ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಲ್ಲೊಬ್ಬ ಮಾಧುಸ್ವಾಮಿ, ಇಲ್ಲೊಬ್ಬ ಸುರೇಶ್ ಗೌಡ, ಇಬ್ರೂ ಹುಚ್ಚರು: ಜೆಡಿಎಸ್ ಶಾಸಕ

|
Google Oneindia Kannada News

ತುಮಕೂರು, ಏ 5: ಚಿಕ್ಕನಾಯಕನಹಳ್ಳಿ ಬಿಜೆಪಿ ಶಾಸಕ ಮಾಧುಸ್ವಾಮಿ ವಿರುದ್ದ ತುಮಕೂರು ಗ್ರಾಮೀಣ ಕ್ಷೇತ್ರದ ಜೆಡಿಎಸ್ ಶಾಸಕ ಡಿ ಸಿ ಗೌರೀಶಂಕರ್ ಕಿಡಿಕಾರಿದ್ದಾರೆ. ಆ ಮಾಧುಸ್ವಾಮಿ ಹಿಂದೆ ಎಲ್ಲೋ ವಾಚ್ ಮ್ಯಾನ್ ಆಗಿದ್ದ ಅನಿಸುತ್ತೆ, ಅದಕ್ಕೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾನೆ ಎಂದು ಏಕವಚನದಲ್ಲಿ ಮಾಧುಸ್ವಾಮಿ ವಿರುದ್ದ ಹರಿಹಾಯ್ದಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

'ಲೇ.. ಮಾಧುಸ್ವಾಮಿ, ಬರ್ತೀಯಾ.. ವೋಟ್ ಕೇಳ್ತೀಯಾ.. ಹೋಗ್ತೀಯಾ, ಅದು ಬಿಟ್ಟು ನಮ್ಮ ನಾಯಕರ ವಿರುದ್ದ ಬಾಯಿಗೆ ಬಂದಂತೆ ಮಾತನಾಡಿದರೆ, ಸರಿ ಇರೋಲ್ಲಾ.. ನೋಡು' ಎಂದು ಗೌರೀಶಂಕರ್ ಎಚ್ಚರಿಕೆ ನೀಡಿದ್ದಾರೆ. ಉತ್ತಮ ಸಂಸದೀಯ ಪಟು ಆಗಬೇಕಾದರೆ, ಎಲ್ಲಿ ಯಾವಾಗ ಏನು ಮಾತನಾಡಬೇಕು, ಯಾರಿಗೆ ಗೌರವ ಕೊಟ್ಟು ಮಾತನಾಡಬೇಕು ಎನ್ನುವುದನ್ನು ಮೊದಲು ಕಲಿ ಎಂದು ಗೌರೀಶಂಕರ್, ಮಾಧುಸ್ವಾಮಿ ವಿರುದ್ದ ವಾಕ್ ಪ್ರಹಾರ ನಡೆಸಿದ್ದಾರೆ.

ಮಂಡ್ಯ, ಮೈಸೂರು, ಹಾಸನ, ತುಮಕೂರು: ಈಗಿನ ರಾಜಕೀಯ ಚಿತ್ರಣ ಹೇಗಿದೆ?ಮಂಡ್ಯ, ಮೈಸೂರು, ಹಾಸನ, ತುಮಕೂರು: ಈಗಿನ ರಾಜಕೀಯ ಚಿತ್ರಣ ಹೇಗಿದೆ?

ಅಲ್ಲೊಬ್ಬ ಮಾಧುಸ್ವಾಮಿ, ಇಲ್ಲೊಬ್ಬ ಸುರೇಶ್ ಗೌಡ, ಇಬ್ಬರೂ ಹುಚ್ಚರು. ಆ ಯಡಿಯೂರಪ್ಪ ಬೇರೆ, ತುಮಕೂರು ಲೋಕಸಭಾ ಚುನಾವಣೆಯ ಉಸ್ತುವಾರಿಯನ್ನು ಮಾಧುಸ್ವಾಮಿಗೆ ವಹಿಸಿದ್ದಾರೆ. ನಿಮ್ಮ ಕೆಲಸ ಏನು ಅದನ್ನು ಮಾಡಿಕೊಂಡು ಹೋಗಿ, ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದು ಗೌರೀಶಂಕರ್, ಇಬ್ಬರು ತುಮಕೂರು ಬಿಜೆಪಿ ಮುಖಂಡರಿಗೆ ವಾರ್ನಿಂಗ್ ಕೊಟ್ಟಿದ್ದಾರೆ.

