ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದಗಂಗಾ ಕ್ಷೇತ್ರದಲ್ಲಿ ಪೇಜಾವರ ಶ್ರೀಗಳನ್ನು ಪ್ರಧಾನಿ ಮೋದಿ ಸ್ಮರಿಸಿಕೊಂಡಿದ್ದು ಹೀಗೆ..

|
Google Oneindia Kannada News

ತುಮಕೂರು, ಡಿ 2: ಪ್ರಧಾನಿ ಮೋದಿ ತಮ್ಮ ಕರ್ನಾಟಕದ ಎರಡು ದಿನಗಳ ಭೇಟಿಯ, ಮೊದಲ ದಿನದ ಕಾರ್ಯಕ್ರಮಗಳನ್ನು ತುಮಕೂರಿನಲ್ಲಿ ಮುಕ್ತಾಯಗೊಳಿಸಿ, ಬೆಂಗಳೂರಿಗೆ ವಾಪಸ್ ಆಗಿದ್ದಾರೆ.

ತುಮಕೂರು ಸಿದ್ದಗಂಗಾ ಮಠದಲ್ಲಿ ಮಾತನಾಡುತ್ತಿದ್ದ ಮೋದಿ, ಡಾ.ಶಿವಕುಮಾರ ಸ್ವಾಮೀಜಿಯವರ ಜೊತೆಗೆ, ಪೇಜಾವರ ಮಠದ ವಿಶ್ವೇಶ್ವತೀರ್ಥ ಶ್ರೀಗಳನ್ನೂ ತಮ್ಮ ಭಾಷಣದಲ್ಲಿ ನೆನೆಪಿಸಿಕೊಂಡಿದ್ದಾರೆ.

ಮೋದಿ ತುಮಕೂರು ರ‍್ಯಾಲಿ ಜವಾಬ್ದಾರಿಯಿಂದ ಬಿಎಸ್ವೈ ಪರಮಾಪ್ತ ದೂರ..ದೂರ.. ಮೋದಿ ತುಮಕೂರು ರ‍್ಯಾಲಿ ಜವಾಬ್ದಾರಿಯಿಂದ ಬಿಎಸ್ವೈ ಪರಮಾಪ್ತ ದೂರ..ದೂರ..

ಎಂದಿನಂತೆ ಒಂದೆರಡು ವಾಕ್ಯ ಕನ್ನಡದಲ್ಲಿ ಮಾತನಾಡಿದ ಪ್ರಧಾನಿಗಳು, ಸಿದ್ದಗಂಗಾ ಶ್ರೀಗಳು ಎನ್ನುವ ಬದಲು, ಸಿದ್ದಲಿಂಗೇಶ್ವರ ಸ್ವಾಮೀಜಿ ಎಂದು ತಪ್ಪಾಗಿ ಸಂಬೋಧಿಸಿದರು.

During Speech PM Modi Remembered Pejawar Seer In Tumakuru Siddaganga Mutt

ಭಾಷಣದಲ್ಲಿ ಪೇಜಾವರ ಶ್ರೀಗಳನ್ನು ನೆನೆಪಿಸಿಕೊಳ್ಳುತ್ತಾ, "ನಾನು ಎಂತಹ ಸಮಯದಲ್ಲಿ ಕರ್ನಾಟಕಕ್ಕೆ ಬಂದಿದ್ದೇನೆ ಎಂದರೆ, ಈ ನಾಡಿನ ಇನ್ನೊಬ್ಬರು ಮಹಾನ್ ಸಂತರು ನಮ್ಮಿಂದ ದೂರವಾಗಿದ್ದಾರೆ"

"ಪೇಜಾವರ ಮಠದ ಪ್ರಮುಖರಾದಂತಹ ವಿಶ್ವೇಶ್ವತೀರ್ಥ ಶ್ರೀಗಳು ಬೌದ್ದಿಕವಾಗಿ ನಮ್ಮಿಂದ ದೂರವಾಗಿರುವುದು, ನನಗೆ ಶೂನ್ಯ ಭಾವನೆ ಕಾಡಿದೆ. ಈ ರೀತಿಯ ಘಟನೆಗಳು ನಮ್ಮ ಜೀವನದಲ್ಲಿ ನಡೆಯುತ್ತದೆ, ಅದನ್ನು ತಡೆಯಲು ಯಾರಿಂದಲೂ ಸಾಧ್ಯವಾಗುವುದಿಲ್ಲ".

"ಆದರೆ, ಇಂತಹ ಮಹಾನ್ ಸಂತರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ಸಾಗುವ ಮೂಲಕ, ಮಾನವತೆಗೆ ಮತ್ತು ತಾಯಿ ಭಾರತಾಂಬೆಯ ಸೇವೆಯನ್ನು ಮಾಡಬಹುದಾಗಿದೆ" ಎಂದು ಪ್ರಧಾನಿ ಮೋದಿ ಹೇಳಿದರು.

English summary
During In His Speech PM Modi Remembered Pejawar Seer In Tumakuru Siddaganga Mutt.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X