ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾಲಿನ ಮಾರುಕಟ್ಟೆ ವೃದ್ಧಿಗೆ ಸರ್ಕಾರ ಬದ್ಧ: ಪರಮೇಶ್ವರ

By Nayana
|
Google Oneindia Kannada News

ತುಮಕೂರು, ಸೆಪ್ಟೆಂಬರ್ 6: ಹಾಲು ಉತ್ಪಾದನೆ ಇಂದು ಲಾಭದಾಯಕ ಉದ್ಯಮವಾಗಿದ್ದು, ಮಾರುಕಟ್ಟೆ ದರವನ್ನು ಇನ್ನಷ್ಟು ಹೆಚ್ಚಿಸುವ ಅಗತ್ಯವಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಹೇಳಿದರು.

ಕೊರಟಗೆರೆ ತಾಲೂಕಿನ ಕ್ಯಾಮೇನಹಳ್ಳಿ, ಬಡಚೋಡನಹಳ್ಳಿ, ದೊಡ್ಡರಸನಹಳ್ಳಿ,ಅರಳಾಪುರ ಹಾಗೂ ಕೊಂಡಾವಾಡಿಯಲ್ಲಿನ ಹಾಲು ಉತ್ಪಾದಕರ ಸಂಘದ ಕಟ್ಟಡ ಉದ್ಘಾಟನೆಯನ್ನು ಒಂದೇ ಸ್ಥಳದಲ್ಲಿ ನೆರವೇರಿಸಿದರು. ಬಳಿಕ ಮಾತನಾಡಿದ ಅವರು80ನೇ ದಶಕದಲ್ಲಿ ಹಾಲು ಉತ್ಪಾದನೆ ದೊಡ್ಡ ಆಂದೋಲನದ ರೀತಿ ಶುರುವಾಗಿ, ಇಂದು ಲಾಭದಾಯಕ ಉದ್ಯಮವಾಗಿ ಪರಿಣಮಿಸಿದೆ.

ಸೆಪ್ಟೆಂಬರ್ ಅಂತ್ಯಕ್ಕೆ ನಂದಿನಿ ಹಾಲಿನ ದರ 2ರೂ ಹೆಚ್ಚಳ ಸಾಧ್ಯತೆ ಸೆಪ್ಟೆಂಬರ್ ಅಂತ್ಯಕ್ಕೆ ನಂದಿನಿ ಹಾಲಿನ ದರ 2ರೂ ಹೆಚ್ಚಳ ಸಾಧ್ಯತೆ

ಇಡೀ ವಿಶ್ವದಲ್ಲಿ ಅತಿ ಹೆಚ್ಚು ಹಾಲು ಉತ್ಪಾದನೆ ಮಾಡುವ ರಾಷ್ಟ್ರ ಭಾರತ. ನಮ್ಮಲ್ಲಿ ದಿನಕ್ಕೆ 76ಲಕ್ಷಕ್ಕೂ ಹೆಚ್ಚು ಲೀಟರ್ ಹಾಲು ಉತ್ಪಾದಿಸಲಾಗುತ್ತಿದೆ.. ಈ ಪ್ಎಮಾಣ ಇನ್ನಷ್ಟು ಹೆಚ್ವಲಿದೆ ಎಂದರು.

ಒಂದು ಲೀಟರ್ ನಂದಿನಿ ಹಾಲಿಗೆ 100 ಮಿಲೀ ಉಚಿತ? ಒಂದು ಲೀಟರ್ ನಂದಿನಿ ಹಾಲಿಗೆ 100 ಮಿಲೀ ಉಚಿತ?

DCM assures govt committed to milk marketing extension

ನಮ್ಮ ಸರಕಾರ ರೈತರ ಪರವಿದೆ. ಹಿಂದೆ ಕೇಂದ್ರದಲ್ಲಿ‌ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ವೇಳೆ 72 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಿದ್ದರು. ಕಳೆದ ಸಿದ್ದರಾಮಯ್ಯ ಅವರ ಸರಕಾರ ಕೂಡ ಸಹಕಾರ ಬ್ಯಾಂಕ್ ನಲ್ಲಿನ 10 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಿದ್ದಾರೆ. ಅಂತೆಯೇ ಸಮ್ಮಿಶ್ರ ಸರಕಾರ ಕೂಡ 49 ಸಾವಿರ ಕೋಟಿ ರು. ರೈತತ ಸಾಲವನ್ನು ಹಂತಹಂತವಾಗಿ ಮನ್ನಾ ಮಾಡಲಿದೆ. ನಮ್ಮದು ಸದಸದಾ ರೈತರ ಪರ ಸರ್ಕಾರ ಎಂದರು.

ಕಾರು, ಬೈಕು ಬಿಸಾಕಿ, ಸೈಕಲ್ ಏರಲು ಸಿದ್ಧರಾಗಿ! ಏಕೆಂದರೆ... ಕಾರು, ಬೈಕು ಬಿಸಾಕಿ, ಸೈಕಲ್ ಏರಲು ಸಿದ್ಧರಾಗಿ! ಏಕೆಂದರೆ...

ಇದರ ಜೊತೆಗೆ ಕೈಸಾಲ ಮಾಡಿಕೊಂಡಿರುವವರ ಸಾಲವನ್ನೂ ಮನ್ನಾ ಮಾಡುವ ಋಣಮುಕ್ತ ಕಾಯಿದೆಯನ್ನು ಮಂಜೂರು ಮಾಡಲು ಹೊರಟಿದ್ದೇವೆ ಎಂದರು. ರೈತರ ಬದುಕು ಹಸನಾಗಲು ಹಾಲು ಉತ್ಪಾದನೆ ಮಹತ್ವದ ಸ್ಥಾನದಲ್ಲಿದೆ. ಹೀಗಾಗಿ ಈ ಉದ್ದಿಮೆ ಇನ್ನಷ್ಟು ಹೆಚ್ಚು ಬೆಳೆಯಲು ನಮ್ಮ ಸರಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದು ಹೇಳಿದರು.

English summary
Deputy chief minister Dr.G. Parameshwara has assured that the state government is committed to improve and extension of milk market in the state and the same time milk producers will be given better support price in the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X