ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೈಕಮಾಂಡಿಗೇ ಸೆಡ್ಡು ಹೊಡೆದ ಕಾಂಗ್ರೆಸ್ ಶಾಸಕರು

By Srinath
|
Google Oneindia Kannada News

ತುಮಕೂರು, ಮೇ 29: ಈಗಾಗಲೇ ಲೋಕಸಭಾ ಚುನಾವಣೆ ಸೋಲಿನ ಹಿನ್ನೆಲೆಯಲ್ಲಿ ಧೃತಿಗೆಟ್ಟಿರುವ ಕಾಂಗ್ರೆಸ್ ಹೈಕಮಾಂಡಿಗೆ ಕರ್ನಾಟಕ ಕಾಂಗ್ರೆಸ್ ಸವಾಲಿದ್ದಾಗಿ ಪರಿಣಮಿಸುವ ಸಾಧ್ಯತೆಯಿದೆ.

ರಾಷ್ಟಮಟ್ಟದಲ್ಲಿನ ಕಾಂಗ್ರೆಸ್ ಫಲಿತಾಂಶಕ್ಕಿಂತ ರಾಜ್ಯದಲ್ಲೇ ಕಾಂಗ್ರೆಸ್ ಉತ್ತಮ ಫಲಿತಾಂಶ ನೀಡಿದೆ. ಹಾಗಾಗಿ ಪಕ್ಷದಲ್ಲಿ ಈಗ ಭಿನ್ನಮತ ನಾಯಕರದ್ದು ತುಸು ಮೇಲುಗೈ ಆಗಿದೆ. ಈ ನಿಟ್ಟಿನಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಇಂದು ಗುರುವಾರ ನಡೆಯುವ ಆತ್ಮಾವಲೋಕನ ಸಭೆ ರಣಾಂಗಣವಾಗುವ ಲಕ್ಷಣಗಳಿವೆ.

ಪಕ್ಷಕ್ಕಾಗಿ ದುಡಿದ ಮೊದಲ ಶ್ರೇಣಿಯ ನಾಯಕರದ್ದು ಒಂದು ಕಥೆಯಾದರೆ ಕೆಳಹಂತದ ನಾಯಕರದ್ದು ಮತ್ತೊಂದು ವರಸೆಯಾಗಿದೆ. 'ನಾವು ಹೈಕಮಾಂಡ್ ಗುಲಾಮರಲ್ಲ. ಕಾರ್ಯಕರ್ತರೇ ಪಕ್ಷದ ಆಧಾರಸ್ತಂಭಗಳು. ಅವರ ಮಾತಿಗೆ ಬೆಲೆ ಕೊಡದಿದ್ದರೆ ಪಕ್ಷಕ್ಕೆ ಅಧೋಗತಿ' ಎಂದು ಇಲ್ಲಿನ ಕಾಂಗ್ರೆಸ್ ಶಾಸಕರೊಬ್ಬರು ಗುಟುರು ಹಾಕಿದ್ದಾರೆ.

chidambaram-nomination-to-rajya-sabha-from-karnataka-opposed-kn-rajanna

ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಅವರನ್ನು ಕರ್ನಾಟಕದ ಕೋಟಾದಿಂದ ರಾಜ್ಯಸಭೆಗೆ ಆಯ್ಕೆ ಮಾಡುಬೇಕೆಂಬ ಎಐಸಿಸಿ ಚಿಂತನೆಯ ವಿರುದ್ಧ ಕಿಡಿಕಾರಿರುವ ಮಧುಗಿರಿ ಶಾಸಕ ಕೆಎನ್ ರಾಜಣ್ಣ ಅವರು ಹೈಕಮಾಂಡ್ ವಿರುದ್ಧ ಕೆಂಪು ಬಾವುಟ ಹಾರಿಸಿದ್ದಾರೆ. (ಚುನಾವಣಾ ಎಫೆಕ್ಟ್: ಕೆಪಿಸಿಸಿಯಲ್ಲಿ ಬದಲಾವಣೆ ಪರ್ವ)

'ಕಾವೇರಿ ವಿವಾದದಲ್ಲಿ ಕರ್ನಾಟಕದ ಹಿತ ಕಾಪಾಡುವಲ್ಲಿ ಅಂದಿನ ಕೇಂದ್ರ ಸಚಿವ ಚಿದಂಬರಂ ಅವರು ಸಹಕರಿಸಿಲ್ಲ. ಯಾವುದೇ ಕಾರಣಕ್ಕೂ ಕರ್ನಾಟಕದಿಂದ ಅವರು ರಾಜ್ಯಸಭೆಗೆ ಆಯ್ಕೆಯಾಗಲು ಅವಕಾಶ ನೀಡಬಾರದು. ಒಂದು ವೇಳೆ ಈ ವಿಷಯದಲ್ಲಿ ಹೈಕಮಾಂಡ್ ಒತ್ತಡ ಹೇರಿದರೆ ಅಭ್ಯರ್ಥಿ ಚಿದಂಬರಂ ವಿರುದ್ಧ ಮತ ಹಾಕುವೆ' ಎಂದು ಶಾಸಕ ರಾಜಣ್ಣ ಬಹಿರಂಗ ಸವಾಲು ಹಾಕಿದ್ದಾರೆ.

ಈ ಸಂಬಂಧ ಸಚಿವ/ ಸಂಸದ ಪ್ರಕಾಶ್ ಹುಕ್ಕೇರಿ ಜತೆಗೂಡಿ ತಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ನಮ್ಮ ನಿಲುವನ್ನು ಸ್ಪಷ್ಪಡಿಸಿದ್ದೇವೆ. ಹೈಕಮಾಂಡ್ ಪ್ರಸ್ತಾವನೆಯನ್ನು ಒಪ್ಪಕೂಡದು ಎಂದು ಎಚ್ಚರಿಸಿದ್ದೇವೆ. ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ಅವರಿಗೂ ರಾಜ್ಯದಲ್ಲಿ ಪಕ್ಷದ ಶಾಸಕರ ಅಭಿಪ್ರಾಯ ಮನದಟ್ಟು ಮಾಡಿಕೊಟ್ಟಿದ್ದೇವೆ ಎಂದು ಸುದ್ದಿಗಾರರಿಗೆ ಶಾಸಕ ರಾಜಣ್ಣ ತಿಳಿಸಿದ್ದಾರೆ.

English summary
Ex Union Minister P Chidambaram's (from Tamil Nadu) nomination to Rajya Sabha from Karnataka is opposed by Karnataka MLAs says Madhugiri Congress MLA KN Rajanna.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X