ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿರಾ ಉಪ ಚುನಾವಣೆ ಚಿತ್ರಣ ಬದಲಿಸಿದ ಬಿ. ವೈ. ವಿಜಯೇಂದ್ರ!

|
Google Oneindia Kannada News

ತುಮಕೂರು, ಅಕ್ಟೋಬರ್ 20 : ತುಮಕೂರು ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಚಿತ್ರಣ ಅಂತಿಮಗೊಂಡಿದೆ. ನವೆಂಬರ್ 3ರಂದು ನಡೆಯಲಿರುವ ಚುನಾವಣೆಗೆ 15 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ವಿವಿಧ ಪಕ್ಷಗಳ ಪ್ರಚಾರ ಕಾವು ಪಡೆದುಕೊಂಡಿದೆ.

2018ರ ಚುನಾವಣೆಯಲ್ಲಿ ಜೆಡಿಎಸ್‌ನ ಬಿ. ಸತ್ಯನಾರಾಯಣ ಶಿರಾದಲ್ಲಿ ಗೆಲುವು ಸಾಧಿಸಿದ್ದರು. ಅವರ ಅಕಾಲಿಕ ನಿಧನದಿಂದಾಗಿ ಕ್ಷೇತ್ರದಲ್ಲಿ ಉಪ ಚುನಾವಣೆ ಎದುರಾಗಿದೆ. ಉಳಿದ ಪಕ್ಷಗಳಿಗಿಂತ ಮೊದಲು ಶಿರಾದಲ್ಲಿ ಚುನಾವಣೆ ಸಿದ್ಧತೆ ಆರಂಭಿಸಿದ್ದು ಬಿಜೆಪಿ.

ಶಿರಾ ಉಪ ಚುನಾವಣೆ; ಪ್ರಚಾರದ ಅಖಾಡಕ್ಕಿಳಿದ ಬಿ. ವೈ. ವಿಜಯೇಂದ್ರಶಿರಾ ಉಪ ಚುನಾವಣೆ; ಪ್ರಚಾರದ ಅಖಾಡಕ್ಕಿಳಿದ ಬಿ. ವೈ. ವಿಜಯೇಂದ್ರ

ಶಿರಾ ಕ್ಷೇತ್ರದ ಚುನಾವಣೆ ಎಂದರೆ ಕಾಂಗ್ರೆಸ್ ಮತ್ತು ಜೆಡಿಎಸ್‌ ನಡುವಿನ ಹೋರಾಟ. ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ಟಿ. ಬಿ. ಜಯಚಂದ್ರ ಪ್ರತಿನಿಧಿಸುವ ಕ್ಷೇತ್ರವಿದು. ಆದರೆ, ಈಗ ಉಪ ಚುನಾವಣೆ ಚಿತ್ರಣ ಬದಲಾಗಿದೆ. ಬಿಜೆಪಿಯಿಂದ ಉಪ ಚುನಾವಣೆಗೆ ಡಾ. ರಾಜೇಶ್ ಗೌಡ ಅಭ್ಯರ್ಥಿ.

ಶಿರಾ ಉಪ ಚುನಾವಣೆ; ಬಿಜೆಪಿ ಗೆಲುವು ಅಷ್ಟು ಸುಲಭವಲ್ಲ! ಶಿರಾ ಉಪ ಚುನಾವಣೆ; ಬಿಜೆಪಿ ಗೆಲುವು ಅಷ್ಟು ಸುಲಭವಲ್ಲ!

ಕರ್ನಾಟಕ ಬಿಜೆಪಿಯ ಉಪಾಧ್ಯಕ್ಷ, ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಪುತ್ರ ಬಿ. ವೈ. ವಿಜಯೇಂದ್ರ ಕ್ಷೇತ್ರಕ್ಕೆ ಬಂದ ಮೇಲೆ ಚುನಾವಣಾ ಚಿತ್ರಣ ಸಂಪೂರ್ಣವಾಗಿ ಬದಲಾಗಿದೆ. ಪಕ್ಷಕ್ಕೆ ಪೂರಕವಾದ ವಾತಾವರಣವಿದೆ ಎನ್ನುತ್ತದೆ ಪಕ್ಷವೇ ನಡೆಸಿರುವ ಆಂತರಿಕ ಸಮೀಕ್ಷೆ.

