ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಂಧಿತ ಎನ್ಎಸ್ ಯುಐ ಕಾರ್ಯಕರ್ತರನ್ನು ಭೇಟಿ ಮಾಡಿದ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್

By ತುಮಕೂರು ಪ್ರತಿನಿಧಿ
|
Google Oneindia Kannada News

ತುಮಕೂರು, ಜೂ. 8: ಪ್ರತಿಭಟನೆ ಮಾಡಿದ್ದ ಎನ್ ಎಸ್ ಯು ಐ ಕಾರ್ಯಕರ್ತರ ಬಂಧನ ಖಂಡನೀಯ. ಬಿಜೆಪಿಯವರು ಅಂಬೇಡ್ಕರ್, ಬಸವಣ್ಣ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸುವ ವಿಚಾರ ತಿರುಚಿದ್ದಾರೆ. ಇದನ್ನು ವಿರೋಧಿಸಿ ಎನ್ ಎಸ್ ಯು ಐ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ. ಪ್ರತಿಭಟನೆ ನಮ್ಮ ಹಕ್ಕು, ಹಾಗಾಗಿ ಪ್ರತಿಭಟನೆ ಮಾಡಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಸಮರ್ಥಿಸಿಕೊಂಡಿದ್ದಾರೆ.

ಬುಧವಾರ ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಮನೆಯೊಳಗೆ ನುಗ್ಗಿದ್ರು, ಬೆಂಕಿ ಹಚ್ಚಿದ್ರು ಎಂದು ಸುಳ್ಳು ದೂರು ದಾಖಲಿಸಿದ್ದಾರೆ. ನಾವು ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತೇವೆ. ಬೇಲ್ ನಿಂದ ಅವರು ಹೊರಗೆ ಬರುತ್ತಾರೆ. ಈ ರೀತಿ ಮಾಡುವುದರಿಂದ ವಿದ್ಯಾರ್ಥಿಗಳ ಮನಸ್ಸು ಹಾಳು ಮಾಡುವ ಕೆಲಸ ಸರ್ಕಾರ ಮಾಡಬಾರದು ಎಂದು ತಿಳಿಹೇಳಿದರು.

 ಹಾಗಾಗಿ ಜೈಲಿನಲ್ಲೇ ನೋಡೋಕೆ ಬಂದಿದ್ದೇನೆ

ಹಾಗಾಗಿ ಜೈಲಿನಲ್ಲೇ ನೋಡೋಕೆ ಬಂದಿದ್ದೇನೆ

ಅಂಬೇಡ್ಕರ್ ಸಂವಿಧಾನ ಶಿಲ್ಪಿ ಅಲ್ಲ ಎನ್ನುತ್ತಾರೆ. ಬಸವಣ್ಣ ಬಗ್ಗೆ ಬೇರೆ ರೀತಿ ಬರೆದರೆ ಪ್ರತಿರೋಧ ಬಂದೇ ಬರುತ್ತದೆ. ಹಾಗಾಗಿ ಜೈಲಿನಲ್ಲೇ ನೋಡೋಕೆ ಬಂದಿದ್ದೇನೆ ಎಂದರು. ಇನ್ನು ಪ್ರವಾದಿ ವಿರುದ್ಧ ಹೇಳಿಕೆಗೆ ಭಾರತ ಕ್ಷಮೆ ಕೇಳಬೇಕು ಎಂದು ಇರಾನ್ ಇರಾಕ್ ರಾಷ್ಟ್ರಗಳ ಒತ್ತಾಯವಾಗಿದ್ದು, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ನಡೆಸುತ್ತಿದೆ. ಯಾರಾದರೂ ನಾಯಕರು ಹೇಳಿಕೆ ಕೊಟ್ಟರೆ ಬಿಜೆಪಿ ಅದನ್ನು ಸಮರ್ಥಿಸಿಕೊಳ್ಳಬೇಕು. ಇಲ್ಲ ಆ ಹೇಳಿಕೆ ನಮ್ಮದಲ್ಲ ಎಂದು ಹೇಳಬೇಕು, ಬೇರೆ ದೇಶಗಳಿಂದ ಪ್ರತಿಕ್ರಿಯೆ ಬರುವ ಮೊದಲು ಬಿಜೆಪಿ ಅದಕ್ಕೆ ಸ್ಪಷ್ಟನೆ ಕೊಡಬೇಕಿತ್ತು. ಈಗ ಆ ಹೇಳಿಕೆಯಿಂದ ನಾವು ದೂರ ಇದ್ದೇವೆ ಎನ್ನುತ್ತಾರೆ ಎಂದು ಡಾ. ಜಿ. ಪರಮೇಶ್ವರ್ ಆಕ್ರೋಶ ವ್ಯಕ್ತಪಡಿಸಿದರು.

