ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಗಿಣಿ, ಸಂಜನಾ ಜಾಮೀನಿಗಾಗಿ ಬಾಂಬ್ ಬೆದರಿಕೆ ಪ್ರಕರಣ: ಆರೋಪಿಗಳು ವಶಕ್ಕೆ

By ತುಮಕೂರು ಪ್ರತಿನಿಧಿ
|
Google Oneindia Kannada News

ತುಮಕೂರು, ಅಕ್ಟೋಬರ್ 20: ಸ್ಯಾಂಡಲ್ ವುಡ್ ನಟಿಯರಾದ ರಾಗಿಣಿ ಮತ್ತು ಸಂಜನಾಗೆ ಜಾಮೀನು ಕೊಡದಿದ್ದರೆ, ಬಾಂಬ್ ಹಾಕುತ್ತೇವೆ ಎಂದು ಪತ್ರ ಬರೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಡ್ರಗ್ಸ್ ಕೇಸಿನಲ್ಲಿ ಅರೆಸ್ಟ್ ಆಗಿರುವ ನಟಿಯರಾದ ರಾಗಿಣಿ ಮತ್ತು ಸಂಜನಾ ಅವರಿಗೆ ಜಾಮೀನು ನೀಡದೆ ಇದ್ದರೆ, ಸಿಟಿ ಸಿವಿಲ್ ಕೋರ್ಟ್ ಮತ್ತು ಕಮೀಷನರ್ ಆಫೀಸಿಗೆ ಬಾಂಬ್ ಹಾಕುತ್ತೇವೆ ಎಂದು ನಿನ್ನೆ ಬೆದರಿಕೆ ಪತ್ರವನ್ನು ಬರೆಯಲಾಗಿತ್ತು. ಜೊತೆಗೆ ಸಿಟಿ ಸಿವಿಲ್ ಕೋರ್ಟ್ ನ್ಯಾಯಾಧೀಶ, ಕಮೀಷನರ್ ಕಮಲ್ ಪಂಥ್, ಜಂಟಿ ಪೊಲೀಸ್ ಆಯುಕ್ತ, ಸಂದೀಪ್ ಪಾಟೀಲ್ ಮತ್ತು ಡಿಸಿಪಿ ರವಿಕುಮಾರ್ ಅವರಿಗೆ ಪತ್ರ ಬರೆದಿದ್ದರು.

ಸಂಜನಾ, ರಾಗಿಣಿಗೆ ಜಾಮೀನು ನೀಡದಿದ್ದರೆ ಸ್ಫೋಟ: ತುಮಕೂರಿಂದ ಬಂದ ಬೆದರಿಕೆ ಪತ್ರಸಂಜನಾ, ರಾಗಿಣಿಗೆ ಜಾಮೀನು ನೀಡದಿದ್ದರೆ ಸ್ಫೋಟ: ತುಮಕೂರಿಂದ ಬಂದ ಬೆದರಿಕೆ ಪತ್ರ

ಈಗ ಎನ್.ಡಿ.ಪಿ.ಎಸ್ ಕೋರ್ಟ್ ನ್ಯಾಯಾಧೀಶರಿಗೆ ಬಾಂಬ್ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಿಪಟೂರು ಮೂಲದ ರಾಜಶೇಖರ್ ಹಾಗೂ ಗುಬ್ಬಿ ತಾಲ್ಲೂಕು ಹಾಗಲವಾಡಿ ಮೂಲದ ವೇದಾಂತ ಎಂಬುವವರನ್ನು ಬಂಧನ ಮಾಡಲಾಗಿದೆ.

4 Arrested By Police Over Magistrate Gets Threat Letter Demanding Bail for Ragini And Sanjjana

ಕುಟುಂಬ ಕಲಹದ ದ್ವೇಷ ಕಾರಣದಿಂದ ಬಾಂಬ್ ಬೆದರಿಕೆ ಹಾಕಲಾಗಿದೆ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ. ರಾಜಶೇಖರ್ ಹಾಗೂ ರಮೇಶ್ ಇಬ್ಬರು ಒಂದೇ ಕುಟುಂಬದಲ್ಲಿ ಮದುವೆಯಾಗಿದ್ದರು.

ರಮೇಶ್ ಗೆ ತೊಂದರೆ ಕೊಡಲೆಂದೇ ರಾಜಶೇಖರ್ ಪತ್ರ ಬರೆದಿದ್ದಾರೆ ಎನ್ನಲಾಗಿದೆ. ರಾಜಶೇಖರ್ ಹಾಗೂ ರಮೇಶ್ ನಡುವೆ ಆಸ್ತಿ ವಿಚಾರವಾಗಿ ಬಹಳ ದಿನಗಳಿಂದ ಜಗಳವಿತ್ತು.

ರಮೇಶ್ ನನ್ನು ಸಿಲುಕಿಸಲು ರಾಜಶೇಖರ್ ಪ್ಲಾನ್ ಮಾಡಿ ಪತ್ರ ಬರೆದಿದ್ದಾನೆ. ರಾಜಶೇಖರ್ ಅವರು ವೇದಾಂತ್ ಎಂಬುವವನ ಕೈಯಲ್ಲಿ ಪತ್ರ ಬರೆಸಿ, ಚೇಳೂರು ಅಂಚೆ ಕಚೇರಿಯಿಂದ ಪೋಸ್ಟ್ ಮಾಡಿದ್ದಾನೆ.

English summary
Sandalwood Drug Case: Magistrate gets threat letter demanding bail for Ragini Dwivedi and Sanjjana Galrani; Police Arrested 4 accused in the case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X