ಶಿರಾ ಉಪ ಚುನಾವಣೆ; ನಾಮಪತ್ರ ಸಲ್ಲಿಸಿದ ಟಿ. ಬಿ. ಜಯಚಂದ್ರ ಶಿರಾ ಉಪ ಚುನಾವಣೆ; ನಾಮಪತ್ರ ಸಲ್ಲಿಸಿದ ಟಿ. ಬಿ. ಜಯಚಂದ್ರ

ಮೂರನೇ ಸ್ಥಾನದಲ್ಲಿದ್ದ ಬಿಜೆಪಿ

ಮೂರನೇ ಸ್ಥಾನದಲ್ಲಿದ್ದ ಬಿಜೆಪಿ

ಶಿರಾ ಕ್ಷೇತ್ರದಲ್ಲಿ ಬಿಜೆಪಿಗೆ 3ನೇ ಸ್ಥಾನವಿತ್ತು. 2008, 2013 ಮತ್ತು 2018ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು 25 ಸಾವಿರ ಮತಗಳನ್ನು ಪಡೆಯಲು ಸಹ ವಿಫಲವಾಗಿದ್ದರು. ಆದರೆ, ಉಪ ಚುನಾವಣೆಯಲ್ಲಿ ಚಿತ್ರಣ ಬೇರೆಯಾಗಿದೆ. ಬಿಜೆಪಿ ಅಭ್ಯರ್ಥಿ ಪರವಾದ ಅಲೆ ಇದೆ ಎಂದು ಪಕ್ಷದ ನಾಯಕರು ವಿಶ್ವಾಸದಿಂದ ಹೇಳುತ್ತಿದ್ದಾರೆ.

ಚಿತ್ರಣ ಬದಲಿಸಿದ ವಿಜಯೇಂದ್ರ

ಚಿತ್ರಣ ಬದಲಿಸಿದ ವಿಜಯೇಂದ್ರ

ಕೆ. ಆರ್. ಪೇಟೆಯಲ್ಲಿ ಬಿಜೆಪಿ ಗೆಲ್ಲಿಸಿರುವ ಬಿ. ವೈ. ವಿಜಯೇಂದ್ರ ಶಿರಾದಲ್ಲಿಯೂ ಪಕ್ಷದ ಬಾವುಟ ಹಾರಿಸಲು ಮುಂದಾಗಿದ್ದಾರೆ. ಸೆಪ್ಟೆಂಬರ್ 21ರಂದು ಮೊದಲು ಕ್ಷೇತ್ರಕ್ಕೆ ಭೇಟಿ ನೀಡಿದ್ದ ಅವರು ಬೂತ್ ಮಟ್ಟದ ಸಭೆ ನಡೆಸಿದ್ದರು. ಬಳಿಕ ಕೋವಿಡ್ ಸೋಂಕು ತಗುಲಿದ ಕಾರಣ ಬೆಂಗಳೂರಿಗೆ ವಾಪಸ್ ಆಗಿದ್ದರು. ಗುಣಮುಖರಾದ ಬಳಿಕ ಶಿರಾದಲ್ಲಿಯೇ ವಾಸ್ತವ್ಯ ಹೂಡಿ ಉಪ ಚುನಾವಣೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಬಿರುಸಿನ ಪ್ರಚಾರವನ್ನು ಕೈಗೊಂಡಿದ್ದಾರೆ.

