ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತುಮಕೂರು; ಮೇಕೆಗಳಿಗೂ ಕ್ವಾರಂಟೈನ್, ಕೊರೊನಾ ಪರೀಕ್ಷೆ!

|
Google Oneindia Kannada News

ತುಮಕೂರು, ಜೂನ್ 30 : ಕುರಿಗಾಹಿಯೊಬ್ಬರಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ. ಈ ಹಿನ್ನಲೆಯಲ್ಲಿ ಮೇಕೆಗಳನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದ್ದು, ಅವುಗಳಿಗೆ ಕೊರೊನಾ ವೈರಸ್ ಸೋಂಕು ಪರೀಕ್ಷೆ ನಡೆಸಲಾಗುತ್ತದೆ.

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಡೆಕೆರೆ ಗೊಲ್ಲರಹಟ್ಟಿಯ ಕುರಿಗಾಹಿಯೊಬ್ಬರಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಮೇಕೆಗಳಿಗೆ ಪರೀಕ್ಷೆ ಮಾಡಿಸುವಂತೆ ಶಾಸಕ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಜೆ. ಸಿ. ಮಾಧುಸ್ವಾಮಿ ಸೂಚನೆ ನೀಡಿದ್ದಾರೆ.

ಅಮೆರಿಕದಲ್ಲಿ ಹುಲಿ ಆಯ್ತು, ಈಗ ಸಾಕು ಬೆಕ್ಕಿಗೂ ಕೊರೊನಾ ಸೋಂಕುಅಮೆರಿಕದಲ್ಲಿ ಹುಲಿ ಆಯ್ತು, ಈಗ ಸಾಕು ಬೆಕ್ಕಿಗೂ ಕೊರೊನಾ ಸೋಂಕು

ಕುರಿಗಾಹಿಗೆ ಜ್ವರ ಬಂದಿತ್ತು ಸ್ನೇಹಿತರೊಬ್ಬರು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಜೂನ್ 23ರಂದು ಅವರಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿತ್ತು. ಸ್ನೇಹಿತನನ್ನು ಈಗ ಕ್ವಾರಂಟೈನ್‌ನಲ್ಲಿ ಇಡಲಾಗಿದೆ.

ಹುಲಿಗೂ ಬಂತು ಕೊರೊನಾ, ಜಗತ್ತಿನಲ್ಲಿ ಮೊದಲ ಪ್ರಾಣಿ ಕೇಸ್?ಹುಲಿಗೂ ಬಂತು ಕೊರೊನಾ, ಜಗತ್ತಿನಲ್ಲಿ ಮೊದಲ ಪ್ರಾಣಿ ಕೇಸ್?

Goats Under Quarantine In Chikkanayakanahalli

ಜ್ವರ ಬಂದಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ ವ್ಯಕ್ತಿಯ ಮನೆಯಲ್ಲಿ ಏಕಾಏಕಿ 5 ಮೇಕೆಗಳು ಮೃತಪಟ್ಟಿವೆ. ಇದರಿಂದಾಗಿ ಗ್ರಾಮಸ್ಥರಲ್ಲಿ ಆತಂಕ ಮೂಡಿದೆ. ಆರೋಗ್ಯವಾಗಿದ್ದ ಮೇಕೆಗಳು ಮೃತಪಡಲು ಕಾರಣ ತಿಳಿದುಬಂದಿಲ್ಲ.

 ಇನ್ಮುಂದೆ ಬೆಂಗಳೂರಿಗೆ ಹೋಗಿ ಬಂದರೂ ಕೊರೊನಾ ಟೆಸ್ಟ್ ಕಡ್ಡಾಯ ಇನ್ಮುಂದೆ ಬೆಂಗಳೂರಿಗೆ ಹೋಗಿ ಬಂದರೂ ಕೊರೊನಾ ಟೆಸ್ಟ್ ಕಡ್ಡಾಯ

ಕುರಿಗಾಹಿಗೆ ಸೇರಿದ 43 ಮೇಕೆಗಳನ್ನು ಜಕ್ಕನಹಳ್ಳಿಗೆ ಕರೆದುಕೊಂಡು ಹೋಗಲಾಗಿದ್ದು ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಕೊರೊನಾ ವೈರಸ್ ಇದುವರೆಗೂ ಕುರಿ, ಮೇಕೆಗಳಿಂದ ಹರಡಿದೆ ಎಂಬ ವರದಿ ಇಲ್ಲ. ಆದರೂ ಪರೀಕ್ಷೆ ಮಾಡಲು ತೀರ್ಮಾನಿಸಲಾಗಿದೆ.

ತುಮಕೂರು ಜಿಲ್ಲೆಯಲ್ಲಿ ಸೋಮವಾರ 18 ಹೊಸ ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 93ಕ್ಕೆ ಏರಿಕೆಯಾಗಿದೆ.

English summary
43 Goats under quarantine in Chikkanayakanahalli Tumakuru district after man who looking the goats tested positive for COVID - 19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X