ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಲಿತ ಸಿಎಂ ಕೂಗು ತಪ್ಪೇನಿಲ್ಲ, ಯಾಕೆ ಆಗಬಾರದು?: ಡಿ.ಕೆ.ಶಿವಕುಮಾರ್

By ತುಮಕೂರು ಪ್ರತಿನಿಧಿ
|
Google Oneindia Kannada News

ತುಮಕೂರು, ಜೂ.27: ರಾಜ್ಯದಲ್ಲಿ ದಲಿತ ಸಿಎಂ ಕೂಗು ತಪ್ಪೇನಿಲ್ಲ. ಯಾಕೆ ಆಗಬಾರದು, ಪಕ್ಷಕ್ಕೆ ಏನೆಲ್ಲ ಅನುಕೂಲ ಆಗುತ್ತೋ ಅದು ಚರ್ಚೆಯಾಗುತ್ತೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ನಗರದ ಡಾ.ಹೆಚ್.ಎಮ್.ಗಂಗಾಧರಯ್ಯ ಮೆಮೋರಿಯಲ್ ಹಾಲ್‌ನಲ್ಲಿ ನಡೆದ 'ಕಾಂಗ್ರೆಸ್ ನವ ಸಂಕಲ್ಪ ಶಿಬಿರ' ಉದ್ಘಾಟಿಸಿ ಮಾತನಾಡಿ, "ತುಮಕೂರು ಜಿಲ್ಲೆಯನ್ನು ಗೆದ್ದರೆ, ಇಡೀ ರಾಜ್ಯವನ್ನು ಗೆದ್ದಂತೆ ಎನ್ನುವ ಮಾತಿದೆ, ಇಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಶಕ್ತಿ ಮೀರಿ ಶ್ರಮಿಸಬೇಕಿದೆ. ಜಿಲ್ಲೆಯಲ್ಲಿ ಎರಡಂಕಿಯ ಶಾಸಕರನ್ನು ಹೊಂದಬೇಕು, ಬಿಜೆಪಿ, ಜೆಡಿಎಸ್ ಸರಕಾರದ ಆಡಳಿತವನ್ನು ಜಿಲ್ಲೆಯ ಜನರು ನೋಡಿದ್ದಾರೆ, ಸಮರ್ಥ ಆಡಳಿತ ನೀಡಿರುವ ಕಾಂಗ್ರೆಸ್ ಯೋಜನೆ ಬಗ್ಗೆ ಮನೆಮನೆಗೆ ತಿಳಿಸಬೇಕು," ಎಂದು ಹೇಳಿದರು.

ನಾವು ಬರಗೂರು ರಾಮಚಂದ್ರಪ್ಪ ಅವರಿಗಿಂತ ಕಡಿಮೆ ತಪ್ಪು ಮಾಡಿದ್ದೇವೆ: ಬಿ.ಸಿ. ನಾಗೇಶ್ ಸಮರ್ಥನೆನಾವು ಬರಗೂರು ರಾಮಚಂದ್ರಪ್ಪ ಅವರಿಗಿಂತ ಕಡಿಮೆ ತಪ್ಪು ಮಾಡಿದ್ದೇವೆ: ಬಿ.ಸಿ. ನಾಗೇಶ್ ಸಮರ್ಥನೆ

ಕುಂಚಿಟಿಗ ಒಕ್ಕಲಿಗ ಸಮುದಾಯಕ್ಕೆ ರಾಜ್ಯದಲ್ಲಿ ಸಿಕ್ಕಿರುವಂತಹ ಮೀಸಲಾತಿ ರಾಷ್ಟದಲ್ಲಿ ಸಿಗದೇ ಇರುವುದು ಅನ್ಯಾಯ. ಈ ಬಗ್ಗೆ ಸಮುದಾಯದ ಶ್ರೀಗಳ ಮತ್ತು ಮುಖಂಡರ ಜೊತೆ ವೇದಿಕೆ ನಿರ್ಮಾಣ ಮಾಡಿ ಅಲ್ಲಿ ಚರ್ಚೆ ನಡೆಸಿ ತೀರ್ಮಾನಕ್ಕೆ ಬರಬೇಕಾಗಿದೆ. ನ್ಯಾಯ ಸಿಗುವವರೆಗೂ ಹೋರಾಟ ಮಾಡಲು ನಾವು ಸಿದ್ಧರಿದ್ದೇವೆ ಎಂದು ತಿಳಿಸಿದರು.

ದಿನಬಳಕೆಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಡಿಕೆಶಿ ಖಂಡನೆ

ದಿನಬಳಕೆಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಡಿಕೆಶಿ ಖಂಡನೆ

ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು, ಸಿದ್ದರಾಮಯ್ಯ ನೇತೃತ್ವದ ಸರಕಾರ ಮಾಡಿದ ಕೆಲಸ ಡಬಲ್ ಇಂಜಿನ್ ಸರಕಾರ ಮಾಡುತ್ತಿಲ್ಲ, ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಚಿಂತನಾ ಮಂಥನ ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆ. ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಆದರೆ ರೈತರು ಬೆಳೆದ ಹಣ್ಣು, ತರಕಾರಿ, ಹಾಲಿನ ದರ ಮಾತ್ರ ಏರಿಕೆ ಮಾಡುತ್ತಿಲ್ಲ, ಸಾಮಾನ್ಯ ಜನರ ಬದುಕಿನಲ್ಲಿ ತಾರತಮ್ಯ ಇಂತಹ ಶಿಬಿರಗಳಲ್ಲಿ ಚರ್ಚೆಯಾಗಬೇಕು, ರಾಜ್ಯಮಟ್ಟದ ಸಾಮಾಜಿಕ, ಆರ್ಥಿಕ ವಿಚಾರಗಳನ್ನು ಬಿಟ್ಟು, ಪಕ್ಷದ ಕಾರ್ಯಕರ್ತನನ್ನು ನಾಯಕನನ್ನಾಗಿ ಮಾಡುವ ನಿಟ್ಟಿನಲ್ಲಿ ಈ ಸಂಕಲ್ಪ ಶಿಬಿರ ಚಿಂತನೆ ನಡೆಸಬೇಕೆಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

ಚಾರ್ಜ್ ಶೀಟ್ ಗೆ ಅಪ್ಲೇ ಮಾಡಿದ್ದೇನೆ

ಚಾರ್ಜ್ ಶೀಟ್ ಗೆ ಅಪ್ಲೇ ಮಾಡಿದ್ದೇನೆ

ತುಮಕೂರಿನಲ್ಲಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಇಡಿಯಿಂದ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಕೆ ಕುರಿತು ಮಾತನಾಡಿ, ನಾನು ಇನ್ನು ಚಾರ್ಜ್‌ ಶೀಟ್ ನೋಡಿಲ್ಲ, ಚಾರ್ಜ್ ಶೀಟ್ ಗೆ ಅಪ್ಲೇ ಮಾಡಿದ್ದೇನೆ. ಮೂರ್ನಾಲ್ಕು ವರ್ಷದ ಹಿಂದೆಯೇ ಚಾರ್ಜ್‌ ಶೀಟ್ ಸಲ್ಲಿಸಬೇಕಾಗಿತ್ತು. ನಾನು ಜೈಲಿನಲ್ಲಿ ಇದ್ದಾಗಲೇ ಚಾರ್ಜ್‌ಶೀಟ್ ಹಾಕಬೇಕಿತ್ತು. ಬಹಳ ಲೇಟಾಗಿ ಚಾರ್ಜ್‌ ಶೀಟ್ ಸಲ್ಲಿಕೆಯಾಗಿದೆ, ರಾಜಕಾರಣ ಮಾಡುತಿದ್ದಾರೆ.