BJP Leader Madhuswamy and Suresh Gowda, both are mad politicians: JDS MAL DC Gowrishankar

ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಗೌರೀಶಂಕರ್, ಬಿಜೆಪಿಯ ಸುರೇಶ್ ಗೌಡ ವಿರುದ್ದ 5,640 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಇತ್ತೀಚೆಗೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಮಾಧುಸ್ವಾಮಿ, ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ದ ತೀವ್ರ ಅವಹೇಳನಕಾರಿ ಮಾತನ್ನು ಆಡಿದ್ದರು.

ನಾಲ್ಕು ಸುತ್ತು ಕೇಸರಿ ಕೋಟೆ: ಮಲ್ಲಿಕಾರ್ಜುನ ಖರ್ಗೆಗೆ ಗೆಲುವು ಸುಲಭದ ತುತ್ತಲ್ಲ ನಾಲ್ಕು ಸುತ್ತು ಕೇಸರಿ ಕೋಟೆ: ಮಲ್ಲಿಕಾರ್ಜುನ ಖರ್ಗೆಗೆ ಗೆಲುವು ಸುಲಭದ ತುತ್ತಲ್ಲ

ಬಿಜೆಪಿ ಅಭ್ಯರ್ಥಿ ಜಿ ಎಸ್ ಬಸವರಾಜು ಪರವಾಗಿ ಮತಯಾಚನೆ ಮಾಡುತ್ತಾ ಜೆ ಮಾಧುಸ್ವಾಮಿ, ಜೆಡಿಎಸ್ ವರಿಷ್ಠರಿಗೆ ನನ್ನ ಮೇಲೆ ಸಿಟ್ಟು ಯಾಕೆ ಅಂದರೆ, ನಾನು ಈ ಹಿಂದೆ, ತುಮಕೂರಿನಲ್ಲಿ ಮಾತನಾಡುತ್ತಾ ರಾಧಿಕಾ ಇಲ್ಲಿಯ ಅಭ್ಯರ್ಥಿ ಆಗಬಹುದು ಎನ್ನುವ ಹೇಳಿಕೆಯನ್ನು ನೀಡಿದ್ದೆ. ರಾಧಿಕಾ ಬಂದರೆ ಸ್ವಲ್ಪ ಹುಡುಗರು ಓಡಾಡಬಹುದು, ಆದರೆ ರಾಧಿಕಾ ಬದಲು ದೇವೇಗೌಡ್ರು ಬಂದ್ ಬಿಟ್ರಲ್ಲಪ್ಪಾ ಎಂದಿದ್ದೆ. ಅದಕ್ಕೆ ನನ್ನ ಮೇಲೆ ದೇವೇಗೌಡ್ರು ಮತ್ತು ಕುಮಾರಸ್ವಾಮಿಗೆ ಸಿಟ್ಟು ಎಂದು ಮಾಧುಸ್ವಾಮಿ ಹೇಳಿದ್ದರು.

ಯಾರು ಕುಬೇರರು, ಯಾರು ಕುಚೇಲರು? ಆಸ್ತಿಪಾಸ್ತಿ ವಿವರ ಬೇಕೆ?

ಹೇಮಾವತಿ ನದಿನೀರಿನ ವಿಚಾರದಲ್ಲಿ ದೇವೇಗೌಡ್ರು ನಾನೇ ಎಲ್ಲಾ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಅವರ ಜೊತೆ ಡಿಬೇಟ್ ಗೆ ಸಿದ್ದನಿದ್ದೇನೆ. ಮುಖ್ಯಮಂತ್ರಿಗಳು ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಂಬರ್ ಇಲ್ಲದ ಅಂಬಾಸಡರ್ ಕಾರ್ ನಲ್ಲಿ, ಭದ್ರತೆ ಇಲ್ಲದೇ ಓಡಾಡುತ್ತಿದ್ದಾರೆ, ಹೌದಾ ಎಂದು ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಕೇಳಿದ್ದೆ. ಏ.. ಮಾಧು.. ಹಳ್ಳಿಯಿಂದ ಬಂದು ಏನೇನೋ ಮಾತಾಡ್ತೀಯಾ ಎಂದು ಡಿ ಕೆ ಶಿವಕುಮಾರ್ ಕೂಡಾ ನನ್ನ ಆವಾಗ ಗದರಿಸಿದ್ದರು ಎಂದು ಮಾಧುಸ್ವಾಮಿ, ಕಾರ್ಯಕರ್ತರ ಸಭೆಯಲ್ಲಿ ಹೇಳಿದ್ದರು.

English summary
BJP Leader and Chikkanayakanahally MLA Madhuswamy and Suresh Gowda, both are mad politicians: Tumkuru rural JDS MAL DC Gowrishankar statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X