• search
  • Live TV
ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಎಚ್.​ಡಿ ಕುಮಾರಸ್ವಾಮಿಗೆ ಕುರಿಮರಿ ನೀಡಿ ಋಣಭಾರ ತೀರಿಸಿದ ರೈತರು

By ತುಮಕೂರು ಪ್ರತಿನಿಧಿ
|

ತುಮಕೂರು, ಅಕ್ಟೋಬರ್ 23: ಮಾಜಿ ಮುಖ್ಯಮಂತ್ರಿ ಎಚ್.​ಡಿ ಕುಮಾರಸ್ವಾಮಿಗೆ ರೈತರು ಕುರಿಮರಿ ನೀಡಿ ಋಣಭಾರ ತೀರಿಸಿದ ವಿಶೇಷ ಸಂದರ್ಭ ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನಲ್ಲಿ ನಡೆದಿದೆ.

ಶಿರಾ ವಿಧಾನಸಭಾ ಉಪ ಚುನಾವಣೆ ಹಿನ್ನೆಲೆ ಜೆಡಿಎಸ್​ ಅಭ್ಯರ್ಥಿ ಅಮ್ಮಾಜಮ್ಮ ಅವರ ಪರವಾಗಿ ಮತಯಾಚಿಸಲು ಎಚ್.ಡಿ ಕುಮಾರಸ್ವಾಮಿ ಅವರು ಶಿರಾ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಈ ನಿಟ್ಟಿನಲ್ಲಿ ಗುರುವಾರ ಬರಗೂರಿನಿಂದ ಶಿರಾ ಕಡೆಗೆ ಹೋಗುತ್ತಿದ್ದ ಕುಮಾರಸ್ವಾಮಿ ಅವರನ್ನು ಮಾರ್ಗಮಧ್ಯೆ ಸೀಗಲಹಳ್ಳಿಯಲ್ಲಿ ಜನರು ವಿಶೇಷವಾಗಿ ಸನ್ಮಾನಿಸಿದರು.

'ತಾನು ಕಳ್ಳ, ಪರರ ನಂಬ' ಇದು ಕಾಂಗ್ರೆಸ್ ಪರಿಸ್ಥಿತಿ: ಡಿಸಿಎಂ ಸವದಿ

ರೈತರ ಸಾಲಮನ್ನಾ ಮಾಡಿದ ಕೃತಜ್ಞತಾ ಪೂರ್ವಕವಾಗಿ ರೈತರು ಹೊಲದಲ್ಲಿ ಬೆಳೆದಿದ್ದ ಪದಾರ್ಥಗಳು ಹಾಗೂ ಕುರಿಮರಿಯನ್ನು ಎಚ್​ಡಿಕೆಗೆ ನೀಡಿ ಋಣಭಾರ ತೀರಿಸಿದರು.

ಈ ಸಂದರ್ಭದಲ್ಲಿ ರೈತರ ಸನ್ಮಾನ ಸ್ವೀಕರಿಸಿದ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಭಾವುಕರಾಗಿ ಮಾತನಾಡಿದರು. ರೈತರಿಗಾಗಿ ಇನ್ನೂ ಸಾಕಷ್ಟು ಕೆಲಸ ಮಾಡುವ ಕನಸಿದ್ದು, ಜೆಡಿಎಸ್​ ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬಂದ ದಿನ ನನ್ನ ಕನಸು ನನಸಾಗಲಿದೆ ಎಂದರು.

English summary
A special moment was held at Sira taluk in Tumakuru district where farmers Gave lambs to former chief minister HD Kumaraswamy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X