ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜಕೀಯ ಮನ್ವಂತರಕ್ಕೆ ಮುನ್ನುಡಿ ಹಾಡಲಿದೆ ಆಮ್ ಆದ್ಮಿ ಪಕ್ಷ

|
Google Oneindia Kannada News

ತುಮಕೂರು, ಜೂನ್ 23: ಆಮ್ ಆದ್ಮಿ ಪಕ್ಷವು ಕರ್ನಾಟಕ ರಾಜ್ಯದಲ್ಲಿ ಅವಿರತವಾಗಿ ಪಕ್ಷ ಸಂಘಟನೆ ಬಲಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದ್ದು, ರಾಜ್ಯಾದ್ಯಂತ ಪಕ್ಷ ಸಂಘಟನೆಯ ಪುನರ್‌ ರಚನೆ ಮಾಡುತ್ತಿದೆ.

ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಚುನಾವಣೆಗಳಿಗೆ ಪಕ್ಷವು ಎಂಟು ತಿಂಗಳುಗಳಿಂದ ಸಿದ್ಧತೆ ನಡೆಸುತ್ತಿದ್ದು, ಇದರ ಅಂಗವಾಗಿ ತುಮಕೂರುನಲ್ಲಿಯೂ ಫೆಬ್ರವರಿ 10ರಂದು ಪಕ್ಷದ ಮಿಸ್ಡ್‌ಕಾಲ್ ನಂ ಅನ್ನು ಪಕ್ಷದ ರಾಜ್ಯ ಉಸ್ತುವಾರಿ ರೋಮಿ ಭಾಟಿಯವರು ಬಿಡುಗಡೆ ಮಾಡಿದ್ದರು. ಈ ಮಿಸ್ಡ್ ಕಾಲ್ ನಂಬರ್‌ಗೆ ತುಮಕೂರು ಜಿಲ್ಲೆಯಲ್ಲಿ ಅತ್ಯುತ್ತಮ ಸ್ಪಂದನೆ ದೊರಕಿದೆ.

ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಚುನಾವಣೆಗಳಿಗೆ ಪಕ್ಷವನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ತುಮಕೂರು ಜಿಲ್ಲೆಗೆ ಪಕ್ಷದ ವೀಕ್ಷಕರನ್ನಾಗಿ ಪಕ್ಷದ ಹಿರಿಯ ಮುಖಂಡ ಬಿದನಗೆರೆ. ಟಿ. ನಾಗಣ್ಣರನ್ನು ನೇಮಕ ಮಾಡಲಾಗಿದೆ ಮತ್ತು ಪಕ್ಷದ ತುಮಕೂರು ನಗರ ಘಟಕದ ಅಧ್ಯಕ್ಷರನ್ನಾಗಿ ತುಮಕೂರಿನ ಪ್ರಸಿದ್ಧ ಸಮಾಜ ಸೇವಕ, ಉದ್ಯಮಿ ಮುನೀರ್ ಅಹಮದ್‌ರನ್ನು ನೇಮಕ ಮಾಡಲಾಯಿತು. ನೂತನ ಪದಾಧಿಕಾರಿಗಳಿಗೆ ನೇಮಕಾತಿ ಪತ್ರವನ್ನು ಪಕ್ಷದ ರಾಜ್ಯ ಉಸ್ತುವಾರಿ ರೋಮಿ ಭಾಟಿ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿಯವರು ನೀಡಿದರು.

Aam Aadmi Party Restructured Of Tumkur District Unit

ನಾಗಣ್ಣನ ಪರಿಚಯ
ನಾಗಣ್ಣ ಹೆಸರಾಂತ ಉದ್ಯಮಿಯಾಗಿದ್ದು, ಹಲವಾರು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಹಿಂದೆ ಜೆಡಿಎಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿಯೂ ರಾಜಕೀಯ ಅನುಭವ ಹೊಂದಿರುವ ನಾಗಣ್ಣ, ಕಳೆದ ೨ ವರ್ಷಗಳಿಂದ ಆಮ್ ಆದ್ಮಿ ಪಕ್ಷ ಬೆಂಗಳೂರು ಜಿಲ್ಲಾ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಮುನೀರ್ ಪರಿಚಯ
ಮನೀರ್ ಅಹಮದ್ ಕಳೆದ ಇಪ್ಪತ್ತು ವರ್ಷಗಳಿಂದ ತುಮಕೂರು ನಗರದ ಮನೆಮಾತಾಗಿರುವ ಉದ್ಯಮಿ. ಅನೇಕ ಸಮಾಜ ಸೇವಾ ಸಂಘಟನೆಗಳಲ್ಲಿ ಸಕ್ರಿಯವಾಗಿರುವ ಮುನೀರ್‌ರಿಗೆ ತುಮಕೂರು ನಗರದಲ್ಲಿ ಪಕ್ಷದ ಜವಾಬ್ದಾರಿಯನ್ನು ವಹಿಸಲಾಗಿದೆ.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, "ಇನ್ನು ಕೆಲವೇ ದಿನಗಳಲ್ಲಿ ತುಮಕೂರು ಜಿಲ್ಲಾ ಘಟಕದ ಪುನರ್‌ ರಚನೆಯನ್ನೂ ಮಾಡಲಾಗುವುದು. ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷವು ಸಹಾಯವಾಣಿಯನ್ನು ಆರಂಭಿಸಿ, ಈ ಸಂಕಷ್ಟದ ಸಮಯದಲ್ಲಿ ಆಮ್ ಆದ್ಮಿ ಪಕ್ಷ ರಾಜ್ಯದ ಜನತೆಯ ಸೇವೆಗಾಗಿ ಏಪ್ರಿಲ್ 29ರಂದು ರಂದು ವೈದ್ಯಕೀಯ ನೆರವು, ಮಾರ್ಗದರ್ಶನ ನೀಡಲು ಆರಂಭಿಸಿತು.''

