• search
  • Live TV
ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶಿರಾ ಚುನಾವಣಾ ಚಿತ್ರಣ ಬದಲಿಸಲಿದ್ದಾರೆ ಯಡಿಯೂರಪ್ಪ!

|

ತುಮಕೂರು, ಅಕ್ಟೋಬರ್ 29: ತುಮಕೂರು ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಬಹಿರಂಗ ಪ್ರಚಾರ ಭಾನುವಾರ ಅಂತ್ಯಗೊಳ್ಳಲಿದೆ. ನವೆಂಬರ್ 3ರಂದು ಮತದಾನ ನಡೆಯಲಿದ್ದು, ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಶುಕ್ರವಾರ ಮತಯಾಚನೆ ಮಾಡಲಿದ್ದಾರೆ.

ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯನ್ನು ಬಿಜೆಪಿ ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ಆದ್ದರಿಂದ, ಪಕ್ಷದ ವಿವಿಧ ನಾಯಕರು ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿದ್ದು, ಅಭ್ಯರ್ಥಿ ಡಾ. ರಾಜೇಶ್ ಗೌಡ ಪರವಾಗಿ ಮತ ಕೇಳುತ್ತಿದ್ದಾರೆ.

ಶಿರಾ ಉಪ ಚುನಾವಣೆ; ಬಿಜೆಪಿ ಗೆಲುವು ಅಷ್ಟು ಸುಲಭವಲ್ಲ!

ಯಡಿಯೂರಪ್ಪ ಶುಕ್ರವಾರ ಒಂದೇ ದಿನ ಶಿರಾದಲ್ಲಿ ರೋಡ್ ಶೋ ಮೂಲಕ ಮತಯಾಚನೆ ಮಾಡಲಿದ್ದಾರೆ. ಉಳಿದಂತೆ ಬಿಜೆಪಿಯ ರಾಜ್ಯಾ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರ ಸೇರಿದಂತೆ ಹಲವು ನಾಯಕರು ಕ್ಷೇತ್ರದಲ್ಲಿ ಪ್ರಚಾರ ಮುಂದುವರೆಸಲಿದ್ದಾರೆ.

ಶಿರಾ ಉಪ ಚುನಾವಣೆ; ಶುಕ್ರವಾರ ಯಡಿಯೂರಪ್ಪ ಪ್ರಚಾರ

ಶಿರಾದಲ್ಲಿ ಕಾಂಗ್ರೆಸ್‌ನಿಂದ ಟಿ. ಬಿ. ಜಯಚಂದ್ರ, ಜೆಡಿಎಸ್‌ನಿಂದ ಅಮ್ಮಾಜಮ್ಮ ಅಭ್ಯರ್ಥಿಗಳು. ಕ್ಷೇತ್ರದಲ್ಲಿ ಬಿಜೆಪಿಗೆ ಭದ್ರ ಬುನಾದಿಯೇ ಇಲ್ಲವಾಗಿತ್ತು. ಆದರೆ, ಉಪ ಚುನಾವಣೆಯಲ್ಲಿ ಕ್ಷೇತ್ರದ ಚಿತ್ರಣವನ್ನೇ ಪಕ್ಷದ ಬದಲಾವಣೆ ಮಾಡಿದೆ.

ಶಿರಾ ಉಪ ಚುನಾವಣೆ; ಬಿಜೆಪಿ ಬಿಟ್ಟು ಜೆಡಿಎಸ್ ಸೇರಿದ ನಾಯಕರು

3ನೇ ಸ್ಥಾನದಲ್ಲಿ ಬಿಜೆಪಿ

3ನೇ ಸ್ಥಾನದಲ್ಲಿ ಬಿಜೆಪಿ

ತುಮಕೂರು ಜಿಲ್ಲೆಯ ಶಿರಾ ಕ್ಷೇತ್ರದಲ್ಲಿ ಬಿಜೆಪಿ 3ನೇ ಸ್ಥಾನದಲ್ಲಿದೆ. ಆದ್ದರಿಂದ, ಉಪ ಚುನಾವಣೆಯಲ್ಲಿ ಗೆದ್ದು ಕ್ಷೇತ್ರದಲ್ಲಿ ಪಕ್ಷದ ಬಾವುಟ ಹಾರಿಸಲು ಬಿಜೆಪಿ ತಂತ್ರ ರೂಪಿಸಿದೆ. ಅದಕ್ಕಾಗಿಯೇ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಲವು ದಿನ ಪ್ರಚಾರ ಮಾಡಿದ್ದಾರೆ. ಬಿ. ವೈ. ವಿಜಯೇಂದ್ರ ಕ್ಷೇತ್ರದಲ್ಲಿಯೇ ವಾಸ್ತವ್ಯ ಹೂಡಿದ್ದು ಪ್ರಚಾರದಲ್ಲಿ ತೊಡಗಿದ್ದಾರೆ.

