ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಷ್ಟ್ರಧ್ವಜದಲ್ಲಿ ಕಟ್ಟಿದ ವಾಮಾಚಾರದ ವಸ್ತುಗಳು ತಿಪಟೂರಲ್ಲಿ ಪತ್ತೆ

By ಕುಮಾರಸ್ವಾಮಿ
|
Google Oneindia Kannada News

ತಿಪಟೂರು, ಜುಲೈ 17 : ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಆಲ್ದೂರಿನಲ್ಲಿ ವಾಮಾಚಾರ ಮಾಡಿರುವುದು ಪತ್ತೆಯಾಗಿದ್ದು, ಅದಕ್ಕೆ ರಾಷ್ಟ್ರಧ್ವಜವನ್ನು ಬಳಸಿರುವುದು ಸ್ಥಳೀಯರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಮೈಸೂರಿನ ಸರಸ್ವತಿಪುರಂನ ಜನಕ್ಕೆ ಈಗ ವಾಮಾಚಾರದ ಭಯಮೈಸೂರಿನ ಸರಸ್ವತಿಪುರಂನ ಜನಕ್ಕೆ ಈಗ ವಾಮಾಚಾರದ ಭಯ

ದೇಶದ ಧ್ವಜವನ್ನು ಹರಿದು, ಅದರೊಳಗೆ ಕುಡಿಕೆ, ನಿಂಬೆಹಣ್ಣು, ಅರಿಶಿಣ-ಕುಂಕುಮ ಮುಂತಾದ ವಾಮಾಚಾರಕ್ಕೆ ಬಳಸುವ ವಸ್ತುಗಳನ್ನು ಕಟ್ಟಿದ್ದು, ಇಂಥ ಕೆಲಸ ಮಾಡುವುದೇ ನೀಚ ಕೃತ್ಯ. ಅದರಲ್ಲೂ ರಾಷ್ಟ್ರಧ್ವಜವನ್ನು ಅದಕ್ಕಾಗಿ ಬಳಕೆ ಮಾಡಿರುವುದರಿಂದ ಮತ್ತೂ ಕೋಪಕ್ಕೆ ಕಾರಣವಾಗಿದೆ.

Black magic objects found in torn national flag

ಕೆಲವು ಧೈರ್ಯವಂತ ಯುವಕರು ಧ್ವಜದಿಂದ ಮುಚ್ಚಿದ್ದ ವಸ್ತುಗಳನ್ನೆಲ್ಲ ಬೇರ್ಪಡಿಸಿ, ವಿಡಿಯೋವೊಂದನ್ನು ಕೂಡ ಮಾಡಿದ್ದು, ಇದರ ಹಿಂದೆ ಇರುವ ವ್ಯಕ್ತಿಗಳ ಬಂಧನಕ್ಕೆ ಆಗ್ರಹ ಮಾಡಿದ್ದಾರೆ. ಆಲ್ದೂರು ಗ್ರಾಮದಲ್ಲಿ ನಡೆದ ಈ ಘಟನೆ ಇಡೀ ಜಿಲ್ಲೆಯಾದ್ಯಂತ ಚರ್ಚೆಯನ್ನು ಹುಟ್ಟುಹಾಕಿದೆ.

ಗೋಣಿ ಚೀಲದಲ್ಲಿ ಬಾಲಕಿ ಶವ, ನಿಧಿಗಾಗಿ ಬಲಿ ನೀಡಿದರೆ?ಗೋಣಿ ಚೀಲದಲ್ಲಿ ಬಾಲಕಿ ಶವ, ನಿಧಿಗಾಗಿ ಬಲಿ ನೀಡಿದರೆ?

ಒಂದು ನಿರ್ದಿಷ್ಟ ಕೋಮಿನ ಬಗ್ಗೆಯೇ ಸ್ಥಳೀಯರು ಅನುಮಾನ ವ್ಯಕ್ತಪಡಿಸುತ್ತಿದ್ದು, ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ವಾಮಾಚಾರದಂಥ ಮೂಢನಂಬಿಕೆಗೆ ಪ್ರಾಶಸ್ತ್ಯ ಕೊಡಬಾರದು ಎಂಬ ಸಾಮಾನ್ಯ ತಿಳಿವಳಿಕೆ ಇದ್ದರೂ ವೈಯಕ್ತಿಕ ನೆಲೆಯಲ್ಲಿ ನಂಬಿಕೆ ಎಂಬುದು ಮುಖ್ಯ ಪಾತ್ರ ವಹಿಸುತ್ತದೆ.

Black magic objects found in torn national flag

ಈ ಬಗ್ಗೆ ತನಿಖೆಯೊಂದನ್ನು ಮಾಡಿ, ತಪ್ಪಿತಸ್ಥರ ಬಂಧಿಸಬೇಕು. ಜನರಲ್ಲಿನ ಅತಂಕವನ್ನು ನಿವಾರಿಸಬೇಕು.

English summary
Black magic objects found in torn national flag in Aldur village, Tiptur taluk, Tumakuru district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X