ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತುಮಕೂರಿನಲ್ಲಿ ಹೇಮಾವತಿ ನೀರಿಗೆ ಉಪವಾಸ ಸತ್ಯಾಗ್ರಹ ಆರಂಭ

By ಕುಮಾರಸ್ವಾಮಿ
|
Google Oneindia Kannada News

ತುಮಕೂರು, ಜುಲೈ 31: ಒಂದು ವಾರದೊಳಗೆ ತುಮಕೂರು ಜಿಲ್ಲೆಗೆ ಹೇಮಾವತಿ ನದಿ ನೀರು ಹರಿಸಬೇಕು. ಇಲ್ಲದಿದ್ದರೆ ಆಮರಣಾಂತ ಉಪವಾಸ ಧರಣಿ ಆರಂಭಿಸುವುದಾಗಿ ಎಚ್ಚರಿಕೆ ನೀಡಿದ್ದ ಮಾಜಿ ಸಚಿವ ಸೊಗಡು ಶಿವಣ್ಣ ಸತ್ಯಾಗ್ರಹ ಆರಂಭ ಮಾಡಿದ್ದಾರೆ.

ತುಮಕೂರಿನಿಂದ ಜ್ಯೋತಿ ಗಣೇಶ್ ಅಖಾಡಕ್ಕೆ, ಶಿವಣ್ಣಗಿಲ್ಲ ಬಿಜೆಪಿ ಟಿಕೆಟ್ತುಮಕೂರಿನಿಂದ ಜ್ಯೋತಿ ಗಣೇಶ್ ಅಖಾಡಕ್ಕೆ, ಶಿವಣ್ಣಗಿಲ್ಲ ಬಿಜೆಪಿ ಟಿಕೆಟ್

ಇಲ್ಲಿನ ಕೋಟೆ ಆಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಶಿವಣ್ಣ ಹೇಮಾವತಿ ನದಿ ನೀರಿಗಾಗಿ ಸೋಮವಾರದಿಂದ ಉಪವಾಸ ಸತ್ಯಾಗ್ರಹ ಆರಂಭ ಮಾಡಿದ್ದಾರೆ. ಶಿವಣ್ಣ ಜತೆಗೆ ಬಿಜೆಪಿ ಮುಖಂಡರು ಹಾಗೂ ಬೆಂಬಲಿಗರು ಕೂಡ ಭಾಗವಹಿಸಿದ್ದಾರೆ.

Former minister Sogadu Shivanna fasting in Tumakuru for Hemavathi water

ಹೇಮಾವತಿ ನದಿ ನೀರು ಜಿಲ್ಲೆಗೆ ಹರಿಯುವವರೆಗೂ ಉಪವಾಸದಿಂದ ಹಿಂದೆ ಸರಿಯುವುದಿಲ್ಲ ಎಂದು ಶಿವಣ್ಣ ಪಟ್ಟು ಹಿಡಿದಿದ್ದು, ಹೇಮಾವತಿ ನದಿ ನೀರಿಗಾಗಿ ಹೋರಾಟ ಆರಂಭವಾದ ಬೆನ್ನಿಗೆ ವಿವಿಧ ಪಕ್ಷಗಳು ಸಹ ಚಳವಳಿ ಆರಂಭಿಸಿವೆ.

ಹೇಮಾವತಿ ನದಿ ನೀರಿಗಾಗಿ ಸೊಗಡು ಶಿವಣ್ಣ ಆರಂಭಿಸಿರುವ ಉಪವಾಸ ನಿರಶನಕ್ಕೆ ಹಲವು ಮಠಾಧೀಶರು ಸಹ ಬೆಂಬಲ ನೀಡಿದ್ದಾರೆ. ಚಿಕ್ಕತೊಟ್ಲುಕೆರೆ ಸುಕ್ಷೇತ್ರ ಅಧ್ಯಕ್ಷರಾದ ಅಟವಿ ಶಿವಲಿಂಗ ಮಹಾಸ್ವಾಮಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ.

ಮಹಾಭಾರತದ ಅಭಿಮನ್ಯುವಿನಂತಾಗಿದೆ ಬಿಜೆಪಿ ಅತೃಪ್ತರ ಸ್ಥಿತಿ: ಸೊಗಡು ಶಿವಣ್ಣಮಹಾಭಾರತದ ಅಭಿಮನ್ಯುವಿನಂತಾಗಿದೆ ಬಿಜೆಪಿ ಅತೃಪ್ತರ ಸ್ಥಿತಿ: ಸೊಗಡು ಶಿವಣ್ಣ

ವಿಧಾನಪರಿಷತ್ ಮಾಜಿ ಸದಸ್ಯ ಹುಲಿನಾಯ್ಕರ್ , ಬಿಜೆಪಿ ಮುಖಂಡರಾದ ಎಂ.ಬಿ.ನಂದೀಶ್, ಕೆ.ಪಿ.ಮಹೇಶ್, ರಮೇಶ್, ಬನಶಂಕರಿ ಬಾಬು, ಚಂದನ್, ಮಂಜುನಾಥ್ ಸೇರಿದಂತೆ ಬಿಜೆಪಿಯ ಹಲವು ಮುಖಂಡರು, ರೈತರು, ರೈತಪರ ಸಂಘಟನೆಗಳ ಸದಸ್ಯರು, ಕನ್ನಡ ಪರ ಸಂಘಟನೆಗಳು ಸದಸ್ಯರು ಉಪವಾಸ ನಿರಶನದಲ್ಲಿ ಪಾಲ್ಗೊಂಡಿದ್ದಾರೆ.

English summary
Former minister Sogadu Shivanna has started fasting in Tumakuru on Monday for Hemavathi water. Various seers supports him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X