25 ಸಾವಿರ ಮತ ಪಡೆದಿಲ್ಲ

25 ಸಾವಿರ ಮತ ಪಡೆದಿಲ್ಲ

ಶಿರಾದಲ್ಲಿ ಕಳೆದ ಮೂರು ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳು 25 ಸಾವಿರ ಮತಗಳನ್ನು ಸಹ ಪಡೆದಿಲ್ಲ. 2008 ಮತ್ತು 2013ರ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿದ್ದ ಬಿ. ಕೆ. ಮಂಜುನಾಥ್ 24,025 ಮತ್ತು 18,884 ಮತಗಳನ್ನು ಪಡೆದಿದ್ದರು. 2018ರಲ್ಲಿ ಅಭ್ಯರ್ಥಿಯನ್ನು ಬದಲಾವಣೆ ಮಾಡಿ ಪಕ್ಷ ಎಸ್. ಆರ್. ಗೌಡಗೆ ಟಿಕೆಟ್ ನೀಡಿತು. ಆದರೆ, ಅವರು ಪಡೆದ ಮತಗಳು ಕೇವಲ 16,959. ಆದರೆ, ಉಪ ಚುನಾವಣೆ ವೇಳೆ ಬಿರುಸಿನ ತಳಮಟ್ಟದ ಪ್ರಚಾರದ ಕಾರಣ ಬಿಜೆಪಿ ಶಕ್ತಿ ಹೆಚ್ಚಿದೆ ಎಂದು ಪಕ್ಷದ ಆಂತರಿಕ ವರದಿ ಹೇಳಿದೆ.

ಯಡಿಯೂರಪ್ಪ ಪ್ರಚಾರ

ಯಡಿಯೂರಪ್ಪ ಪ್ರಚಾರ

ಶುಕ್ರವಾರ ಶಿರಾ ತಾಲೂಕಿನ ಮದಲೂರು ಎಂಬಲ್ಲಿ ಯಡಿಯೂರಪ್ಪ ಪ್ರಚಾರ ಆರಂಭಿಸಲಿದ್ದಾರೆ. ಬಳಿಕ ಶಿರಾ ಟೌನ್‌ಗೆ ಆಗಮಿಸಲಿದ್ದು ಅಲ್ಲಿ ಪ್ರಚಾರ ನಡೆಸಿ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಒಂದು ದಿನ ಮಾತ್ರ ಯಡಿಯೂರಪ್ಪ ಪ್ರಚಾರ ಮಾಡಲಿದ್ದಾರೆ.

ಪಕ್ಷಗಳ ಬಿರುಸಿನ ಪ್ರಚಾರ

ಪಕ್ಷಗಳ ಬಿರುಸಿನ ಪ್ರಚಾರ

ಶಿರಾ ಉಪ ಚುನಾವಣೆಗೆ ಬಹಿರಂಗ ಪ್ರಚಾರ ಭಾನುವಾರ ಅಂತ್ಯಗೊಳ್ಳಲಿದೆ. ಆದ್ದರಿಂದ, ವಿವಿಧ ಪಕ್ಷಗಳು ಬಿರುಸಿನ ಪ್ರಚಾರ ನಡೆಸುತ್ತಿವೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟಿ. ಬಿ. ಜಯಚಂದ್ರ ಪರವಾಗಿ, ಎಚ್. ಡಿ. ಕುಮಾರಸ್ವಾಮಿ ಅಮ್ಮಾಜಮ್ಮ ಪರವಾಗಿ ಗುರುವಾರ ಪ್ರಚಾರ ನಡೆಸುತ್ತಿದ್ದಾರೆ.

English summary
Chief Minister B.S. Yediyurappa campaign for Sira by elections on October 30, 2020. By election scheduled on November 3 and Dr. Rajesh Gowda party candidate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X