ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತುಮಕೂರಲ್ಲಿ ಬೆಡಗಿಯರಿಗೆ ಬುಲ್ ಬುಲ್ ಎಂದರೆ ಬೆತ್ತದ ಏಟು ಪಕ್ಕಾ!

|
Google Oneindia Kannada News

ತುಮಕೂರು, ಜನವರಿ.28: ತುಮಕೂರಿನಲ್ಲಿ ತುಂಡ್ ಹೈಕ್ಳು ಇನ್ಮುಂದೆ ಬಾಲ ಬಿಚ್ಚುವ ಹಾಗಿಲ್ಲ. ನಾಗರಹಾವು ಸಿನಿಮಾದ ಅಂಬರೀಶ್ ಸ್ಟೈಲ್ ನಲ್ಲಿ ಹುಡುಗಿಯರಿಗೆ ಲೈನ್ ಹೊಡೆಯುವ ಹಾಗಿಲ್ಲ. ಅಪ್ಪಿತಪ್ಪಿ ಕಾಲರ್ ಮೇಲೆ ಎತ್ತಿ ಬೆಡಗಿಯರಿಗೆ ಬುಲ್ ಬುಲ್ ಎಂದರೆ ಬೆತ್ತದ ಏಟು ಬೀಳುವುದು ಪಕ್ಕಾ.

Recommended Video

ಅವರ ದುಡ್ಡಲ್ಲಿ ಫ್ರೀ ಊಟ ಮಾಡೊ ನಮ್ಮದು ಒಂದು ಜನ್ಮಾನ..? | SWIGGY | ZOMATO | UBEREATS | DUNZO | DELIVERY BOY

ಕರ್ನಾಟಕದಲ್ಲೇ ಫಸ್ಟ್ ಟೈಮ್ ತುಮಕೂರಿನಲ್ಲಿ ಮಹಿಳಾ ರಕ್ಷಣಾ ಪಡೆ ರಚನೆಯಾಗಿದೆ. ಕಾಲೇಜುಗಳ ಮುಂದೆ ನಿಂತು ಹುಡ್ಗೀರ ಮುಂದೆ ಪೋಸ್ ಕೊಡುವ ಪೋಕರಿಗಳಿಗೆ ಪಾಠ ಕಲಿಸಲು ಕಲ್ಪತರು ಮಹಿಳಾ ಟೀಮ್ ಸನ್ನದ್ಧವಾಗಿದೆ.

ಬೆಂಗಳೂರಲ್ಲಿ ಹೆಣ್ಣುಮಕ್ಕಳ ರಕ್ಷಣೆಗೆ ಸಿದ್ಧಗೊಂಡಿದೆ ಓಬವ್ವ ಪೊಲೀಸ್ ಪಡೆಬೆಂಗಳೂರಲ್ಲಿ ಹೆಣ್ಣುಮಕ್ಕಳ ರಕ್ಷಣೆಗೆ ಸಿದ್ಧಗೊಂಡಿದೆ ಓಬವ್ವ ಪೊಲೀಸ್ ಪಡೆ

ತುಮಕೂರಿನಲ್ಲಿ ಮಹಿಳೆಯರು ಮತ್ತು ಯುವತಿಯರ ರಕ್ಷಣೆಗೆ ವಿಶೇಷ ಒತ್ತು ನೀಡಲಾಗುತ್ತಿದೆ. ಜಿಲ್ಲಾ ಪೊಲೀಸರು ರಚಿಸಿರುವ ಕಲ್ಪತರು ಮಹಿಳಾ ವಿಶೇಷ ಕಾರ್ಯಪಡೆಯನ್ನು ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ಬೆತ್ತ ಹಿಡಿದು ನಿಂತಿದೆ.

ಭರ್ಜರಿ ತರಬೇತಿ ಪಡೆದ ವಿಶೇಷ ಕಾರ್ಯಪಡೆ

ಭರ್ಜರಿ ತರಬೇತಿ ಪಡೆದ ವಿಶೇಷ ಕಾರ್ಯಪಡೆ

ತುಮಕೂರಿನಲ್ಲಿ ಕಲ್ಪತರು ಮಹಿಳಾ ಪೊಲೀಸ್ ಪಡೆಗೆ ವಿಶೇಷ ತರಬೇತಿಯನ್ನು ನೀಡಲಾಗುತ್ತಿದೆ. ಪ್ರತಿದಿನ ಯೋಗಾಭ್ಯಾಸದ ಜೊತೆಗೆ ನುರಿತ ಕರಾಟೆ ತರಬೇತುದಾರರಿಂದ ತರಬೇತಿ ನೀಡಲಾಗುತ್ತದೆ. ಇದರ ಜೊತೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಂದ ಥಿಯರಿ ಕ್ಲಾಸ್ ತೆಗೆದುಕೊಳ್ಳಲಾಗುತ್ತಿದೆ.

