ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಪುರುಷರಿಗಿಂತ ಮಹಿಳೆಯರೇ ಗಟ್ಟಿ; ಆದರೆ ಇದು ಅವರಿಗೆ ಅರ್ಥವಾಗಿಲ್ಲ"

|
Google Oneindia Kannada News

ಕೊಚ್ಚಿ, ಮಾರ್ಚ್ 22: ಪುರುಷರಿಗಿಂತ ಮಹಿಳೆಯರೇ ಬಲಶಾಲಿಗಳು. ಆದರೆ ಅವರ ಶಕ್ತಿ ಎಷ್ಟಿದೆ ಎಂಬುದು ಅವರಿಗೇ ಅರ್ಥವಾಗದ ಕಾರಣ ಅವರನ್ನು ಮೂರ್ಖರನ್ನಾಗಿ ಮಾಡಲಾಗುತ್ತಿದೆ ಎಂದಿದ್ದಾರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ.

ಸೋಮವಾರ ಕೇರಳದ ಕೊಚ್ಚಿಯಲ್ಲಿನ ಸೇಂಟ್ ಟೆರೇಸಾ ಮಹಿಳಾ ಕಾಲೇಜಿಗೆ ಭೇಟಿ ನೀಡಿದ್ದ ಸಂದರ್ಭ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, "ಪುರುಷರು ಎಂದಿಗೂ ನಿಮ್ಮೊಂದಿಗೆ ಹಂಚಿಕೊಳ್ಳದ ರಹಸ್ಯವೊಂದನ್ನು ನಾನು ಹೇಳುತ್ತೇನೆ. ಪುರುಷರಿಗಿಂತ ಮಹಿಳೆಯರೇ ಹೆಚ್ಚು ಬಲಶಾಲಿಗಳು. ಆದರೆ ನಿಮ್ಮನ್ನು ಮೂರ್ಖರನ್ನಾಗಿ ಮಾಡಿದ್ದಾರೆ. ಮಹಿಳೆಯರಿಗೆ ತಮ್ಮ ಶಕ್ತಿ ಎಷ್ಟು ಕೆಲಸ ಮಾಡುತ್ತದೆ ಎಂಬುದು ಗೊತ್ತಿಲ್ಲ. ಎಲ್ಲಿಂದ ಆ ಶಕ್ತಿ ಬರುತ್ತದೆ ಎಂಬುದೂ ತಿಳಿದಿಲ್ಲ. ಇದೇ ಸಬಲೀಕರಣದ ಸಂಪೂರ್ಣ ಅಂಶ. ಅದನ್ನು ನೀವು ಅರ್ಥ ಮಾಡಿಕೊಳ್ಳಬೇಕಿದೆ" ಎಂದರು.

ಸಿಎಎ ರದ್ದು, 5 ಲಕ್ಷ ಮಂದಿಗೆ ಉದ್ಯೋಗ ಭರವಸೆ ಸಮರ್ಥಿಸಿಕೊಂಡ ಕಾಂಗ್ರೆಸ್ ಸಿಎಎ ರದ್ದು, 5 ಲಕ್ಷ ಮಂದಿಗೆ ಉದ್ಯೋಗ ಭರವಸೆ ಸಮರ್ಥಿಸಿಕೊಂಡ ಕಾಂಗ್ರೆಸ್

ಸಮಾಜದಲ್ಲಿ ಪುರುಷರು ಹಾಗೂ ಮಹಿಳೆಯರು ಸಮಾನರು ಎಂದು ವಿದ್ಯಾರ್ಥಿನಿಯೊಬ್ಬಳ ಹೇಳಿಕೆಯನ್ನು ತಳ್ಳಿಹಾಕಿದ ಅವರು, ಸಮಾಜ ದೂಷಿಸಿದಾಗ, ಮಹಿಳೆಯರು ಆಂತರಿಕ ಶಕ್ತಿಯನ್ನು ಒಟ್ಟುಗೂಡಿಸಿಕೊಳ್ಳುವ ಅಗತ್ಯವನ್ನು ವಿವರಿಸಿದರು.

Women Are More Powerful Than Men Said Rahul Gandhi

"ಸಮಾಜ ನಿಮ್ಮನ್ನು ತಳ್ಳುತ್ತದೆ. ಭಾರತದಲ್ಲಿ ಸಮಾಜವು ನಿಮ್ಮನ್ನು ಅತಿ ಕೆಟ್ಟದಾಗಿ ನಡೆಸಿಕೊಳ್ಳುತ್ತದೆ. ಪ್ರತಿ ದಿನವೂ ನಿಮಗೆ ಅವಮಾನ ಮಾಡುತ್ತದೆ. ನೀವು ಬೇಕೆಂದಿದ್ದನ್ನು ಮಾಡಲು ಬಿಡುವುದಿಲ್ಲ. ನಿಮ್ಮ ಮೇಲೆಯೇ ದಾಳಿ ಮಾಡುತ್ತದೆ. ಆದ್ದರಿಂದ ನೀವು ಆಂತರಿಕವಾಗಿ ಗಟ್ಟಿಯಾಗಿರಬೇಕಾಗುತ್ತದೆ. ನೀವು ಹೇಗೆ ತಳ್ಳಲ್ಪಟ್ಟಿರಿ ಎಂಬುದನ್ನು ಅರ್ಥೈಸಿಕೊಳ್ಳಬೇಕಾಗುತ್ತದೆ" ಎಂದು ವಿವರಿಸಿದರು.

ಕೇರಳದಲ್ಲಿ ಏಪ್ರಿಲ್ 6ರಂದು ವಿಧಾನಸಭೆ ಚುನಾವಣೆಗೆ ಮತದಾನ ನಡೆಯಲಿದ್ದು, ರಾಹುಲ್ ಗಾಂಧಿ ಎರಡು ದಿನ ರಾಜ್ಯ ಪ್ರವಾಸದಲ್ಲಿದ್ದಾರೆ.

English summary
Women are much more powerful than men but are being fooled by them as they do not understand how their power works, said Congress leader Rahul Gandhi in kochi,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X