ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇವೇಗೌಡರಿಗೆ ಬುದ್ಧಿ ಭ್ರಮಣೆಯಾಗಿದೆ ಎಂದ ತುಮಕೂರಿನ ಬಿಜೆಪಿ ಅಭ್ಯರ್ಥಿ

By ಕುಮಾರಸ್ವಾಮಿ
|
Google Oneindia Kannada News

Recommended Video

ದೇವೇಗೌಡರ ವಿರುದ್ಧ ಮಾತನಾಡಿದ ಅವರ ಪ್ರತಿಸ್ಪರ್ಧಿ: Lok Sabha Elections 2019

ತುಮಕೂರು, ಏಪ್ರಿಲ್ 22: ಲೋಕಸಭೆ ಚುನಾವಣೆ ಮತದಾನ ಮುಗಿದ ನಂತರ ತುಮಕೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಅವರು ಮಾಜಿ ಪ್ರಧಾನಿ- ಜೆಡಿಎಸ್ ವರಿಷ್ಠ ದೇವೇಗೌಡರ ವಿರುದ್ಧ ಸೋಮವಾರ ಹರಿಹಾಯ್ದಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ತುಮಕೂರಿನಲ್ಲಿ ಯಾರೂ ಷಂಡರಿಲ್ಲ. ದೇವೇಗೌಡರು ಅವರ ಲೆಕ್ಕಕ್ಕೆ ದೊಡ್ಡವರೇ ಇರಬಹುದು. ಅದರೆ ನಮ್ಮ ಜಿಲ್ಲೆಯಲ್ಲೂ ಅತಿರಥ ಮಹಾರಥ ನಾಯಕರಿದ್ದಾರೆ. ಅಂಥ ನಾಯಕರು ಗೆದ್ದು, ಜಿಲ್ಲೆಗೆ ಸಹಕಾರ ಕೊಟ್ಟಿದ್ದಾರೆ ಎಂದು ಜಿ.ಎಸ್.ಬಸವರಾಜು ವಾಗ್ದಾಳಿ ನಡೆಸಿದ್ದಾರೆ.

ತುಮಕೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ನಾನು ನಾಮ್ ಕೇ ವಾಸ್ಥೆ ಅಷ್ಟೇ. ನನಗಾಗಿ ನಮ್ಮ ಪಕ್ಷ ಕೆಲಸ ಮಾಡಿದೆ. ಮೇ 23ರಂದು ಅವರು ಗೆಲ್ಲುತ್ತಾರೋ, ನಮ್ಮ ಪಕ್ಷ ಗೆಲ್ಲುತ್ತದೋ ಎಂಬುದು ಗೊತ್ತಾಗುತ್ತದೆ. ನಾನು ಎಂದು ಹೇಳುವುದಿಲ್ಲ. ನಾನು ಎಂದು ಅಹಂನಿಂದ ಹೇಳುತ್ತಾರೆ. ಇದು ನಮ್ಮ ಪಕ್ಷದ ಗೆಲುವೇ ಹೊರತು ನನ್ನದಲ್ಲ್ ಎಂದು ಅವರು ಹೇಳಿದ್ದಾರೆ.

Former PM Deve Gowda looks like mentally abnormal: GS Basavaraju

ಎಚ್.ಡಿ.ದೇವೇಗೌಡರನ್ನು ವಿರೋಧಿಸಿದವರೆಲ್ಲ ಸ್ವರ್ಗದಲ್ಲಿ ಇದ್ದಾರೆ ಎಂಬ ಮಾತಿಗೆ ಪ್ರತಿಕ್ರಿಯಿಸಿದ ಅವರು, ಅವರೇ ಮೊಳೆ ಹೊಡೆದುಕೊಂಡು ಇದ್ದಾರೆ. ವೀರ ಅಭಿಮನ್ಯುವಾಗಿ ನೂರು ವರ್ಷ ಇರಲಿ ಎಂದು ಲೇವಡಿ ಮಾಡಿದ್ದಾರೆ.

ಇನ್ನು ದೇವೇಗೌಡರನ್ನು ಎದುರು ಹಾಕಿಕೊಂಡು ನಾನು ಕೆಲಸ ಮಾಡುತ್ತಾ ಇಲ್ಲ. ಪಕ್ಷದ ಅಭ್ಯರ್ಥಿಯಾಗಿ ಕೆಲಸ ಮಾಡುತ್ತೀನಿ. ಅವರೇನೋ ತಿಳಿವಳಿಕೆ ಇಲ್ಲದ ಹಾಗೆ ಮಾತನಾಡುತ್ತಾರೆ. ಮಾಜಿ ಪ್ರಧಾನಿ ಆದರೂ ಅವರಿಗೆ ತಿಳಿವಳಿಕೆ ಕಡಿಮೆ ಎಂದಿದ್ದಾರೆ.

ದೇವೇಗೌಡರು, ಕಾಂಗ್ರೆಸ್ ಹೈ ಕಮಾಂಡ್ ಮೇಲೆ ಅಬ್ಬರಿಸಿದ ಮಧುಗಿರಿ ರಾಜಣ್ಣದೇವೇಗೌಡರು, ಕಾಂಗ್ರೆಸ್ ಹೈ ಕಮಾಂಡ್ ಮೇಲೆ ಅಬ್ಬರಿಸಿದ ಮಧುಗಿರಿ ರಾಜಣ್ಣ

ಅವರು ಇಂತಹ ಹೇಳಿಕೆ ನೀಡಿದ್ದನ್ನು ನೋಡಿದರೆ ಅವರಿಗೆ ಬುದ್ಧಿ ಭ್ರಮಣೆಯಾಗಿದೆ. ಅವರಿಗೆ ಬುದ್ಧಿ ಮೆಚೂರ್ ಆಗಿಲ್ಲ ಅಂತ ಅನಿಸುತ್ತದೆ. ಇದು ಹಾಸನ ಅಲ್ಲ, ತುಮಕೂರು ಜಿಲ್ಲೆ. ಇಲ್ಲಿ ಅವರಿಗಿಂತ ರಾಜಕೀಯ ಮೇಧಾವಿಗಳು ಇದ್ದಾರೆ ಎಂದು ದೇವೇಗೌಡರ ವಿರುದ್ಧ ಜಿ.ಎಸ್.ಬಸವರಾಜು ಗುಡುಗಿದ್ದಾರೆ.

English summary
Former PM Deve Gowda looks like mentally abnormal, Tumakuru lok sabha constituency BJP candidate GS Basavaraju said on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X