ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರಟಗೆರೆ: ಕೋಳಿ ತಿನ್ನಲು ಬಂದು ಶೆಡ್‌ನಲ್ಲಿ ಬಂಧಿಯಾದ ಚಿರತೆ

|
Google Oneindia Kannada News

ತುಮಕೂರು, ಜೂನ್ 16: ಆಹಾರ ಅರಸಿ ಊರಿಗೆ ಬಂದ ಚಿರತೆಯೊಂದಕ್ಕೆ ಭೂರಿ ಭೋಜನವೇ ಸಿಕ್ಕಿದೆ.

ಕೊರಟಗೆರೆ ತಾಲ್ಲೂಕಿನ ತುಂಬಾಡಿ ಗ್ರಾಮಕ್ಕೆ ಶುಕ್ರವಾರ ರಾತ್ರಿ ಬಂದಿದ್ದ ಚಿರತೆ ಕೋಳಿ ಶೆಡ್‌ಗೆ ನುಗ್ಗಿತ್ತು. ನೂರಾರು ಕೋಳಿಗಳಿದ್ದ ಶೆಡ್‌ನಲ್ಲಿ ಕೆಲವೊಂದಿಷ್ಟು ಕೋಳಿಗಳು ಚಿರತೆಗೆ ಆಹಾರವಾದವು.

ಮೈಸೂರು: ಬೀದಿ ನಾಯಿಗಳಿಗೆ ಹೆದರಿ ಮರವೇರಿ ಕುಳಿತ ಚಿರತೆಮೈಸೂರು: ಬೀದಿ ನಾಯಿಗಳಿಗೆ ಹೆದರಿ ಮರವೇರಿ ಕುಳಿತ ಚಿರತೆ

ಬೆಳಿಗ್ಗೆ ಶೆಡ್‌ ಬಳಿ ಬಂದ ಮಾಲೀಕರಿಗೆ ಒಳಗೆ ಚಿರತೆ ಇರುವುದು ಕಂಡುಬಂದಿದೆ. ಕೂಡಲೇ ಅಲ್ಲಿ ಜಮಾಯಿಸಿದ ಸ್ಥಳೀಯರು ಶೆಡ್ ಬಾಗಿಲು ಹಾಕಿ ಚಿರತೆಯನ್ನು ಕೂಡಿ ಹಾಕಿದ್ದಾರೆ.

A leopard was immured koratagere of tumkur

ಶೆಡ್‌ನ ಬೇಲಿನ ಕಬ್ಬಿಣದ ಶೀಟ್ ಸಂದಿಯಿಂದ ಒಳಗೆ ಬಂದಿದ್ದ ಚಿರತೆ, ಈಗ ಕಿಟಕಿಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದು, ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.

ಹಾಸನದಿಂದ ಅರಣ್ಯ ಇಲಾಖೆಯ ನುರಿತ ಸಿಬ್ಬಂದಿ ತಂಡ ಚಿರತೆಯನ್ನು ಸೆರೆಹಿಡಿಯಲು ಬರುತ್ತಿದೆ. ಸ್ಥಳದಲ್ಲಿ ಪೊಲೀಸರು, ಅರಣ್ಯಾಧಿಕಾರಿಗಳು ಚಿರತೆ ದಾಳಿ ನಡೆಸುವ ಅಪಾಯವಿರುವುದರಿಂದ ಜನರನ್ನು ನಿಯಂತ್ರಿಸುವ ಪ್ರಯತ್ನದಲ್ಲಿದ್ದಾರೆ.

English summary
A leopard which came to a village for food was immured in a shed by villagers in Koratagere of Tumakur district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X