ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾಗಿಂತ ಝಿಕಾ ವೈರಸ್ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಿದೆ ಎಂದ ತಜ್ಞರು

|
Google Oneindia Kannada News

ತಿರುವನಂತಪುರಂ, ಜುಲೈ 15: ಕೇರಳದಲ್ಲಿ ಕೊರೊನಾ ಪ್ರಕರಣಗಳ ನಡುವೆ ಝಿಕಾ ಸೋಂಕಿನ ಪ್ರಕರಣಗಳ ಸಂಖ್ಯೆಯೂ ಏರಿಕೆಯಾಗುತ್ತಿದ್ದು, ಸದ್ಯ ರಾಜ್ಯದಲ್ಲಿ ಕೊರೊನಾಗಿಂತ ಝಿಕಾ ಸೋಂಕಿನ ಕುರಿತು ಹೆಚ್ಚು ಕಾಳಜಿ ವಹಿಸಬೇಕಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಮೌಲಾನಾ ಆಜಾದ್‌ ವೈದ್ಯಕೀಯ ಕಾಲೇಜಿನ ನಿರ್ದೇಶಕ ಹಾಗೂ ಪ್ರೊಫೆಸರ್ ಡಾ. ನರೇಶ್ ಗುಪ್ತಾ ಅವರು, ಝಿಕಾ ವೈರಸ್ ಹರಡುವಿಕೆಯ ಗಂಭೀರತೆ ಕುರಿತು ಆತಂಕ ವ್ಯಕ್ತಪಡಿಸಿದ್ದು, "ಈ ಬಗ್ಗೆ ಪ್ರಯೋಗಾಲಯ ವಿಶ್ಲೇಷಣೆ ನಡೆಯಬೇಕಿದೆ" ಎಂದು ಹೇಳಿದ್ದಾರೆ.

ಕೊರೊನಾ ನಡುವೆ, ಏನಿದು ಝಿಕಾ ವೈರಸ್? ಏನಿದರ ಲಕ್ಷಣ?ಕೊರೊನಾ ನಡುವೆ, ಏನಿದು ಝಿಕಾ ವೈರಸ್? ಏನಿದರ ಲಕ್ಷಣ?

"ಝಿಕಾ ವೈರಸ್ ಗಂಭೀರ ಕಾಳಜಿ ವಹಿಸಬೇಕಾದ ಸೋಂಕಾಗಿದೆ. ಇದು ಸ್ಥಳೀಯವಾಗಿ ಹರಡುತ್ತಿದ್ದು, ಸೋಂಕಿನ ನಿರ್ದಿಷ್ಟ ಸ್ಥಳಗಳಲ್ಲಿ ನಿಗಾ ವಹಿಸುವುದು ಅವಶ್ಯಕವಾಗಿದೆ. ಇದಕ್ಕೆ ಔಷಧ, ನಿರ್ದಿಷ್ಟ ಚಿಕಿತ್ಸೆಯೂ ಇಲ್ಲದ ಕಾರಣ ಸೋಂಕು ಹರಡದಂತೆ ತಡೆಯಬೇಕಿದೆ" ಎಂದು ಹೇಳಿದ್ದಾರೆ.

Zika Virus Has More Concerns Than Corona Says Medical Expert

ಗುರುವಾರ ಕೇರಳದಲ್ಲಿ ಮತ್ತೆ ಐದು ಝಿಕಾ ವೈರಸ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸಂಖ್ಯೆ 28ಕ್ಕೆ ಏರಿಕೆಯಾಗಿದೆ. ಏಕಾಏಕಿ ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಸಚಿವರು ಅಧಿಕಾರಿಗಳೊಂದಿಗೆ ಸೋಂಕು ನಿರ್ವಹಣೆ ಸಂಬಂಧ ತುರ್ತು ಸಭೆ ನಡೆಸಿದ್ದಾರೆ.

ಕೇರಳದಲ್ಲಿ 24 ವರ್ಷದ ಮಹಿಳೆಯೊಬ್ಬರಲ್ಲಿ ಮೊದಲು ಝಿಕಾ ಸೋಂಕಿನ ಪ್ರಕರಣ ಪತ್ತೆಯಾಗಿತ್ತು. ನಂತರ ಹತ್ತು ಜನರಲ್ಲಿ ವೈರಸ್ ಪತ್ತೆಯಾಗಿದ್ದು, ಇದೀಗ ಒಟ್ಟಾರೆ ಪ್ರಕರಣಗಳ ಸಂಖ್ಯೆ 28ಕ್ಕೆ ಏರಿಕೆಯಾಗಿದೆ. ಗರ್ಭಿಣಿಯರಿಗೆ ಈ ಸೋಂಕು ಅಪಾಯಕಾರಿ ಎನ್ನಲಾಗಿದೆ. ಈ ಸೋಂಕಿನಿಂದ ಮರಣ ಸಂಭವಿಸುವ ಸಾಧ್ಯತೆ ಕಡಿಮೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ.

English summary
An expert has warned that the mosquito-borne disease Zika virus which has been detected in kerala has more grave concerns than the coronavirus disease,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X