ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

5 ವರ್ಷಗಳಿಗೊಮ್ಮೆ ಕನ್ಯೆಯರಿಗೆ ಕಾಲ್ತೊಳೆಯುವ ಹಬ್ಬ

By ತುಮಕೂರು ಪ್ರತಿನಿಧಿ
|
Google Oneindia Kannada News

ತುಮಕೂರು, ಜೂ9: ಹಬ್ಬಗಳಂದ್ರೆ ಸಂಭ್ರಮ, ಸಡಗರ. ಅದರಲ್ಲೂ ಗ್ರಾಮೀಣ ಭಾಗಗಳಲ್ಲಿ ಅನೇಕ ಬಗೆಯ ವಿಶಿಷ್ಠ ಹಬ್ಬಗಳನ್ನು ತಲೆತಲಾಂತರಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಪ್ರತಿಯೊಂದು ಹಬ್ಬವೂ ತನ್ನದೇ ಆದ ಪ್ರಸಿದ್ಧಿ, ವೈಶಿಷ್ಟ್ಯತೆ ಹೊಂದಿದ್ದು, ತುಮಕೂರು ಜಿಲ್ಲೆಯ ಪಾವಗಡದ ಲಂಬಾಣಿ ಸಮುದಾಯದವರು ಆಚರಿಸುತ್ತಿರುವ ಹಬ್ಬವೊಂದು ಒಮ್ಮೆ ಎಲ್ಲರನ್ನೂ ಆಕರ್ಷಿಸುತ್ತದೆ.

ಹೌದು, ದವಸ ಧಾನ್ಯ, ತೆಂಗಿನ ಕಾಯಿಯನ್ನು ತಲೆ ಮೇಲೆ ಹೊತ್ತು ಬರುವ ಕನ್ಯೆಯರಿಗೆ ಶುದ್ಧ ನೀರಿನಿಂದ ಕಾಲ್ತೊಳೆಯುವ ವಿಶೇಷ ಹಬ್ಬ ನಡೆಯುತ್ತಿದೆ. ಜಿಲ್ಲೆಯ ಪಾವಗಡ ತಾಲೂಕಿನ ಭೂಪೂರು ಸೇರಿದಂತೆ ಇತರೆ ಲಂಬಾಣಿ ತಾಂಡಗಳಲ್ಲಿ ಕನ್ಯೆಯರಿಗೆ ಕಾಲ್ತೊಳೆಯುವ ಹಬ್ಬ ನಡೆಯುತ್ತಿದೆ.

ಸ್ಮಶಾನ ಜಾಗವಿಲ್ಲದೇ ರಸ್ತೆಯಲ್ಲೇ ಶವ ಇಟ್ಟುಕೊಂಡು ಕೂತ ದಲಿತರುಸ್ಮಶಾನ ಜಾಗವಿಲ್ಲದೇ ರಸ್ತೆಯಲ್ಲೇ ಶವ ಇಟ್ಟುಕೊಂಡು ಕೂತ ದಲಿತರು

ಮನೆ ಮನೆಗಳಿಗೆ ತೆರಳಿ ನೈವೇದ್ಯ ಅರ್ಪಣೆ

ಪ್ರತಿ ಮನೆಯಿಂದ ಒಬ್ಬರು ಅಥವಾ ಇಬ್ಬರು ಕನ್ಯೆಯರು ತಮ್ಮ ಮನೆಯಿಂದ ದವಸ ಧಾನ್ಯ ಹೊತ್ತು ಕುಲದೇವತೆಗಳಾದ ತೋಳಚ ಶಕ್ತಿ, ಭೀಮಾಸತಿ, ಭೀಮಾ ಭೂಕ್ಯಾ ದೇವತೆಗಳನ್ನು ಆರಾಧಿಸುವ ಮನೆಗಳಿಗೆ ತೆರಳಿ ನೈವೇದ್ಯ ಅರ್ಪಿಸುತ್ತಾರೆ.

Festival for Virgins Every Five Years in This Community

ಈ ವೇಳೆ ಮನೆಗೆ ಬರುವ ಕನ್ಯೆಯರಿಗೆ ಶುದ್ದ ನೀರಿನಿಂದ ಕಾಲು ತೊಳೆದು, ಅವರ ಪಾದಗಳಿಂದ ಆರ್ಶಿವಾದ ಪಡೆದು ಮನೆಯೊಳಗೆ ಬರಮಾಡಿಕೊಳ್ಳುತ್ತಾರೆ. ಮನೆಗೆ ಬರುವ ವೇಳೆ ಕನ್ಯೆಯರು ಬರುವ ಹಾದಿಗೆ ನೀರನ್ನಾಕುವ ಮೂಲಕ ಬರಮಾಡಿಕೊಳ್ಳುತ್ತಾರೆ. ನಂತರ ಮನೆಯ ಮುಂದೆ ಬೆಂಕಿ ಹಾಕಿ, ಭೂಮಿಗೆ ನಮನ ಸಲ್ಲಿಸಿ, ವೆಂಕಟರಮಣಸ್ವಾಮಿ ಹಾಗೂ ಆಂಜನೇಯ ಸ್ವಾಮಿಗೆ ಹೋಮದ ಮೂಲಕ ಪೂಜೆ ಮಾಡಲಾಗುವುದು. ಬಳಿಕ ಎಲ್ಲರೂ ಸೇರಿ ಅಲ್ಲಿಯೇ ಊಟ ಸೇವಿಸುತ್ತಾರೆ. ಐದು ವರ್ಷಕ್ಕೊಮ್ಮೆ ಬರುವ ಈ ವಿಶಿಷ್ಟ ಹಬ್ಬವನ್ನು ಎರಡು ದಿನಗಳ ಕಾಲ ಸಂಭ್ರಮದಿಂದ ಆಚರಿಸಲಾಗುತ್ತದೆ.

