ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

1,200 ಎಕರೆ ಭೂಹಗರಣ, 51 ಜನರ ವಿರುದ್ಧ ಎಫ್‌ಐಆರ್

|
Google Oneindia Kannada News

ತುಮಕೂರು, ಆ.14 : ನಕಲಿ ದಾಖಲೆಗಳನ್ನು ಸೃಷ್ಟಿಸಿ ಸುಮಾರು 1,200 ಎಕರೆ ಸರ್ಕಾರಿ ಭೂಮಿಯನ್ನು ಕಾನೂನು ಬಾಹಿರವಾಗಿ ಮಂಜೂರಾತಿ ಮಾಡಿರುವ ಪ್ರಕರಣವೊಂದು ತುಮಕೂರಿನಲ್ಲಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ತಹಶೀಲ್ದಾರ್ ಸೇರಿದಂತೆ 51 ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಲೋಕಾಯುಕ್ತರ ನಿರ್ದೇಶನದ ಹಿನ್ನಲೆಯಲ್ಲಿ ತುಮಕೂರು ಜಿಲ್ಲಾಧಿಕಾರಿಗಳು ಮಧುಗಿರಿ ತಹಶೀಲ್ದಾರ್ ಕೆ.ರಮೇಶ್ ಅವರಿಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಸೂಚನೆ ನೀಡಿದ್ದರು. ಈ ಜಮೀನು ಅಕ್ರಮ ಪರಭಾರೆ ಪ್ರಕರಣದ ಕುರಿತು ರಮೇಶ್ ಅವರು ಬಡವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

land scam

1200 ಎಕರೆ ಸರ್ಕಾರಿ ಭೂಮಿಯನ್ನು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ 245 ಜನರಿಗೆ ಅಕ್ರಮವಾಗಿ ಮಂಜೂರು ಮಾಡಲಾದ ದೊಡ್ಡ ಪ್ರಕರಣವಿದಾಗಿದ್ದು, ಈ ಹಗರಣದಲ್ಲಿ 8 ತಹಶೀಲ್ದಾರ್, 25 ಕಂದಾಯ ಇಲಾಖೆ ಅಧಿಕಾರಿಗಳು, 18 ಕಂದಾಯ ಇಲಾಖೆ ಸಿಬ್ಬಂದಿ ಸೇರಿದಂತೆ ಒಟ್ಟು 51 ಅಧಿಕಾರಿಗಳು ಭಾಗಿಯಾಗಿದ್ದಾರೆ.

ಅಕ್ರಮ ನಡೆದಿದ್ದು ಎಲ್ಲಿ : ಮಧುಗಿರಿ ತಾಲೂಕಿನ ದೊಡ್ಡೇರಿ ಹೋಬಳಿ ಮತ್ತು ಸುತ್ತಮುತ್ತಲಿನ ಸರ್ಕಾರಿ ಜಮೀನನ್ನು 245 ಜನರಿಗೆ ಅಕ್ರಮವಾಗಿ ಮಂಜೂರು ಮಾಡಿ ಸಾಗುವಳಿ ಚೀಟಿ ವಿತರಣೆ ಮಾಡಲಾಗಿತ್ತು. 2011ರಲ್ಲಿ ಈ ಅಕ್ರಮದ ಬಗ್ಗೆ ಮಧುಗಿರಿಯಲ್ಲಿ ಉಪ ವಿಭಾಗಾಧಿಕಾರಿಯಾಗಿದ್ದ ಅನುರಾಗ್ ತಿವಾರ್ ಅವರಿಗೆ ಸ್ಥಳೀಯರೊಬ್ಬರು ದೂರು ನೀಡಿದ್ದರು.

ದೂರಿನ ಅನ್ವಯ ತನಿಖೆ ನಡೆಸಿದ ಅನುರಾಗ್ ತಿವಾರಿಗೆ ಅವರಿಗೆ ಅಕ್ರಮ ನಡೆದಿರುವುದು ಖಚಿತವಾಗಿತ್ತು. ಅಕ್ರಮದ ಕುರಿತು ಅವರು ಲೋಕಾಯುಕ್ತ, ರಾಜ್ಯ ಸರ್ಕಾರ ಮತ್ತು ಜಿಲ್ಲಾಧಿಕಾರಿಗಳಿಗೆ ವರದಿ ನೀಡಿ, ಆರೋಪಿ ಅಧಿಕಾರಿಗಳ ವಿವರಗಳನ್ನು ನೀಡಿದ್ದರು ಮತ್ತು ಕ್ರಮ ತೆಗೆದುಕೊಳ್ಳಲು ಅನುಮತಿ ನೀಡಬೇಕೆಂದು ಕೋರಿದ್ದರು.

ಸದ್ಯ, ಬೆಂಗಳೂರಿನ ಲೋಕಾಯುಕ್ತ ಕಚೇರಿಯಿಂದ ಈ ಕುರಿತು ದೂರು ದಾಖಲಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದರು. ಅದರ ಅನ್ವಯ ದೂರು ದಾಖಲಾಗಿದ್ದು ಪೊಲೀಸರು 51 ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ತನಿಖೆ ನಂತರ ಅಕ್ರಮದ ಸಂಪೂರ್ಣ ಚಿತ್ರಣ ಲಭ್ಯವಾಗಲಿದೆ.

English summary
A land scam of 1,200 acres has come to light in Tumkur district Madhugiri Taluk. FIR has field in Badavanahalli Police station against 8 Tahsildar and 51 officers of revenue department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X