ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಂಪೇಗೌಡರನ್ನು ಮಹೀಂದ್ರ ಕುಟುಂಬಕ್ಕೆ ಸ್ವಾಗತಿಸಿದ ಆನಂದ್ ಮಹೀಂದ್ರ

|
Google Oneindia Kannada News

ತುಮಕೂರು, ಜನವರಿ 28; ತುಮಕೂರಿನ ಯುವ ರೈತ ಕೆಂಪೇಗೌಡನನ್ನು ಮಹೀಂದ್ರ ಕಂಪನಿ ಅಧ್ಯಕ್ಷ ಆನಂದ್ ಮಹೀಂದ್ರ ಮಹೀಂದ್ರ ಕುಟುಂಬಕ್ಕೆ ಸ್ವಾಗತಿಸಿದ್ದಾರೆ. ಕೆಂಪೇಗೌಡರ ಬೇಡಿಕೆಯಂತೆ ಬೋಲೆರೋ ವಾಹನ ಅವರ ಕೈ ಸೇರಿದೆ.

ಸಾಮಾಜಿಕ ತಾಲತಾಣದಲ್ಲಿ ಸಕ್ರಿಯರಾಗಿರುವ ಆನಂದ್ ಮಹೀಂದ್ರ ಶುಕ್ರವಾರ ರಾತ್ರಿ ಕೆಂಪೇಗೌಡರನ್ನು ಕುಟುಂಬಕ್ಕೆ ಬರಮಾಡಿಕೊಂಡು ಟ್ವೀಟ್ ಮಾಡಿದ್ದಾರೆ. ತುಮಕೂರಿನ ಕಾರು ಶೋ ರೂಂ ಸೇಲ್ಸ್ ಏಜೆಂಟ್‌ಗಳು ರೈತ ಕೆಂಪೇಗೌಡನಿಗೆ ಮಾಡಿದ ಅವಮಾನ ಭಾರೀ ಸುದ್ದಿಯಾಗಿತ್ತು.

ರಾಮನಪಾಳ್ಯ ಶೋ ರೂಂನಲ್ಲಿ ನಡೆದ ಘಟನೆ ಬಗ್ಗೆ ಜನವರಿ 25ರಂದು ಮಹೀಂದ್ರ ಕಂಪನಿ ಅಧ್ಯಕ್ಷ ಆನಂದ್ ಮಹೀಂದ್ರ ಟ್ವೀಟ್ ಮಾಡಿ ಪ್ರತಿಕ್ರಿಯೆ ನೀಡಿದ್ದರು. ಘಟನೆ ಕುರಿತು ಈಗಾಗಲೇ ಕಂಪನಿ ತನಿಖೆ ನಡೆಸುತ್ತಿದೆ.

ತುಮಕೂರಲ್ಲಿ ರೈತನಿಗೆ ಅವಮಾನ; ಟ್ವೀಟ್ ಮಾಡಿದ ಆನಂದ್ ಮಹೀಂದ್ರ!ತುಮಕೂರಲ್ಲಿ ರೈತನಿಗೆ ಅವಮಾನ; ಟ್ವೀಟ್ ಮಾಡಿದ ಆನಂದ್ ಮಹೀಂದ್ರ!

Anand Mahindra Welcomes Tumakuru Farmer Kempegowda To Mahindra Family

ಶೋ ರೂಂಗೆ ಬೋಲೆರೋ ವಾಹನ ಖರೀದಿಗೆ ಹೋಗಿದ್ದ ರೈತ ಕೆಂಪೇಗೌಡನಿಗೆ ಅವಮಾನ ಮಾಡಲಾಗಿತ್ತು. ಬಳಿಕ ಕೆಂಪೇಗೌಡ ಒಂದೇ ಗಂಟೆಯಲ್ಲಿ 10 ಲಕ್ಷ ರೂ.ಗಳನ್ನು ತಂದು ಸಿಬ್ಬಂದಿ ಮುಂದಿಟ್ಟು ವಾಹನ ನೀಡುವಂತೆ ಪಟ್ಟು ಹಿಡಿದಿದ್ದ. ಶುಕ್ರವಾರ ಅವರಿಗೆ ವಾಹನವನ್ನು ನೀಡಲಾಗಿದೆ.

