ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತುಮಕೂರಿನ 25 ವರ್ಷಗಳ ಹಿಂದಿನ ಕೊಲೆ ಪ್ರಕರಣ: ಆರೋಪಿ ಸಿಕ್ಕಿಬಿದ್ದಿದ್ಹೇಗೆ?

|
Google Oneindia Kannada News

ತುಮಕೂರು, ಫೆಬ್ರವರಿ 18: ಸುಮಾರು 25 ವರ್ಷಗಳ ಹಿಂದಿನ ಪ್ರಕರಣವನ್ನು ಕೊನೆಗೂ ತುಮಕೂರು ಪೊಲೀಸರು ಬೇಧಿಸಿದ್ದಾರೆ.

1994ರಲ್ಲಿ ನಡೆದ ಕೊಲೆಯ ಆರೋಪಿಯನ್ನು ಈಗ ಬಂಧಿಸಿದ್ದಾರೆ. ತುಮಕೂರಿನ ಕೊರಟಗೆರೆಯಲ್ಲಿ 1994ರಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿತ್ತು. ಪೊಲೀಸರಿಗೆ ಈತನೇ ಆರೋಪಿ ಎಂದು ಗೊತ್ತಿದ್ದರೂ ಬಂಧಿಸಲು ಸಾಧ್ಯವಾಗಿರಲಿಲ್ಲ. 1997ರಲ್ಲಿ ಪ್ರಕರಣ ಅಂತ್ಯ ಕಂಡಿತ್ತು.

ಎಫ್‌ಐಆರ್ ಏನೋ ದಾಖಲಿಸಿದ್ದರು, ಆದರೆ ಆತ ನಾಪತ್ತೆಯಾಗಿದ್ದಾನೆ ಎಂದು ಪ್ರಕರಣವನ್ನು ಮುಚ್ಚಿಹಾಕಲಾಗಿತ್ತು.

ಬಳ್ಳಾರಿಯಲ್ಲಿ ಮಗಳ ಕಾಲುಕಟ್ಟಿ ಕಾಲುವೆಗೆ ಎಸೆದ ತಂದೆಬಳ್ಳಾರಿಯಲ್ಲಿ ಮಗಳ ಕಾಲುಕಟ್ಟಿ ಕಾಲುವೆಗೆ ಎಸೆದ ತಂದೆ

ಆದರೆ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ವಂಶಿಕೃಷ್ಣ ಇದೀಗ ಬಾಕಿ ಇರುವ ಪ್ರಕರಣಗಳನ್ನು ಕೈಗೆತ್ತಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

25 Year Old Murder Case Accused Arrested

ಈ ವೇಳೆ ಕರಕಲಘಟ್ಟ ಈರಮಲ್ಲಮ್ಮ ಕೊಲೆ ಪ್ರಕರಣವನ್ನು ಕೈಗೆತ್ತಿಕೊಳ್ಳುವಂತೆ ಸಿಪಿಐ ನದಾಫ್, ಪಿಎಸ್‍ಐ ಮಂಜುನಾಥ್‌ಗೆ ಸೂಚಿಸಿದ್ದರು. ಅವರ ಸೂಚನೆಯಂತೆ ಪ್ರಕರಣ ಬೆನ್ನತ್ತಿ ಹೊರಟ ನದಾಫ್ ಮತ್ತು ಮಂಜುನಾಥ್ ನೇತೃತ್ವದ ತಂಡ ಆರೋಪಿ ಸಿದ್ದಹನುಮಯ್ಯನನ್ನು ಬಂಧಿಸುವಲ್ಲಿ ಕೊನೆಗೂ ಯಶಸ್ವಿಯಾಗಿದೆ.

ಹೆಸರನ್ನೂ ಬದಲಿಸಿಕೊಂಡಿದ್ದ:ಪ್ರಕರಣದ ತನಿಖೆ ನಡೆಸಿದ ಸಿಪಿಐ ನದಾಫ್ ಹಾಗೂ ತಂಡಕ್ಕೆ ಆಶ್ಚರ್ಯಕರ ವಿಚಾರವೊಂದು ತಿಳಿದಿತ್ತು. ಕೆಎಎಸ್ ಅಂತಲೇ ಕರಕಲಘಟ್ಟದಲ್ಲಿ ಫೇಮಸ್ ಆಗಿದ್ದ ಸಿದ್ದಹನುಮಯ್ಯ, ಈರಮಲ್ಲಮ್ಮ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ ನಂತರ ಅವಳ ಮೈಮೇಲಿದ್ದ ಚಿನ್ನಾಭರಣ ದೋಚಿ ಹಲವು ವೇಷ, ಭಾಷೆಗಳ ಮೂಲಕ ತಲೆ ಮರೆಸಿಕೊಂಡು ಮುಂಬೈ ಸೇರಿದ್ದ.

ಲಾರಿ ಕ್ಲೀನರ್ ಆಗಿದ್ದ ಆತ ಕೆಲ ವರ್ಷಗಳ ಬಳಿಕ ಕೊಪ್ಪಳ ನಗರಕ್ಕೆ ಬಂದು ಸಿದ್ದಹನುಮಯ್ಯ ಬದಲಿಗೆ ಸಿರಾಜ್ ಎಂಬ ಹೆಸರು ಹೇಳಿಕೊಂಡು ಮುಸ್ಲಿಂ ಮಹಿಳೆಯನ್ನು ಮದುವೆಯಾಗಿದ್ದ ಅದೆಲ್ಲವೂ ತನಿಖೆ ವೇಳೆ ಬಹಿರಂಗಗೊಂಡಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.

English summary
The Tumkur police have finally interrogated the case almost 25 years ago.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X