ಇವತ್ತು ಭಾರತ ಹರಾಜು ಹಾಕುವ ಸ್ಥಿತಿಗೆ ಬಂದಿದೆ, ಹೊರದೇಶದಿಂದ ಥ್ರೆಟೆನಿಂಗ್ ಬರುತ್ತಿದೆ. ಆಲ್ ಖೈದಾದವರು ನಾವು ಬೊಂಬೆಯಲ್ಲಿ ಮತ್ತೆ ನಮ್ಮ ಚಟುವಟಿಕೆ ಶುರು ಮಾಡುತ್ತೇವೆ ಎಂಬ ಹಂತಕ್ಕೆ ತಲುಪಿದೆ. ಇದಕ್ಕೆ ಬಿಜೆಪಿ ಸರ್ಕಾರವೇ ನೇರವಾದ ಕಾರಣ. ಬಿಜೆಪಿ ಸರ್ಕಾರದ ನಮ್ಮ ದೇಶವನ್ನು ಪ್ರತಿನಿಧಿಸ್ತಾ ಇದೆ. ಹಾಗಾಗಿ ಬಿಜೆಪಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

 ವಿದ್ಯಾರ್ಥಿ ಸಂಘಟನೆಗೆ ಮಸಿ ಬಳಿಯುವ ಕೆಲಸ

ವಿದ್ಯಾರ್ಥಿ ಸಂಘಟನೆಗೆ ಮಸಿ ಬಳಿಯುವ ಕೆಲಸ

ಪಠ್ಯಪುಸ್ತಕದಲ್ಲಿರುವ ಲೋಪದೋಷಗಳನ್ನು ಸರಿಪಡಿಸಬೇಕೆಂದು ಆಗ್ರಹಿಸಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಎನ್.ಎಸ್.ಯು.ಐ ಕಾರ್ಯಕರ್ತರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ, ಅವರನ್ನು ಬಂಧಿಸಿ, ಜೈಲಿಗೆ ಹಾಕಿರುವುದನ್ನು ಖಂಡಿಸಿರುವ ವಿಧಾನಪರಿಷತ್ ಸದಸ್ಯ ಆರ್.ರಾಜೇಂದ್ರ, ಶುಕ್ರವಾರ ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ, ಬಂಧಿತ ಎನ್.ಎಸ್.ಯು.ಐ ಕಾರ್ಯಕರ್ತರಿಗೆ ಸಾಂತ್ವನ ಹೇಳಿ ಧೈರ್ಯ ತುಂಬುವ ಕೆಲಸ ಮಾಡಿದರು.