ಅಭ್ಯರ್ಥಿ ಬದಲಿಸಿರುವ ಬಿಜೆಪಿ

ಅಭ್ಯರ್ಥಿ ಬದಲಿಸಿರುವ ಬಿಜೆಪಿ

ಶಿರಾ ಈ ಬಾರಿಯ ಉಪ ಚುನಾವಣೆಯಲ್ಲಿ ಗೆಲ್ಲುವ ತಂತ್ರದೊಂದಿಗೆ ಅಭ್ಯರ್ಥಿ ಬದಲಿಸಿದೆ. 2008 ಮತ್ತು 2013ರ ಚುನಾವಣೆಯಲ್ಲಿ ಬಿ. ಕೆ. ಮಂಜುನಾಥ್ ಅಭ್ಯರ್ಥಿಯಾಗಿ ಸೋಲು ಕಂಡಿದ್ದರು. 2018ರಲ್ಲಿ ಪಕ್ಷ ಎಸ್. ಆರ್. ಗೌಡರನ್ನು ಕಣಕ್ಕಿಳಿಸಿ ಸೋಲು ಕಂಡಿತ್ತು. ಉಪ ಚುನಾವಣೆಯಲ್ಲಿ ಡಾ. ರಾಜೇಶ್ ಗೌಡರಿಗೆ ಟಿಕೆಟ್ ಕೊಟ್ಟಿದೆ. (ಚಿತ್ರ ಡಾ. ರಾಜೇಶ್ ಗೌಡ)

ಸಂಘಟನೆಯ ಬಲ

ಸಂಘಟನೆಯ ಬಲ

ಬಿಜೆಪಿ ಶಿರಾ ಕ್ಷೇತ್ರದ ಉಪ ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ಕ್ಷೇತ್ರದಲ್ಲಿ ತಯಾರಿ ನಡೆಸಿತ್ತು. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿ ಕುಮಾರ್, ತುಮಕೂರು ಜಿಲ್ಲಾ ಬಿಜೆಪಿ ಅಧ್ಯಕ್ಷ ಸುರೇಶ್ ಗೌಡ ಕ್ಷೇತ್ರದಲ್ಲಿ ಸಂಚಾರ ನಡೆಸಿ ಪಕ್ಷ ಸಂಘಟನೆ ಮಾಡಿದ್ದು, ಬೂತ್ ಮಟ್ಟದ ಸಭೆಗಳನ್ನು ನಡೆಸಿದ್ದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇರುವುದರಿಂದ ಗೆಲವು ಸುಲಭವಾಗಬಹುದು ಎಂಬುದು ಲೆಕ್ಕಾಚಾರವಾಗಿದೆ.

ನೇರ ಪೈಪೋಟಿ ಸಾಧ್ಯತೆ

ನೇರ ಪೈಪೋಟಿ ಸಾಧ್ಯತೆ

ಬಿಜೆಪಿಯ ಆಂತರಿಕ ವರದಿ ಪ್ರಕಾರ ಶಿರಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನೇರ ಪೈಪೋಟಿ ನಡೆಯಲಿದೆ. ಜೆಡಿಎಸ್ ದಿ. ಬಿ. ಸತ್ಯನಾರಾಯಣ ಪತ್ನಿ ಅಮ್ಮಾಜಮ್ಮಗೆ ಟಿಕೆಟ್ ನೀಡಿದೆ. ಆದರೆ, ಪಕ್ಷದ ಹಲವು ನಾಯಕರು ಬಿಜೆಪಿ, ಕಾಂಗ್ರೆಸ್‌ನತ್ತ ಮುಖ ಮಾಡಿರುವುದು ಪಕ್ಷಕ್ಕೆ ಹಿನ್ನಡೆ ಉಂಟು ಮಾಡಿದೆ. ಶಿರಾದಲ್ಲಿ ಬಿಜೆಪಿ ಬಾವುಟ ಹಾರಲಿದೆಯೇ? ಎಂಬುದು ನವೆಂಬರ್ 10ರಂದು ತಿಳಿಯಲಿದೆ.

English summary
Karnataka BJP vice president and CM Yediyurappa son B.Y. Vijayendra changed Sira by election scenario. Vijayendra busy in campaign for November 3rd election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X