ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತುಮಕೂರು-ಅರಸೀಕರೆ ಮಾರ್ಗ ವಿದ್ಯುತ್ ಚಾಲಿತ ರೈಲು ಸೇವೆಗೆ ಹಸಿರು ನಿಶಾನೆ

By ತುಮಕೂರು ಪ್ರತಿನಿಧಿ
|
Google Oneindia Kannada News

ತುಮಕೂರು, ಜೂ21: ಜನಸಾಮಾನ್ಯರ ಸಾರಿಗೆಯೆಂದೇ ಕರೆಯುವ ರೈಲು ಸಾರಿಗೆ ಮತ್ತು ಹೆದ್ದಾರಿ ರಸ್ತೆಗಳನ್ನು ಆಧುನಿಕರಣ ಮಾಡುವ ಕೆಲಸಗಳನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.

ನಗರದ ರೈಲ್ವೆ ನಿಲ್ದಾಣದಲ್ಲಿ ತುಮಕೂರು-ಅರಸೀಕರೆ ಮಾರ್ಗ ವಿದ್ಯುತ್ ಚಾಲಿತ ರೈಲು ಸೇವೆಗೆ ಹಸಿರು ನಿಶಾನೆ ತೋರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ತುಮಕೂರು- ಅರಸೀಕೆರೆ ಮಾರ್ಗದಲ್ಲಿ ಸಾಕಷ್ಟು ರೈಲುಗಳಿದ್ದರೂ ಜನಸಾಮಾನ್ಯರ ಓಡಾಟಕ್ಕೆ ಅನುಕೂಲವಾಗುವಂತಹ ರೈಲು ವ್ಯವಸ್ಥೆಯಿರಲಿಲ್ಲ. ಇಂದು ಕೇಂದ್ರ ಸರ್ಕಾರ ಈ ರೈಲ್ವೆ ಮಾರ್ಗವನ್ನು ವಿದ್ಯುದ್ದೀಕರಣಗೊಳಿಸಿ ಹೊಸ ಡೆಮು ರೈಲನ್ನು ಸಾಮಾನ್ಯರ ಓಡಾಟಕ್ಕೆ ಒದಗಿಸಿದೆ," ಎಂದರು.

ಬಿಜೆಪಿಯಿಂದ ನಮ್ಮ ನಾಯಕರ ಮನೋಸ್ಥೈರ್ಯ ಕುಗ್ಗಿಸುವ ಕೆಲಸ: ಟಿ.ಬಿ. ಜಯಚಂದ್ರಬಿಜೆಪಿಯಿಂದ ನಮ್ಮ ನಾಯಕರ ಮನೋಸ್ಥೈರ್ಯ ಕುಗ್ಗಿಸುವ ಕೆಲಸ: ಟಿ.ಬಿ. ಜಯಚಂದ್ರ

ಮೀಟರ್ ಗೇಜ್ ಮತ್ತು ಬ್ರಾಡ್ ಗೇಜ್ ಮಾರ್ಗಗಳ ಕಾಮಗಾರಿಗಳನ್ನು 2018 ರಲ್ಲಿ ಪ್ರಾರಂಭಿಸಿ 2022 ರಲ್ಲಿ ಲೋಕಾರ್ಪಣೆ ಮಾಡುತ್ತಿರುವುದು ಅಭಿವೃದ್ಧಿಯ ವೇಗವನ್ನು ತಿಳಿಯಬಹುದಾಗಿದೆ ಎಂದು ಹೇಳಿದರು.

Electric powered train service started in Tumkur-Araisikere route

ವಿಮಾನ ನಿಲ್ದಾಣಗಳ ಮಾದರಿಯಲ್ಲಿ ಆಧುನೀಕರಣ

ಈ ಹಿಂದೆ ರೈಲು ಅತ್ಯಂತ ಮಾಲಿನ್ಯಕಾರಕ ಸಾರಿಗೆ ಎನ್ನುತ್ತಿದ್ದರು. ಇಂದು ರೈಲ್ವೆ ಮಾರ್ಗಗಳನ್ನು ವಿದ್ಯುದ್ದೀಕರಣಗೊಳಿಸಿ ಮಾಲಿನ್ಯ ರಹಿತ ಸಾರಿಗೆ ಮಾಡಲಾಗುತ್ತಿದೆ ಎಂದರಲ್ಲದೇ, ರೈಲು ಮತ್ತು ಬಸ್ ನಿಲ್ದಾಣಗಳನ್ನು ಅತ್ಯಂತ ಕೊಳಕು ಪ್ರದೇಶಗಳೆಂಬಂತೆ ಕಾಣುತ್ತಿದ್ದರು. ಇಂದು ವಿದ್ಯುತ್ ದೀಪ, ಕುಡಿಯುವ ನೀರು ಸೇರಿ ಅತ್ಯಾಧುನಿಕ ಸೇವೆಗಳನ್ನು ಕಲ್ಪಿಸಿ ವಿಮಾನ ನಿಲ್ದಾಣಗಳ ಮಾದರಿಯಲ್ಲಿ ಆಧುನೀಕರಣ ಗೊಳಿಸಲಾಗುತ್ತಿದೆ. ತುಮಕೂರು, ತಿಪಟೂರು ಅರಸೀಕೆರೆ ಮಾರ್ಗವಾಗಿ ಮತ್ತೊಂದು ಪಾಸ್ಟ್ ಪ್ಯಾಸೆಂಜರ್ ರೈಲು ಓಡಿಸಲು ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಬಿಜೆಪಿ ಸರಕಾರ ರಾಜಕೀಯ ಪಿತೂರಿ ಆಡಳಿತ ನಡೆಸುತ್ತಿದೆ: ಡಾ.ಜಿ.ಪರಮೇಶ್ವರಬಿಜೆಪಿ ಸರಕಾರ ರಾಜಕೀಯ ಪಿತೂರಿ ಆಡಳಿತ ನಡೆಸುತ್ತಿದೆ: ಡಾ.ಜಿ.ಪರಮೇಶ್ವರ