ತುಮಕೂರು; ಕಾರು ಶೋ ರೂಂ ಸಿಬ್ಬಂದಿಗೆ ಪಾಠ ಕಲಿಸಿದ ಯುವ ರೈತ!ತುಮಕೂರು; ಕಾರು ಶೋ ರೂಂ ಸಿಬ್ಬಂದಿಗೆ ಪಾಠ ಕಲಿಸಿದ ಯುವ ರೈತ!

ಘಟನೆಯ ವಿವರ; ತುಮಕೂರು ತಾಲೂಕಿನ ಹೆಬ್ಬೂರು ಹೋಬಳಿಯ ರೈತ ಕೆಂಪೇಗೌಡ ಬೋಲೆರೋ ಗೂಡ್ಸ್ ವಾಹನ ಬುಕ್ ಮಾಡಲು ಹೋಗಿದ್ದರು. ಆಗ ರೈತನ ಬಟ್ಟೆ ನೋಡಿ ಸೇಲ್ಸ್ ಏಜೆಂಟ್‌ಗಳು ಅವಮಾನ ಮಾಡಿದ್ದರು. 10 ರೂ. ಕೊಡುವ ಯೋಗ್ಯತೆ ಇಲ್ಲ ವಾಹನ ಬುಕ್ ಮಾಡಲು ಬಂದಿದ್ದಾರೆ ಎಂದು ಸುಮಾರು ಅರ್ಧ ಗಂಟೆಗಳ ಕಾಲ ಕಿಚಾಯಿಸಿದ್ದರು.

ಜನವರಿ 21ರಂದು ಈ ಘಟನೆ ನಡೆದಿತ್ತು. ಸೇಲ್ಸ್‌ ಏಜೆಂಟ್‌ಗಳ ಅವಮಾನದಿಂದ ಹಠಕ್ಕೆ ಬಿದ್ದ ಕೆಂಪೇಗೌಡ ಒಂದು ಗಂಟೆಯಲ್ಲಿ 10 ಲಕ್ಷ ರೂ. ತಂದು ವಾಹನ ಈಗಲೇ ಕೊಡಿ ಎಂದು ಪಟ್ಟು ಹಿಡಿದು ಕುಳಿತರು. ತಮ್ಮ ತಪ್ಪಿನ ಅರಿವಾಗಿ ಶೋ ರೂಂ ಸಿಬ್ಬಂದಿ ವಾಹನ ಎರಡು ದಿನದಲ್ಲಿ ನೀಡುವುದಾಗಿ ವಾಪಸ್ ಕಳಿಸಿದ್ದರು, ಅವರ ಕ್ಷಮೆ ಸಹ ಕೇಳಿದ್ದರು.

ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಶೋ ರೂಂ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಈ ಘಟನೆ ಬಗ್ಗೆ ಆನಂದ್ ಮಹೀಂದ್ರ ಮತ್ತು ಸಿಇಒ ವಿಜಯ್ ನಕ್ರಾ ಟ್ವೀಟ್ ಮೂಲಕ ಪ್ರತಿಕ್ರಿಯೆ ಕೊಟ್ಟಿದ್ದರು.

ಸಿಇಓ ವಿಜಯ್ ನಕ್ರಾ ತಮ್ಮ ಟ್ವೀಟ್‌ನಲ್ಲಿ, "ಗ್ರಾಹಕರಿಗೆ ಅತ್ಯುತ್ತಮ ಅನುಭವ ಒದಗಿಸಬೇಕು ಎನ್ನುವ ನಮ್ಮ ಪ್ರಯತ್ನದಲ್ಲಿ ಡೀಲರ್‌ಗಳ ಪಾತ್ರ ಅತಿ ಮುಖ್ಯ. ನಮ್ಮ ಗ್ರಾಹಕರನ್ನು ಗೌರವ ಮತ್ತು ಘನತೆಯಿಂದ ಕಾಣಬೇಕು ಎನ್ನುವುದು ನಮ್ಮ ನಿಯಮ. ಘಟನೆಯ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ. ಸೂಕ್ತ ಕ್ರಮ ಕೈಗೊಳ್ಳುತ್ತೇವೆ" ಎಂದು ಭರವಸೆ ನೀಡಿದ್ದರು.