ಜೆಡಿಎಸ್ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟನೆ: ತುಂಬಾ ಸಂತೋಷ ಎಂದ ಗುಬ್ಬಿ ಶ್ರೀನಿವಾಸ್ಜೆಡಿಎಸ್ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟನೆ: ತುಂಬಾ ಸಂತೋಷ ಎಂದ ಗುಬ್ಬಿ ಶ್ರೀನಿವಾಸ್

ಪಠ್ಯಪುಸ್ತಕ ಪ್ರತಿ ಹರಿದಿದ್ದು ಹೊಸ ಸಂಸ್ಕೃತಿಯಲ್ಲ

ಪಠ್ಯಪುಸ್ತಕ ಪ್ರತಿ ಹರಿದಿದ್ದು ಹೊಸ ಸಂಸ್ಕೃತಿಯಲ್ಲ

ಡಿಕೆ ಶಿವಕುಮಾರ್ ಪಠ್ಯಪುಸ್ತಕ ಹರಿದ ಪ್ರಕರಣ ಕುರಿತು ಶಿಕ್ಷಣ ಸಚಿವ ನಾಗೇಶ್ ತುಮಕೂರಿನಲ್ಲಿ ಮಾತನಾಡಿದರು. ಸರಸ್ವತಿಯನ್ನು ಹರಿದು ಹಾಕುವ ಸಂಸ್ಕೃತಿ ಈ ದೇಶದಲ್ಲಿ ಇರಲಿಲ್ಲ. ಸರಸ್ವತಿ ಈ ದೇಶದಲ್ಲಿ ಇರಲಿಲ್ಲ. ಸರಸ್ವತಿ ಅಕಸ್ಮಾತ್ ಕಾಲಿಗೆ ತಾಗಿದ್ರೆ ನಾವು ಕಣ್ಣಿಗೆ ಒತ್ತಿಕೊಂಡು ನಮಸ್ಕಾರ ಮಾಡುತ್ತೇವೆ. ಡಿಕೆ ಶಿವಕುಮಾರ್ ಹೊಸ ಸಂಸ್ಕೃತಿ ಹುಟ್ಟು ಹಾಕಿದ್ದಾರೆ. ಅದಕ್ಕೆ ನಾವೇನು ಮಾಡೋಕ್ಕಾಗಲ್ಲ. ಈಗಾಗಲೇ ಶೇ.75 ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ತಲುಪಿದೆ ಎಂದರು.

ಇನ್ನು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರು ಪಠ್ಯ ಪುಸ್ತಕ ಹರಿದು ಹಾಕಿ ಡಿ.ಕೆ ಶಿವಕುಮಾರ್ ಅವರು ಹೊಸ ಸಂಸ್ಕೃತಿ ಸೃಷ್ಟಿ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದರು, ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಪಠ್ಯಪುಸ್ತಕ ಪ್ರತಿ ಹರಿದಿದ್ದು ಹೊಸ ಸಂಸ್ಕೃತಿಯಲ್ಲ, ಸಂವಿಧಾನ ಶಿಲ್ಪಿ ಅಂಬೇಡ್ಕರ್‌ಗೆ, ಬಸವಣ್ಣಗೆ ಮಾಡಿದ ಅಪಮಾನ ಸಹಿಸಿಕೊಂಡು ಇರೋದಕ್ಕೆ ಆಗಲ್ಲ ಬಿ.ಸಿ ನಾಗೇಶ್ ಮನೆಯಲ್ಲಿ ಶಂಕರಚಾರ್ಯರ ಫೋಟೋ ಇಟ್ಟು ಕೊಂಡಿದ್ದಾರೆ. ಶಂಕರಾ, ಸಂಕರಾ ಅಂತ ಬರೆದುಕೊಂಡಿದ್ದಾರೆ. ಶಂಕರಚಾರ್ಯರನ್ನು ಸಂಕರಾ ಬರೆದುಕೊಂಡಿದ್ದಾರೆ. ಶಂಕರಚಾರ್ಯರು ಎಂತಹ ಕೊಡುಗೆ ನೀಡಿದ್ದಾರೆ. ಕುವೆಂಪು, ನಾರಾಯಣಗುರು, ಭಗತ್ ಸಿಂಗ್‌ಗೆ ಅವಮಾನ ಮಾಡಿದ್ದಾರೆ. ವೇದಿಕೆಯಲ್ಲಿ ಸ್ವಾಮೀಜಿಗಳಿದ್ದರು ಅದಕ್ಕೆ ಪಠ್ಯಪುಸ್ತಕ ಪ್ರತಿ ಹರಿದು ಹಾಕಿದೆ, ಇಲ್ಲದಿದ್ದರೆ ಸುಟ್ಟು ಹಾಕುತ್ತಿದ್ದೆ ಎಂದರು.

