ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿ ಸರಕಾರ ರಾಜಕೀಯ ಪಿತೂರಿ ಆಡಳಿತ ನಡೆಸುತ್ತಿದೆ: ಡಾ.ಜಿ.ಪರಮೇಶ್ವರ

By ತುಮಕೂರು ಪ್ರತಿನಿಧಿ
|
Google Oneindia Kannada News

ತುಮಕೂರು, ಜೂ17: ''ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಪ್ರಕರಣದ ವಿಚಾರಣೆ ವಿಷಯದಲ್ಲಿ ಕೇಂದ್ರ ಸರ್ಕಾರ ತನ್ನ ಅಧಿಕಾರ ದುರುಪಯೋಗ ಮಾಡಿಕೊಂಡು ಪ್ರಜಾಪ್ರಭುತ್ವಕ್ಕೆ ದ್ರೋಹ ಮಾಡುತ್ತಿದೆ'' ಎಂದು ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊರಟಗೆರೆ ತಾಲ್ಲೂಕಿನ ಕಾಂಗ್ರೆಸ್ ಭವನ ಕಟ್ಟಡ ಕಾಮಗಾರಿ ವೀಕ್ಷಣೆ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ''ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಆಸ್ತಿ ವಿಚಾರದಲ್ಲಿ 2016 ರಲ್ಲಿ ನ್ಯಾಯಾಲಯ ರಾಹುಲ್‌ಗಾಂಧಿ ಸೋನಿಯಗಾಂಧಿಯವರಿಗೆ ನಿರ್ದೋಷಿಯಂದು ತೀರ್ಪು ನೀಡಿತ್ತು. ಆದರೆ ಬಿಜೆಪಿ ಪಕ್ಷದ ಕೇಂದ್ರ ಸರ್ಕಾರ ತನ್ನ ರಾಜಕೀಯ ಪಿತೂರಿಗೆ ಇಡಿಯನ್ನು ಬಳಸಿಕೊಂಡು ಮತ್ತೆ ಅವರ ವಿರುದ್ಧ ಕೇಸು ದಾಖಲಿಸಿ, ಬಂಧಿಸುವ ಹುನ್ನಾರ ನಡೆಸಿದೆ. ಇದು ಪ್ರಜಾಪ್ರಭುತ್ವಕ್ಕೆ ಬಿಜೆಪಿ ವರಿಷ್ಠರು ಮಾಡುತ್ತಿರುವ ಅನ್ಯಾಯ ಇದರ ವಿರುದ್ಧ ಕಾಂಗ್ರೆಸ್ ಪಕ್ಷವು ರಾಜ್ಯ ಸೇರಿದಂತೆ ದೇಶದೆಲ್ಲಡೆ ನ್ಯಾಯಕ್ಕಾಗಿ ಹೋರಾಟ ಮಾಡುತ್ತದೆ'' ಎಂದರು.

ಶಾಸಕ ಗುಬ್ಬಿ ಶ್ರೀನಿವಾಸ್ ಆಪ್ತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಶಾಸಕ ಗುಬ್ಬಿ ಶ್ರೀನಿವಾಸ್ ಆಪ್ತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ

ಸರ್ಕಾರಿ ಕಾರ್ಯಕ್ರಮವನ್ನುವಿಧಾನಸಭಾ ಚುನಾವಣೆಗೆ ಬಳಸುವ ಹುನ್ನಾರ

ವಿಶ್ವ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಜೂನ್.20-21 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಜ್ಯಕ್ಕೆ ಆಗಮಿಸುತ್ತಿದ್ದು, ಈ ವೇಳೆ ರೋಡ್ ಶೋ ನಡೆಸಿ ಅಪಾರ ಪ್ರಮಾಣದ ಜನರ ಸೇರಿ ಚುನಾವಣೆಗಳಿಗೆ ಪರೋಕ್ಷ ಪ್ರಚಾರ ಆರಂಭಿಸಲು ಬಿಜೆಪಿ ಚಿಂತನೆ ನಡೆಸಿದೆ. ಉದ್ಘಾಟಿಸುವ ಬಹುತೇಕ ಕಾರ್ಯಕ್ರಮಗಳು ಹಿಂದೆ ಕಾಂಗ್ರೆಸ್ ಪಕ್ಷವು ನೀಡಿದ್ದು, ಈಗ ಪೂರ್ಣವಾಗಿರುವ ಕೆಲಸಗಳು, ವಿಶ್ವ ಯೋಗ ದಿನಾಚರಣೆಯಲ್ಲಿ ಮೈಸೂರಿನಲ್ಲಿ ಭಾಗವಹಿಸುತ್ತಿರುವ ಪ್ರಧಾನಿ ಮೋದಿಯವರ ಸರ್ಕಾರಿ ಕಾರ್ಯಕ್ರಮವಾದರೂ, ಬಿಜೆಪಿ ಪಕ್ಷ ಅದನ್ನು ವಿಧಾನಸಭಾ ಚುನಾವಣೆಗೆ ಬಳಸುವ ಹುನ್ನಾರ ಮಾಡಿದೆ ಅದರೆ ಕಾಂಗ್ರೆಸ್ ಪಕ್ಷವು ಇದರ ಬಗ್ಗೆ ತಲೆಕೆಡಿಸಿಕೊಳುವುದಿಲ್ಲ ಎಂದು ಇದೇ ವೇಳೆ ತಿಳಿಸಿದರು.

Dr G Parameshwar slams BJP govt for Conspiracy over National Herald Case probe

ಸೇಡಿನ ರಾಜಕಾರಣ ಮಾಡುತ್ತಿದೆ: ಹೆಚ್.ಬಿ.ಮಂಜಪ್ಪ

ದಾವಣಗೆರೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಮಂಜಪ್ಪ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿರವರಿಗೆ ಕೇಂದ್ರ ಸರ್ಕಾರವು ಇಡಿ ದುರುಪಯೋಗಪಡಿಸಿಕೊಂಡು ನೊಟೀಸ್ ನೀಡಿರುವುದು ದ್ವೇಷದ ರಾಜಕಾರಣ. ಇದನ್ನು ವಿರೋಧಿಸಿ ದೇಶಾದ್ಯಂತ ಕಾಂಗ್ರೆಸ್ ಹೋರಾಟ ನಡೆಸುತ್ತಿದೆ. ಈ ವೇಳೆ ಗಲಭೆ, ಹಿಂಸಾಚಾರ ನಡೆದರೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರೇ ಹೊಣೆಗಾರರಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Dr G Parameshwar slams BJP govt for Conspiracy over National Herald Case probe

ವಿಜಯೇಂದ್ರ ಸ್ಪರ್ಧೆ ಖಚಿತ, ಕ್ಷೇತ್ರ ಅಂತಿಮವಾಗಿಲ್ಲ; ಬಿಎಸ್ ವೈವಿಜಯೇಂದ್ರ ಸ್ಪರ್ಧೆ ಖಚಿತ, ಕ್ಷೇತ್ರ ಅಂತಿಮವಾಗಿಲ್ಲ; ಬಿಎಸ್ ವೈ

ಗಡಿಪಾರಾದ ಅಮಿತ್ ಶಾ ಕೇಂದ್ರ ಗೃಹ ಸಚಿವರಾಗಿರುವುದು ದುರಂತ. ಅಚ್ಚೇ ದಿನ್ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿಯು ವಿಪಕ್ಷಗಳನ್ನು ಮಟ್ಟಹಾಕಲು ಯತ್ನಿಸುತ್ತಿದೆ. ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ಸೇಡಿನ ರಾಜಕಾರಣ ಮಾಡುತ್ತಿದೆ. ಅಧಿಕಾರ ಸಿಕ್ಕಿದೆ, ಜನರಿಗೆ ಒಳ್ಳೆಯದನ್ನು ಮಾಡಲಿ. ರೈತರ ಸಮಸ್ಯೆ, ನಿರುದ್ಯೋಗ, ತೈಲ ಬೆಲೆ ಹಾಗೂ ಸಿಲಿಂಡರ್ ದರ ಕಡಿಮೆ ಮಾಡುವ ಯಾವುದೇ ಪ್ರಯತ್ನ ಮಾಡುತ್ತಿಲ್ಲ ಎಂದು ಕಿಡಿಕಾರಿದರು.

English summary
Senior Congress leadr Dr G Parameshwar Slammed BJP govrnment for allegedly playing political conspiracy in National Herald Case and ED probe on Rahul Gandhi and others.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X