ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೆಡಿಕಲ್ ಸೀಟು ಹಂಚಿಕೆಯಲ್ಲಿ ಹಗರಣ ನಡೆದಿಲ್ಲ ಡಿಸಿಎಂ ಸ್ಪಷ್ಟನೆ

By Nayana
|
Google Oneindia Kannada News

ತುಮಕೂರು, ಸೆಪ್ಟೆಂಬರ್ 1: ಮೆಡಿಕಲ್ ಸೀಟು ಹಂಚಿಕೆಯಲ್ಲಿ. ಯಾವುದೇ ಹಗರಣ ನಡೆದಿಲ್ಲ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಸ್ಪಷ್ಟಪಡಿಸಿದ್ದಾರೆ.

ನೀಟ್‌ ರ‍್ಯಾಂಕಿಂಗ್‌ ಆಧರಿಸಿ ಎಂಬಿಬಿಎಸ್‌ ಸೀಟು ಹಂಚಿಕೆಗೆ ಚಾಲನೆನೀಟ್‌ ರ‍್ಯಾಂಕಿಂಗ್‌ ಆಧರಿಸಿ ಎಂಬಿಬಿಎಸ್‌ ಸೀಟು ಹಂಚಿಕೆಗೆ ಚಾಲನೆ

ಶನಿವಾರ ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೆಡಿಕಲ್ ಸೀಟು ಹಂಚಿಕೆ ಪ್ರಕ್ರಿಯೆ ಪಾರದರ್ಶಕವಾಗಿದೆ, ದೆಹಲಿಯಿಂದಲೇ ಸೀಟು ಹಂಚಿಕೆಯಾಗಿದೆ ಇಲ್ಲಿ ಯಾವುದೇ ಹಗರಣಕ್ಕೆ ಆಸ್ಪದವಿಲ್ಲ, ಹಗರಣವೂ ನಡೆದಿಲ್ಲ ಯಾವುದೇ ಗೊಂದಲವಿಲ್ಲ ಎಂದಿದ್ದಾರೆ.

ಸೀಟ್‌ ಮ್ಯಾಟ್ರಿಕ್ಸ್‌ ಪ್ರಕಟ: 2878 ಎಂಜಿನಿಯರಿಂಗ್‌ ಸೀಟು ಹೆಚ್ಚಳಸೀಟ್‌ ಮ್ಯಾಟ್ರಿಕ್ಸ್‌ ಪ್ರಕಟ: 2878 ಎಂಜಿನಿಯರಿಂಗ್‌ ಸೀಟು ಹೆಚ್ಚಳ

ಸೀಟು ದೆಹಲಿಯಲ್ಲಿಯೇವ ಹಂಚಿಕೆಯಾಗಿರುವುದರಿಂದ ಇದರಲ್ಲಿ ಯಾವುದೇ ಶಾರ್ಟ್‌ಕಟ್ ಇಲ್ಲ ಒಂದು ವೇಳೆ ಯಾರಾದರೂ ಪೋಷಕರ ಬಳಿ ಹಣ ಪಡೆದು ವಂಚಿಸಿದ್ದರೆ ಅಂಥವರು ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

DCM denies malpractices in medical seat allocation

ವಿದ್ಯಾರ್ಥಿಗಳು‌ ನೀಟ್ ಪರೀಕ್ಷೆ ಬರೆದೇ ಸೀಟು ಪಡೆಯುವ ಪದ್ಧತಿ ಇದೆ. ಇದರಲ್ಲಿ ಯಾವ ಶಾರ್ಟ್ ಕಟ್‌ ಇಲ್ಲ.‌ಹಣ ಪಡೆದು ಸೀಟು ಹಂಚಿಕೆ ಮಾಡುವುದು ಅಸಾಧ್ಯ.‌ ಪೋಷಕರ ಬಳಿ ಹಣ ಪಡೆದು ವಂಚಿಸಿದ್ದರೆ ದೂರು ನೀಡಿ, ಅವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ರಾಜರಾಜೇಶ್ವರಿ ಮೆಡಿಕಲ್ ಕಾಲೇಜು ವಿರುದ್ಧ ದಲಿತರಿಂದ ಪ್ರತಿಭಟನೆರಾಜರಾಜೇಶ್ವರಿ ಮೆಡಿಕಲ್ ಕಾಲೇಜು ವಿರುದ್ಧ ದಲಿತರಿಂದ ಪ್ರತಿಭಟನೆ

ಈಗಾಗಲೇ 49ವೈದ್ಯಕೀಯ ಕಾಲೇಜುಗಳಿಗೆ 6260 ಸೀಟ್‌ಗಳಿಗೆ ಕೌನ್ಸೆಲಿಂಗ್ ನಡೆದಿದೆ. ಉಳಿದಿರುವ 740 ಸೀಟುಗಳಿಗೆ ಕೊನೆಯ ಹಂತದ ಕೌನ್ಸೆಲಿಂಗ್ ನಡೆಸಲಾಗುತ್ತದೆ. ಕಾನೂನು ಪ್ರಕಾರ ಮಹಾರಾಷ್ಟ್ರ, ತಮಿಳುನಾಡು, ಕೇರಳ, ಕರ್ನಾಟಕ ರಾಜ್ಯಗಳು ಕೌನ್ಸೆಲಿಂಗ್ ಪದ್ಧತಿಯನ್ನು ಅನುಸರಿಸುತ್ತಿದೆ.

English summary
Deputy chief minister Dr.G. Parameshwara has clarified that there were no malpractice was done in allocation of medical seats as NEET was compulsory for eligibility.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X