ನಗರದ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ, ಬಂಧಿತರೊಂದಿಗೆ ಕೆಲ ಕಾಲ ಮಾತನಾಡಿ, ಪ್ರಕರಣದ ಸಂಪೂರ್ಣ ವಿವರಣೆ ಪಡೆದ ಆರ್.ರಾಜೇಂದ್ರ, ಬಂಧಿತರಿಗೆ ಧೈರ್ಯ ತುಂಬಿರುವುದಲ್ಲದೆ, ಶಾಂತಿಯುತ ಪ್ರತಿಭಟನೆ ನಡಸಲು ಮುಂದಾದ ಕಾರ್ಯಕರ್ತರನ್ನು ಮನೆಗೆ ಬೆಂಕಿ ಹಚ್ಚಲು ಬಂದಿದ್ದರು ಎಂದು ಸುಳ್ಳು ಆರೋಪ ಹೊರಸಿ ಜೈಲಿಗೆ ಅಟ್ಟಿರುವುದು ಸರಿಯಲ್ಲ. ಶಾಂತಿಯುತ ಪ್ರತಿಭಟನೆಯ ಭಾಗವಾಗಿಯೇ ಆರ್‌ಎಸ್‌ಎಸ್ ಸಂಕೇತವಾದ ಚಡ್ಡಿಗೆ ಬೆಂಕಿ ಹಚ್ಚಿದ್ದಾರೆ. ಆದರೆ ಇದನ್ನು ಸಹಿಸದ ಬಿಜೆಪಿ ಮುಖಂಡರು, ಎನ್.ಎಸ್.ಯು.ಐ ಕಾರ್ಯಕರ್ತರು ಗುಂಡಾಗಳು ಎಂಬಂತೆ ಬಿಂಬಿಸಿ, ವಿದ್ಯಾರ್ಥಿ ಸಂಘಟನೆಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.g

 ಕಠಿಣ ಕ್ರಮಕ್ಕೆ ಗೃಹ ಸಚಿವರ ಆಗ್ರಹ

ಕಠಿಣ ಕ್ರಮಕ್ಕೆ ಗೃಹ ಸಚಿವರ ಆಗ್ರಹ

ಸಚಿವ ಬಿ.ಸಿ ನಾಗೇಶ್ ಅವರ ಮನೆಯ ಮೇಲಿನ ದಾಳಿ ನಡೆಸಿ, ಬೆಂಕಿ ಹಚ್ಚಲು ಮುಂದಾದ ಎನ್ ಎಸ್ ಯು ಐ ಕಾರ್ಯಕರ್ತರ ಕೃತ್ಯವನ್ನು ಖಂಡಿಸುತ್ತೇನೆ ಎಂದು ಗೃಹಸಚಿವರ ಆರಗ ಜ್ಞಾನೆಂದ್ರ ತಿಳಿಸಿದರು.

ತಿಪಟೂರಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಮನೆಯ ಮೇಲೆ ಎನ್ ಎಸ್ ಯು ಐ ಕಾರ್ಯಕರ್ತರ ದಾಳಿ ನಡೆದ ಹಿನ್ನಲೆಯಲ್ಲಿ ಶಿಕ್ಷಣ ಸಚಿವರ ಮನೆಗೆ ಗೃಹಸಚಿವ ಭೇಟಿ ನೀಡಿ ಸಾಂತ್ವನ ಹೇಳಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಇಗಾಗಲೇ ಸಚಿವರ ಮನೆ ಮೇಲೆ ದಾಳಿ ಮಾಡಲು ಯತ್ನಸಿದವರನ್ನು ಬಂಧಿಸಲಾಗಿದೆ. ಅಜಾತಶತ್ರು ಬಿ.ಸಿ.ನಾಗೇಶ್ ರವರಿಗೆ ಯಾರು ಶತ್ರುಗಳಿಲ್ಲ ಎಂದು ಭಾವಿಸಿ ಪಕ್ಷದ ತತ್ವ ಮತ್ತು ಸಿದ್ಧಾಂತಕ್ಕೆ ತಲೆಬಾಗಿ ಸಾಮಾನ್ಯ ಕಾರ್ಯಕರ್ತರಂತೆ ರಾಜಕೀಯವೇ ಸೇವೆ ಮಾಡುತ್ತಿದ್ದವರನ್ನು, ಸಹಿಸದ ಕೆಲ ಕಿಡಿಗೇಡಿ ಸಂಘಟನೆಗಳ ಹೇಯ ಕೃತ್ಯವಾಗಿದೆ. ಈ ಘಟನೆಗೆ ಕಾಂಗ್ರೆಸ್ ಕಾರ್ಯಕರ್ತರ ಕೈವಾಡವಿದೆ ಎಂದು ಶಂಕಿಸಲಾಗಿದ್ದು, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

 ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ

ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ

"ಅಶ್ವತ್ಥನಾರಾಯಣ ಮಾತನಾಡಿ, ಕಾಂಗ್ರೆಸ್ ಈ ದೇಶದಲ್ಲಿ ಪ್ರಜಾಪ್ರಭುತ್ವವನ್ನೇ ನಾಶ ಮಾಡಿ, ಗುಲಾಮಗಿರಿಯನ್ನು ಬೆಳೆಸಿದೆ. ಸ್ವತಂತ್ರ ಆಲೋಚನೆ ಇರುವವರಾರೂ ದಾಳಿಯಂಥ ಅನಾಗರಿಕ ಕೃತ್ಯಗಳಿಗೆ ಮುಂದಾಗುವುದಿಲ್ಲ. ಇದು ಕಾಂಗ್ರೆಸ್ಸಿನ ಸಾಂಸ್ಕೃತಿಕ, ಬೌದ್ಧಿಕ ಮತ್ತು ನೈತಿಕ ದಿವಾಳಿತನವನ್ನು ಎತ್ತಿ ತೋರಿಸುತ್ತದೆ. ಆದರೆ, ಇಂತಹ ಕೀಳು ತಂತ್ರಗಳಿಂದ ಬಿಜೆಪಿ ಸರಕಾರದ ಸ್ಥೈರ್ಯವನ್ನು ಕುಗ್ಗಿಸಲು ಎಂದಿಗೂ ಸಾಧ್ಯವಿಲ್ಲ. ಏಕೆಂದರೆ, ಕಾಂಗ್ರೆಸ್ ಪಕ್ಷವನ್ನು ದೇಶದ ಜನ ಈಗಾಗಲೇ ಕಸದ ಬುಟ್ಟಿಗೆ ಎಸೆದಿದ್ದಾರೆ" ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

"ನಾಗೇಶ್ ಅವರ ಮನೆಯ ಮೇಲೆ ಮಾಡಿರುವ ದಾಳಿಯು ಅಸಹಿಷ್ಣುತೆಯ ಸಂಕೇತವಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ, ವೈಚಾರಿಕ ಸ್ವಾತಂತ್ರ್ಯಗಳ ಬಗ್ಗೆ ಬಿಜೆಪಿ ಬಗ್ಗೆ ಅನಗತ್ಯವಾಗಿ ಗೂಬೆ ಕೂರಿಸುತ್ತಿರುವ ಸಾಹಿತಿಗಳು ಈಗ ಜಾಣಮೌನಕ್ಕೆ ಜಾರಿರುವುದು ಅಪಾಯಕಾರಿ ಬೆಳವಣಿಗೆ. ಕಾಂಗ್ರೆಸ್ ತಾನು ಅಧಿಕಾರದಲ್ಲಿಲ್ಲದಿದ್ದಾಗ ಹೆಚ್ಚು ಅಪಾಯಕಾರಿ ಎನ್ನುವ ವಾಜಪೇಯಿಯವರ ಮಾತು ನಿಜವೆಂದು ಇದರಿಂದ ಸಾಬೀತಾಗಿದೆ" ಎಂದು ಅಶ್ವತ್ಥನಾರಾಯಣ ಹೇಳಿದ್ದಾರೆ.

ಪಠ್ಯಪುಸ್ತಕ ಮರುಪರಿಷ್ಕರಣೆಯನ್ನು ಬೌದ್ಧಿಕವಾಗಿ ಎದುರಿಸಲಾಗದ ಕಾಂಗ್ರೆಸ್ ಪಕ್ಷದ ಭಟ್ಟಂಗಿಗಳು ಸಚಿವ ಬಿ.ಸಿ.ನಾಗೇಶ್ ಅವರ ತಿಪಟೂರಿನ ನಿವಾಸದ ಮೇಲೆ ದಾಳಿ ನಡೆಸಿರುವುದು ಹೇಡಿತನ ಮತ್ತು ಅವಿವೇಕದ ಪರಮಾವಧಿ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಖಂಡಿಸಿದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
Former DCM G Parameshwar visited Tumkur district prison on Wednesday to meet NSUI activists who were arrested for protesting in front of minister BC Nagesh's residense.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X