ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚೀನಾದಿಂದ ಬಂದವನಿಗೆ ಅನಾರೋಗ್ಯ: ತುಮಕೂರಿನಲ್ಲಿ ಕೊರೊನಾ ಭೀತಿ

|
Google Oneindia Kannada News

ತುಮಕೂರು, ಫೆಬ್ರವರಿ 05: ತುಮಕೂರಿನಲ್ಲೂ ಕೊರೊನಾ ವೈರಸ್ ಬಗ್ಗೆ ಆತಂಕ ಸೃಷ್ಟಿಯಾಗಿದೆ. ಶಂಕಿತ ಯುವಕನನ್ನು ವೈದ್ಯಾಧಿಕಾರಿಗಳು ತಪಾಸಣೆಗೆ ಒಳಪಡಿಸಿದ್ದು ವರದಿಗಾಗಿ ನಿರೀಕ್ಷಿಸಲಾಗುತ್ತಿದೆ.

ಇತ್ತೀಚೆಗೆ ಯುವಕನೊಬ್ಬ ಚೀನಾದಿಂದ ತುಮಕೂರಿಗೆ ವಾಪಸ್ಸಾಗಿದ್ದ, ಆತನಿಗೆ ಅನಾರೋಗ್ಯ ಕಾಣಿಸಿಕೊಂಡಿದೆ. ಆತನ ರಕ್ತ, ಕಫದ ಮಾದರಿಯನ್ನು ಸಂಗ್ರಹಿಸಿ ಪುಣೆಗೆ ತಪಾಸಣೆಗೆ ಕಳುಹಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ. ಈ ಬಗ್ಗೆ ರಾಜ್ಯ ಸರ್ಕಾರಕ್ಕೂ ಮಾಹಿತಿ ನೀಡಲಾಗಿದೆ.

ಚೀನಾದಲ್ಲಿದ್ದ ತುಮಕೂರಿನ ಯುವಕ ಅಲ್ಲಿ ಕೊರೊನಾ ವೈರಸ್ ಹೆಚ್ಚಾದ ಬಳಿಕ ತುಮಕೂರಿಗೆ ವಾಪಸ್ಸಾಗಿದ್ದು. ಆತನಿಗೆ ಕೆಲವು ದಿನದ ಹಿಂದೆ ನೆಗಡಿ, ಕೆಮ್ಮು, ಜ್ವರ ನಿಶ್ಯಕ್ತಿ ಕಾಣಿಸಿಕೊಂಡಿತು. ಆತನನ್ನು ಆತನ ಮನೆಯಲ್ಲಿಯೇ ಪ್ರತ್ಯೇಕವಾಗಿ ಇರಿಸಿ ಜಿಲ್ಲಾ ವೈದ್ಯಾಧಿಕಾರಿಗಳು ದಿನಕ್ಕೆರಡು ಬಾರಿ ಭೇಟಿ ನೀಡಿ ಚಿಕಿತ್ಸೆ ನೀಡುತ್ತಿದ್ದಾರೆ.

Coronavirus Suspect: Man Returned From China To Tumkuru Become Ill

ಆತನಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಪ್ರಕಾರ ಖಾಯಿಲೆಯ ಲಕ್ಷಣಗಳು ಕೊರೊನಾ ವೈರಸ್ ಮಾದರಿಯಲ್ಲಿಲ್ಲ, ಆದರೂ ಸಹ ಮುಂಜಾಗೃತೆಯಿಂದಾಗಿ ರಕ್ತ, ಕಫ ಪರೀಕ್ಷೆ ಮಾಡಲಾಗುತ್ತಿದೆ ಎಂದಿದ್ದಾರೆ.

ದಕ್ಷಿಣ ಕನ್ನಡ, ಹುಬ್ಬಳ್ಳಿ ಗಳಲ್ಲಿ ಕೊರೊನಾ ವೈರಸ್ ಶಂಕಿತ ಪ್ರಕರಣಗಳು ಪತ್ತೆಯಾಗಿದ್ದವು. ಆದರೆ ಪರೀಕ್ಷೆಯ ನಂತರ ಇವು ಕೊರೊನಾ ವೈರಸ್ ಪ್ರಕರಣಗಳು ಅಲ್ಲವೆಂಬುದು ಖಾತ್ರಿಯಾಯಿತು. ಆದರೂ ಸಹ ರಾಜ್ಯದಾದ್ಯಂತ ಕೊರೊನಾ ವೈರಸ್ ಬಗ್ಗೆ ಹೈಅಲರ್ಟ್ ಘೋಷಿಸಲಾಗಿದೆ.

English summary
A Tumkur young man returned from China become ill. Doctors took his blood samples for test in doubt of coronavirus. Waiting for report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X