ಜಿ.ಎಸ್.ಬಸವರಾಜು ಹೇಳಿಕೆ:

ಸಂಸದ ಜಿ.ಎಸ್ ಬಸವರಾಜು ಮಾತನಾಡಿ, "ಉಪನಗರ ರೈಲು ವ್ಯವಸ್ಥೆಯಿಂದಾಗಿ ತುಮಕೂರು ವೇಗವಾಗಿ ಅಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತಿದೆ. ತುಮಕೂರು-ಅರಸೀಕೆರೆ ರೈಲು ಮಾರ್ಗ ವಿದ್ಯುದ್ದೀಕರಣಗೊಳಿಸಿ ಹೊಸ ಡೆಮು ರೈಲನ್ನು ನೀಡಿರುವುದರಿಂದ ಈ ಭಾಗದ ಜನಸಾಮಾನ್ಯರ ಕನಸು ಕೈಗೂಡಿದೆ ಎಂದರು. ಕೇoದ್ರ ಸರ್ಕಾರವು ರೈಲು ಮತ್ತು ರಸ್ತೆಗಳ ಪುನರಾಭಿವೃದ್ಧಿಗೊಳಿಸುವುದು ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸುವುದಕ್ಕಾಗಿ 33 ಸಾವಿರ ಕೋಟಿ ರೂ.ಗಳ ಕಾರ್ಯಯೋಜನೆಯ ಅನುಷ್ಠಾನಕ್ಕೆ ಇಂದು ಚಾಲನೆ ನೀಡಲಾಗಿದೆ," ಎಂದು ತಿಳಿಸಿದರು.

8 ಪ್ಲಾಟ್ ಫಾರಂ ರೂಪಿಸಲು ಚಿಂತನೆ

ತುಮಕೂರು- ದಾವಣಗೆರೆ, ತುಮಕೂರು- ರಾಯದುರ್ಗ ರೈಲ್ವೆ ಯೋಜನೆಗಳು ಪ್ರಗತಿಯಲ್ಲಿದೆ. ಮಳವಳ್ಳಿ- ತುಮಕೂರು ಮಾರ್ಗದ ರೈಲ್ವೆ ಯೋಜನೆಯೂ ಬರಲಿದ್ದು, ತುಮಕೂರು ನಿಲ್ದಾಣವನ್ನು ಆಧುನೀಕರಣಗೊಳಿಸಿ 8 ಪ್ಲಾಟ್ ಫಾರಂಗಳನ್ನಾಗಿ ರೂಪಿಸಬೇಕಿದೆ. ಇದಕ್ಕಾಗಿ ಬೇಕಾಗಿರುವ 8-10 ಹತ್ತು ಎಕರೆ ಭೂಮಿಯನ್ನು ಪಡೆದು ಅಭಿವೃದ್ಧಿಗೊಳಿಸಬೇಕು ಎಂದು ಜಿ.ಎಸ್. ಬಸವರಾಜು ತಿಳಿಸಿದರು.

Electric powered train service started in Tumkur-Araisikere route

ಇದಕ್ಕೂ ಮುನ್ನ ಬೆಂಗಳೂರಿನ ಕೆಂಗೇರಿಯ ಕೊಮ್ಮಘಟ್ಟ ಮೈದಾನದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬೆಂಗಳೂರಿನ ಸರ್.ಎಂ. ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್, ಅರಸಿಕೇರೆ-ತುಮಕೂರು (96 ಕಿ.ಮೀ) ಯಲಹಂಕ-ಪೆನುಗೊಂಡ(120ಕಿ.ಮೀ) ಕೊಂಕಣ ರೈಲ್ವೆ ಜಾಲದ( 740 ಕಿ.ಮೀ) ಶೇ.100ರಷ್ಟು ವಿದ್ಯುದ್ದೀಕರಣಗೊಂಡಿರುವ ಅರಸೀಕೆರೆ, ತುಮಕೂರು, ಯಲಹಂಕದಿಂದ ಪ್ರಯಾಣಿಕರ ರೈಲು ಸೇವೆಗಳು ಹಾಗೂ ರತ್ನಗಿರಿ, ಮಡಗಾಂವ್ ಮತ್ತು ಉಡುಪಿಯಿಂದ ವಿದ್ಯುತ್ ಸೇವೆಗಳಿಗಾಗಿ ಆನ್‌ಲೈನ್ ಲಿಂಕ್ ಮೂಲಕ ಹಸಿರು ನಿಶಾನೆ ತೋರಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್ ಬೆಂಗಳೂರು ವಿಭಾಗದ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಮನ್ ದೀಪ್ ಕಪೂರ್ ಸೇರಿದಂತೆ ಇನ್ನಿತರ ರೈಲ್ವೆ ಅಧಿಕಾರಿಗಳು ನಾಗರೀಕರು ಹಾಜರಿದ್ದರು.

English summary
Electrification of the Tumkur-Arasekere route and provided a new DEMU train for public transportation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X