ನಡೆಯದ ಪುಂಡನ ದಬ್ಬಾಳಿಕೆ; ರೈತರಿಗೆ ಮರಳಿತು ಬಗರ್‌ಹುಕುಂ ಜಮೀನುನಡೆಯದ ಪುಂಡನ ದಬ್ಬಾಳಿಕೆ; ರೈತರಿಗೆ ಮರಳಿತು ಬಗರ್‌ಹುಕುಂ ಜಮೀನು

ಲಂಬಾಣಿ ಯುವತಿಯರಿಗೆ ದೀಪಾವಳಿ ಹಬ್ಬ ವಿಶೇಷತೆ

ದೀಪಾವಳಿಯು ಬರೀ ಬಾಣ, ಬಿರುಸುಗಳ ಸದ್ದಲ್ಲ, ಆದರಾಚೆಯೂ ಸಾಂಪ್ರಾದಾಯಿಕವಾದ ವಿಶಿಷ್ಟ ಆಚರಣೆ, ಆದರಲ್ಲೂ ಲಂಬಾಣಿ ಸಮುದಾಯದವರು ಬೆಳಕಿನ ಹಬ್ಬ ದೀಪಾವಳಿಯನ್ನು ವಿಶೇಷವಾಗಿ ಆಚರಿಸುತ್ತಾರೆ. ಇನ್ನೂ ದೀಪಾವಳಿಯು ಲಂಬಾಣಿ ಯುವತಿಯರ ಹಬ್ಬವೆಂದೂ ಕರೆಯುತ್ತಾರೆ.

ಬೆಟ್ಟ-ಗುಡ್ಡದಲ್ಲಿ ವಿವಿಧ ಬಗೆಯ ಹೂಗಳನ್ನ ಸಂಗ್ರಹಿಸುತ್ತಿರೋ ಯುವತಿಯರು, ಮನೆ ಮನೆಗೆ ತೆರಳಿ ಸೆಗಣಿ ಮೇಲೆ ಹೂಗಳಿಂದ ಅಲಂಕಾರ ಬಳಿಕ ಸಾಂಪ್ರಾದಾಯಿಕ ಬಟ್ಟೆ ಧರಿಸಿ ವಾದ್ಯಗೋಷ್ಠಿಗೆ ಹೆಜ್ಜೆ ಹಾಕ್ತಿರೋ ಹೆಂಗಳೆಯರು.ಈ ಸಾಂಪ್ರದಾಯಿಕ ವಿಶಿಷ್ಟ ಆಚರಣೆ ಕಂಡು ಬಂದಿದ್ದು ಗಡಿಗಾಡು ಪಾವಗಡದಲ್ಲಿ. ಆಧುನಿಕ ಭರಾಟೆಯಲ್ಲಿ ಜಾನಪದ ಸೊಗಡಿನ ಅನೇಕ ನೃತ್ಯ ಪ್ರಕಾರಗಳು, ಕಲೆಗಳು ಮರೆಯಾಗುತ್ತಿದೆ. ಆದರೆ ಲಂಬಾಣಿ ಸಮುದಾಯದವರು ಇಂದಿಗೂ ತಮ್ಮ ಸಾಂಪ್ರದಾಯದ ನೃತ್ಯಗಳನ್ನ ಉಳಿಸಿಕೊಂಡು ಬರುತ್ತಿರುವುದು ವಿಶೇಷ, ಹದಿನೈದು ದಿನಗಳ ಕಾಲ ತಾಂಡಾಗಳಲ್ಲಿ ದೀಪಾವಳಿಯ ಹಬ್ಬ ಸಂಭ್ರಮ ಮನೆ ಮಾಡಿರುತ್ತೆ.

(ಒನ್ಇಂಡಿಯಾ ಸುದ್ದಿ)

English summary
Rural Lambani community has several interesting customs and traditions. One of those is a festival for virgins. The unmarried girls' legs would be washed in this festival that comes once in five years. This festival is observed in Pavagad taluk of Tumkur district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X