• search
  • Live TV
ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಇಸ್ಪೀಟ್ ಆಟ ತಡೆಯಲು ಹೋದ ಪೊಲೀಸ್ ಮೇಲೆ ಹಲ್ಲೆ

|

ತುಮಕೂರು, ಏಪ್ರಿಲ್ 22: ಇಸ್ಪೀಟ್ ಆಟ ಆಡುವುದನ್ನು ತಡೆಯಲು ಹೋದ ಪೊಲೀಸರ ತಲೆಗೆ ದುಷ್ಕರ್ಮಿಗಳು ಒಡೆದು, ಗಂಭೀರವಾಗಿ ಗಾಯಗೊಳಿಸಿದ ಘಟನೆ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಜಾನಕಲ್ಲು ಗ್ರಾಮದಲ್ಲಿದಲ್ಲಿ ನಡೆದಿದೆ.

ಜಾನಕಲ್ಲು ಗ್ರಾಮದ ಕೆರೆಯಂಗಳದಲ್ಲಿ ಜೂಜಾಡುತ್ತಿದ್ದರು. ಜೂಜಾಟ ತಡೆಯಲು ಹೋಗಿದ್ದಕ್ಕೆ ಪೊಲೀಸ್ ಪೇದೆ ಮಂಜುನಾಥ್ ಗೆ ಗ್ರಾಮಸ್ಥರು ಒಡೆದಿದ್ದಾರೆ. ಸದ್ಯ ಪೇದೆ ಮಂಜುನಾಥ್ ಗೆ ಶಿರಾ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಲಕ್ನೋ: ಲಾಕ್‌ಡೌನ್ ಉಲ್ಲಂಘಿಸಿದವರಿಗೆ ಆರತಿ ಎತ್ತಿ ಹಣ್ಣು ಕೊಟ್ಟ ಪೊಲೀಸರು

ಗ್ರಾಮದ ಒಟ್ಟು ಹನ್ನೆರಡಕ್ಕೂ ಹೆಚ್ಚು ಮಂದಿ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. ಕಲಂ ನಂ 143, 148, 323, 324, 332, 307, 353, 149 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ವೀರೂಪಾಕ್ಷ, ಶರಣಪ್ಪ, ಚಂದ್ರಶೇಖರ್ ಮತ್ತಿತರರ ಬಂಧನವಾಗಿದ್ದು, ಶಿರಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
The villagers have Assault on Manjunath, a policeman, for trying to stop gambling In sira Taluk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X