Aam Aadmi Party Restructured Of Tumkur District Unit

46 ನುರಿತ ವೈದ್ಯರು, 12 ಮನೋವೈದ್ಯರು, ಕರೆ ಸ್ವೀಕರಿಸಲು 60 ಕಾರ್ಯಕರ್ತರನ್ನು ಈ ಸಹಾಯವಾಣಿ ತಂಡ ಹೊಂದಿತ್ತು. ಹೋಂ ಐಸೋಲೇಶನ್ ರೋಗಿಗಳಿಗೆ ನೆರವಾಗಲು ಮಹಾಮಾರಿಯ ವಿರುದ್ಧ ಹೋರಾಟ (Action Against Pandemic) ಎಂಬ ಜನಸ್ನೇಹಿ ಅಭಿಯಾನವನ್ನು ಆರಂಭಿಸಿತು. ಈ ಅಭಿಯಾನದ ಮೂಲಕ ದಿನದ 24 ಗಂಟೆಯೂ ರೋಗಿಗಳಿಗೆ ಉಚಿತ ಆಕ್ಸಿಮೀಟರ್ ವಿತರಣೆ, ವೈದ್ಯಕೀಯ ನೆರವು, ಕೌನ್ಸಿಲಿಂಗ್, ಹೋಂ ಐಸೋಲೇಶನ್ ನೆರವು ನೀಡಲಾಯಿತು.

"ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷದ ಒಬ್ಬನೇ ಒಬ್ಬ ಶಾಸಕರಿಲ್ಲದೇ ಹೋದರೂ ಪಕ್ಷ ತನ್ನ ಜವಾಬ್ದಾರಿಯನ್ನು ಅರಿತು ಈ ಸಂಕಷ್ಟದ ಸಮಯದಲ್ಲಿ ರಾಜ್ಯದಾದ್ಯಂತ ಜನರ ನಡುವೆ ನಿಂತು, ಜನಪರವಾಗಿ ಕೆಲಸ ಮಾಡಿದ ಆಮ್ ಆದ್ಮಿ ಪಕ್ಷದ ಅಸಂಖ್ಯ ಕಾರ್ಯಕರ್ತರು ಮತ್ತು ಮುಖಂಡರು ಅವಿರತವಾಗಿ ಯಾವುದೇ ಫಲಾಪೇಕ್ಷೆ ಇಲ್ಲದೇ ಜನರ ನಡುವೆ ಕೆಲಸ ಮಾಡುತ್ತಿದ್ದಾರೆ,'' ಎಂದು ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ತಿಳಿಸಿದರು.

"ತುಮಕೂರಿನಲ್ಲಿಯೂ ಲಾಕ್‌ಡೌನ್ ಸಂದರ್ಭದಲ್ಲಿ ಅಗತ್ಯವಿದ್ದ ರೋಗಿಗಳಿಗೆ ಆಕ್ಸಿಮೀಟರ್ ವಿತರಣೆ, ಮಾಸ್ಕ್ ವಿತರಣೆ, ಹೋಂ ಐಸೋಲೇಶನ್ ನೆರವು ಇತ್ಯಾದಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಪಕ್ಷದ ತುಮಕೂರು ಜಿಲ್ಲೆಯ ಕಾರ್ಯಕರ್ತರಿಗೆ ಪಕ್ಷ ತುಂಬು ಹೃದಯದ ಧನ್ಯವಾದಗಳನ್ನು ಸಮರ್ಪಿಸುತ್ತದೆ. ಹಾಗೂ ಕಾಯಾ- ವಾಚಾ- ಮನಸಾ ಈ ಸೇವೆಯನ್ನು ಮುಂದುವರಿಸಿಕೊಂಡು ಹೋಗಲಿದ್ದೇವೆ.''

ಈ ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ತುಮಕೂರು ವೀಕ್ಷಕ ಬಿ.ಟಿ ನಾಗಣ್ಣ, ತುಮಕೂರು ನಗರ ಘಟಕದ ಅಧ್ಯಕ್ಷ ಮುನೀರ್ ಅಹಮದ್ ಉಪಸ್ಥಿತರಿದ್ದರು.

English summary
Aam Aadmi Party is actively working to strengthen the party organization in Karnataka state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X