ಡಿಕೆ ಶಿವಕುಮಾರ್ ಹೊಸ ಸಂಸ್ಕೃತಿ ಹುಟ್ಟು ಹಾಕಿದ್ದಾರೆ

ಡಿಕೆ ಶಿವಕುಮಾರ್ ಹೊಸ ಸಂಸ್ಕೃತಿ ಹುಟ್ಟು ಹಾಕಿದ್ದಾರೆ

ಡಿಕೆ ಶಿವಕುಮಾರ್ ಪಠ್ಯಪುಸ್ತಕ ಹರಿದ ಪ್ರಕರಣ ಕುರಿತು ಮಾತನಾಡಿದ ಅವರು, ಸರಸ್ವತಿಯನ್ನು ಹರಿದು ಹಾಕುವ ಸಂಸ್ಕೃತಿ ಈ ದೇಶದಲ್ಲಿ ಇರಲಿಲ್ಲ. ಸರಸ್ವತಿ ಈ ದೇಶದಲ್ಲಿ ಇರಲಿಲ್ಲ. ಸರಸ್ವತಿ ಅಕಸ್ಮಾತ್ ಕಾಲಿಗೆ ತಾಗಿದ್ರೆ ನಾವು ಕಣ್ಣಿಗೆ ಒತ್ತಿಕೊಂಡು ನಮಸ್ಕಾರ ಮಾಡುತ್ತೇವೆ. ಡಿಕೆ ಶಿವಕುಮಾರ್ ಹೊಸ ಸಂಸ್ಕೃತಿ ಹುಟ್ಟು ಹಾಕಿದ್ದಾರೆ. ಅದಕ್ಕೆ ನಾವೇನು ಮಾಡೋಕ್ಕಾಗಲ್ಲ. ಈಗಾಗಲೇ ಶೇ.75 ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ತಲುಪಿದೆ ಎಂದರು.

ರೋಹಿತ್ ಚಕ್ರತೀರ್ಥ ವಿರುದ್ಧ ದೂರು ದಾಖಲಾಗಿದ್ದು 2017ರಲ್ಲಿ. ಆಗ ಸಿದ್ದರಾಮಯ್ಯ ಸಿಎಂ ಇದ್ದರು. ಡಿ.ಕೆ.ಶಿವಕುಮಾರ್ ಸಚಿವರಾಗಿದ್ದರು. ಕುವೆಂಪು ಅವರಿಗೆ ಅವಮಾನ ಆಗಿದ್ರೆ. ಅವತ್ತೆ ಕ್ರಮ ಕೈಗೊಳ್ಳಬೇಕಿತ್ತು. ಪ್ರಕರಣದ ಕುರಿತಂತೆ ಸರ್ಕಾರ ಬಿ ರೀಪೋರ್ಟ್ ಹಾಕಿತ್ತು. ಈ ಎಲ್ಲಾ ವಿಚಾರವನ್ನು ದೇವೇಗೌಡರಿಗೆ ತಿಳಿಸಿ ಬಂದಿದ್ದೇನೆ.

Recommended Video

Kapil Dev ನಂತರ ಟೀಮ್ ಇಂಡಿಯಾಗೆ ಜಸ್ಪ್ರೀತ್ ಬುಮ್ರಾ ನಾಯಕ | *Cricket | OneIndia Kannada

English summary
Why Dalits Cannot Be CM. KPCC President DK Shivakumar reaction, It is not wrong to hear the cries of Dalit CM in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X