ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂರು ತಿಂಗಳಲ್ಲಿ 350 ಆನ್‌ಲೈನ್ ಕೋರ್ಸ್ ಪೂರ್ಣಗೊಳಿಸಿದ ಕೇರಳದ ಯುವತಿ

|
Google Oneindia Kannada News

ತಿರುವನಂತಪುರಂ, ಅಕ್ಟೋಬರ್ 2: ಕೊರೊನಾ ಕಾರಣದಿಂದಾಗಿ ದೇಶದಲ್ಲಿ ಬಹುತೇಕ ಮಂದಿ ಕುಟುಂಬದೊಂದಿಗೆ ಕಾಲ ಕಳೆದಿದ್ದಾರೆ.

ಕೆಲವರು ಸಮಾಜಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಇನ್ನು ಕೆಲವರು ಲಾಕ್ ಡೌನ್ ಸಮಯವನ್ನು ಉಪಯುಕ್ತವಾಗಿ ಕಳೆಯುವ ಪ್ರಯತ್ನ ಮಾಡಿದ್ದರು. ಆದರೆ ಇಲ್ಲೊಬ್ಬರು ಯುವತಿ ಲಾಕ್ ಡೌನ್ ಸಮಯವನ್ನು ಸಂಪೂರ್ಣವಾಗಿ ಉಪಯೋಗಿಸಿಕೊಂಡಿದ್ದಾರೆ. ಅಂದರೆ ಮೂರು ತಿಂಗಳ ಅವಧಿಯಲ್ಲಿ 350 ಕೋರ್ಸ್ ಗಳನ್ನು ಪೂರ್ಣಗೊಳಿಸಿದ್ದಾರೆ.

3 ಆನ್‌ಲೈನ್ ಉಚಿತ ಕೋರ್ಸ್‌ಗಳನ್ನು ಆರಂಭಿಸಿದ ಇಸ್ರೋ3 ಆನ್‌ಲೈನ್ ಉಚಿತ ಕೋರ್ಸ್‌ಗಳನ್ನು ಆರಂಭಿಸಿದ ಇಸ್ರೋ

ಕೇರಳ ರಾಜ್ಯದ ಕೊಚ್ಚಿಯ ಆರತಿ ರೆಘುನಾಥ್ ಈ ಸಾಧನೆ ಮಾಡಿದ ಯುವತಿ. ದ್ವಿತೀಯ ವರ್ಷದ ಎಂಎಸ್ ಸಿ ಬಯೋಕೆಮಿಸ್ಟ್ರಿ ಪದವಿ ಕಲಿಯುತ್ತಿರುವ ಆರತಿ ಮೂರು ತಿಂಗಳಲ್ಲಿ 350 ಆನ್ ಲೈನ್ ಕೋರ್ಸುಗಳನ್ನು ಪೂರ್ಣಗೊಳಿಸಿದ್ದು, ವಿಶ್ವದಾಖಲೆ ಬರೆದಿದ್ದಾರೆ.

Woman Completes 350 Courses In 3 Months, Makes World Record

ಪ್ರತಿಷ್ಠಿತ ವಿಶ್ವವಿದ್ಯಾಲಯಗಳಾದ ಜಾನ್ ಹಾಕಿನ್ಸ್ ಯುನಿವರ್ಸಿಟಿ, ಯುನಿವರ್ಸಿಟಿ ಆಫ್ ವರ್ಜೀನಿಯಾ, ಯುನಿವರ್ಸಿಟಿ ಆಫ್ ಕೊಲೊರಾಡೋ ಬೌಲ್ಡರ್, ಯುನಿವರ್ಸಿಟಿ ಆಫ್ ನ್ಯೂಯಾರ್ಕ್, ಯುನಿವರ್ಸಿಟಿ ಆಫ್ ಡೆನ್ಮಾರ್ಕ್, ಯುನಿವರ್ಸಿಟಿ ಆಫ್ ಕೋಪನ್ ಹೆಗನ್ ಗಳ ಕೋರ್ಸುಗಳನ್ನು ಆರತಿ ಪೂರ್ಣಗೊಳಿಸಿದ್ದು, ವಿಶ್ವದಾಖಲೆ ಬರೆದಿದ್ದಾರೆ.

ಆನ್ ಲೈನ್ ಕೋರ್ಸ್ ಗಳ ಬಗ್ಗೆ ಕಾಲೇಜು ಉಪನ್ಯಾಸಕರಿಂದ ತಿಳಿದುಕೊಂಡಿದ್ದೆ. ಬಹಳಷ್ಟು ವಿಭಾಗದ ಕೋರ್ಸುಗಳಿವೆ. ಬೇರೆ ಅವಧಿಯ, ಬೇರೆ ಬೇರೆ ಪಠ್ಯಕ್ರಮದ ಕೋರ್ಸುಗಳಿವೆ. ಆದರೆ ಉಪನ್ಯಾಸಕರ ಸಹಾಯದಿಂದ ಅವುಗಳನ್ನು ಕಡಿಮೆ ಸಮಯದಲ್ಲಿ ಪೂರ್ಣಗೊಳಿಸಲು ಸಾಧ್ಯವಾಯಿತು ಎಂದು ಆರತಿ ಹೇಳಿಕೊಂಡಿದ್ದಾರೆ.

Recommended Video

KXIP ತಂಡದ ಪರಿಸ್ಥಿತಿ ಕೂಡ RCB ಹಾಗೆಯೇ ಆಗಿದೆ | Oneindia Kannada

English summary
Arathi Reghunath from Kerala second-year MSc Biochemistry student of MES College, completed 350 online courses in the last three months. The girl who resides in Elamakkara in Kochi made a world record at the Universal Record Forum.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X