ಇಂದು ಮಹೀಂದ್ರ ಆಟೋಮೊಟೀವ್ ಕೆಂಪೇಗೌಡರಿಗೆ ವಾಹನ ಡೆಲಿವರಿ ನೀಡಿದ ಬಗ್ಗೆ ಟ್ವೀಟ್ ಮಾಡಿದೆ. "ಜನವರಿ 21ರಂದು ನಮ್ಮ ಡೀಲರ್ ಬಳಿ ಕೆಂಪೇಗೌಡ ಮತ್ತು ಆತನ ಸ್ನೇಹಿತರು ಬಂದಾಗ ನಡೆದ ಘಟನೆಗೆ ನಾವು ವಿಷಾದ ವ್ಯಕ್ತಪಡಿಸುತ್ತೇವೆ. ನಾವು ಭರವಸೆ ನೀಡಿದಂತೆ ಘಟನೆ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ" ಎಂದು ಹೇಳಿದೆ.

"ಮಹೀಂದ್ರ ಆಯ್ಕೆ ಮಾಡಿದ್ದಕ್ಕಾಗಿ ನಾವು ಕೆಂಪೇಗೌಡರಿಗೆ ಧನ್ಯವಾದ ಅರ್ಪಿಸುತ್ತೇವೆ. ನಾವು ಅವರನ್ನು ಮಹೀಂದ್ರ ಕುಟುಂಬಕ್ಕೆ ಸ್ವಾಗತಿಸುತ್ತೇವೆ" ಎಂದು ಟ್ವೀಟ್ ಮಾಡಲಾಗಿದೆ.

ಜನವರಿ 25ರಂದು ಆನಂದ್ ಮಹೀಂದ್ರ ಟ್ವೀಟ್ ಮಾಡಿ, "ಮಹೀಂದ್ರ ಕಂಪನಿಯ ಮುಖ್ಯ ಉದ್ದೇಶವೇ ನಮ್ಮ ಸಮುದಾಯಗಳು ಮತ್ತು ಎಲ್ಲ ಸಹಭಾಗಿಗಳಿಗೆ ಶಕ್ತಿ ತುಂಬುವುದು. ವ್ಯಕ್ತಿಯ ಘನತೆ ಎತ್ತಿಹಿಡಿಯುವುದು ನಮ್ಮ ಸಂಸ್ಥೆಯ ಉದ್ದೇಶ. ಈ ಮೌಲ್ಯದೊಂದಿಗೆ ರಾಜಿ ಆಗುವುದು ಅಥವಾ ನಮ್ಮ ನೀತಿಗಳಿಂದ ದೂರ ಹೋಗುವ ಯಾವುದೇ ಬೆಳವಣಿಗೆಯನ್ನು ಅತ್ಯಂತ ಗಂಭೀರವಾಗಿ ಮತ್ತು ತುರ್ತಾಗಿ ಗಮನಿಸುತ್ತೇವೆ" ಎಂದು ಹೇಳಿದ್ದರು.

ಕನ್ನಡದ 'ದಿಗ್ಗಜರು' ಸಿನಿಮಾದ ದೃಶ್ಯದಂತೆ ನಡೆದ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಂತಿಮವಾಗಿ ಕೆಂಪೇಗೌಡ ಕೈಗೆ ವಾಹನ ಸಿಕ್ಕಿದೆ. ವ್ಯಕ್ತಿಯ ಬಟ್ಟೆ ನೋಡಿ ಅವಮಾನ ಮಾಡಿದ ಶೋ ರೂಂ ಸಿಬ್ಬಂದಿ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕಾದು ನೋಡಬೇಕಿದೆ.

English summary
Anand Mahindra welcomed Tumakuru farmer Kempegowda to Mahindra family. Kempegowda in a news after humiliation at SUV showroom at Tumakuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X