಷಣೆ; ಸಿದ್ದರಾಮಯ್ಯ ಮನೆಗೆ ನಾಯಕರ ದಂಡು! ಪರಿಷತ್ ಟಿಕೆಟ್ ಘೋಷಣೆ; ಸಿದ್ದರಾಮಯ್ಯ ಮನೆಗೆ ನಾಯಕರ ದಂಡು!

ಸಹಕಾರ ಸಚಿವ ಎಸ್. ಟಿ. ಸೋಮಶೇಖರ್ ಮತ್ತು ಬಿ. ಸಿ. ಪಾಟೀಲ್ ತುಮಕೂರಿನಲ್ಲಿ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದರು. ಶ್ರೀ ಶಿವಕುಮಾರ ಶ್ರೀಗಳ ಗದ್ದುಗೆ ಪೂಜೆಯನ್ನು ನೆರವೇರಿಸಿದರು. ಸಿದ್ದಲಿಂಗ ಸ್ವಾಮೀಜಿಗಳ ದರ್ಶನ ಪಡೆದು ಆಶೀರ್ವಾದ ಪಡೆದರು.

English summary
Minister S. T. Somashekar said that H. Vishwanath will get post in future. Vishwanath missed the legislative council election BJP ticket.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X