ಕಾಲೇಜಿಗೆ ಸ್ಪಷಲ್ ಟೀಮ್ ಭೇಟಿ, ಯುವತಿಯರಿಗೆ ತರಬೇತಿ

ಕಾಲೇಜಿಗೆ ಸ್ಪಷಲ್ ಟೀಮ್ ಭೇಟಿ, ಯುವತಿಯರಿಗೆ ತರಬೇತಿ

ಇನ್ನು, ಕಲ್ಪತರು ಮಹಿಳಾ ಪಡೆಯು ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿನಿಯರಿಗೆ ಹಾಗೂ ಕಾಲೇಜು ಯುವತಿಯರಿಗೆ ಸ್ವಯಂ ರಕ್ಷಣೆ ಬಗ್ಗೆ ತರಬೇತಿ ನೀಡುತ್ತಿದೆ. ಕಿಡಿಗೇಡಿಗಳಿಂದ ತಪ್ಪಿಸಿಕೊಳ್ಳುವುದು ಹೇಗೆ ಮತ್ತು ದಾಳಿಗೆ ಪ್ರತಿದಾಳಿಯೊಡ್ಡುವುದು ಹೇಗೆ ಎಂಬುದರ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.

80 ಮಹಿಳಾ ಸಿಬ್ಬಂದಿ ಆಯ್ಕೆ ಮಾಡಿದ ಪೊಲೀಸರು

80 ಮಹಿಳಾ ಸಿಬ್ಬಂದಿ ಆಯ್ಕೆ ಮಾಡಿದ ಪೊಲೀಸರು

ತುಮಕೂರು ಜಿಲ್ಲೆಯಾದ್ಯಂತ ಕಾರ್ಯ ನಿರ್ವಹಿಸಲು ನಾಲ್ಕು ವಿಭಾಗಳ ಕಲ್ಪತರು ಕಾರ್ಯಪಡೆಯನ್ನು ರಚನೆ ಮಾಡಲಾಗಿದೆ. ಅದಕ್ಕಾಗಿ 80 ಮಹಿಳಾ ಸಿಬ್ಬಂದಿಯನ್ನು ಆಯ್ಕೆ ಮಾಡಲಾಗಿದೆ. ಈ ಕಾರ್ಯಪಡೆಯು ಬಾಲಕಿಯರಿಗೆ ವೈಯಕ್ತಿಕ ಸುರಕ್ಷತೆ ಕಾಪಾಡುವುದು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಎಚ್ಚರಿಕೆ ವಹಿಸುವ ಬಗ್ಗೆ ಜಾಗೃತಿ ಮೂಡಿಸಲಿದೆ. ಇದರ ಜೊತೆಗೆ ಕಾಮುಕರ ಕಾಟಕ್ಕೆ ಬ್ರೇಕ್ ಹಾಕಲಿದೆ.

ಪ್ರತ್ಯೇಕ ವಾಹನದ ಜೊತೆಗೆ ಫೀಲ್ಡ್ ಗೆ ಇಳಿಯಲಿದೆ ಟೀಮ್

ಪ್ರತ್ಯೇಕ ವಾಹನದ ಜೊತೆಗೆ ಫೀಲ್ಡ್ ಗೆ ಇಳಿಯಲಿದೆ ಟೀಮ್

ತುಮಕೂರು ನಗರ, ಶಿರಾ, ತಿಪಟೂರು, ಮತ್ತು ಕುಣಿಗಲ್ ಹೀಗೆ ನಾಲ್ಕು ವಿಭಾಗಕ್ಕೆ 8 ಪ್ರತ್ಯೇಕ ಮಹಿಳಾ ಪೊಲೀಸ್ ಸಿಬ್ಬಂದಿಯ ತಂಡವನ್ನು ರಚಿಸಲಾಗಿದೆ. ಪ್ರತಿ ತಂಡದಲ್ಲಿರುವ ಮಹಿಳಾ ಸಿಪಿಐಯನ್ನು ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದ್ದು, ತಂಡಕ್ಕೆ ಪ್ರತ್ಯೇಕ ವಾಹನ ಹಾಗೂ ಸಮವಸ್ತ್ರ ಕೂಡ ನೀಡಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೋನವಂಶಿ ಕೃಷ್ಣ ಈ ಯೋಜನೆ ರೂವಾರಿಯಾಗಿದ್ದು, ಕಲ್ಪತರು ಪಡೆಯು ಮಹಿಳಾ ರಕ್ಷಣೆ ಜವಾಬ್ದಾರಿ ಬಗ್ಗೆ ಗಮನಿಸುವಂತೆ ಸೂಚನೆ ನೀಡಲಾಗಿದೆ.

English summary
A Special Kalpataru Police Team Form In Tumkur For Women Security.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X